ಎಮರ್ಜೆನ್ಸಿ ಸಿನಿಮಾ ರಿವ್ಯೂ: ಭಾರತದ ರಾಜಕೀಯದ ಅಸಲಿ ಸತ್ಯ ತೋರಿಸಿದ ಕಂಗನಾ ರಾಣಾವತ್!

Published : Jan 17, 2025, 11:48 AM IST
ಎಮರ್ಜೆನ್ಸಿ ಸಿನಿಮಾ ರಿವ್ಯೂ: ಭಾರತದ ರಾಜಕೀಯದ ಅಸಲಿ ಸತ್ಯ ತೋರಿಸಿದ ಕಂಗನಾ ರಾಣಾವತ್!

ಸಾರಾಂಶ

ಭಾರತದ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವದ ಮೇಲಾದ ಪರಿಣಾಮ, ರಾಜಕೀಯ ಘಟನೆಗಳು ಮತ್ತು ಅಧಿಕಾರದ ಕಷ್ಟಗಳನ್ನು 'ಎಮರ್ಜೆನ್ಸಿ' ಚಿತ್ರ ತೋರಿಸುತ್ತದೆ. ಕಂಗನಾ ರನೌತ್ ಅವರ ಅಭಿನಯ ಮತ್ತು ನಿರ್ದೇಶನ ಚಿತ್ರಕ್ಕೆ ವಿಶೇಷ ಮೆರಗು ನೀಡಿದೆ.

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಬಹು ನಿರೀಕ್ಷಿತ 'ಎಮರ್ಜೆನ್ಸಿ' ಚಿತ್ರ ತೆರೆಕಂಡಿದೆ. ಪ್ರಧಾನಮಂತ್ರಿ ಇಂದಿರಾ ಗಾಂಧಿ ಕಠಿಣ ಮತ್ತು ಸರ್ವಾಧಿಕಾರಿ ಆಡಳಿತದ ವೇಳೆ ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಯ ಕಾಲಘಟ್ಟವನ್ನ ಈ ಚಿತ್ರ ತೋರಿಸುತ್ತದೆ. ಆಗಿನ ಕಾಲದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಮೇಲಾದ ಪರಿಣಾಮ, ರಾಜಕೀಯ ಘಟನೆಗಳು ಮತ್ತು ಅಧಿಕಾರದ ಕಷ್ಟಗಳನ್ನೂ ಚಿತ್ರ ಒಳಗೊಂಡಿದೆ. ಕಂಗನಾ ಅವರ ಅಭಿನಯ ಮತ್ತು ನಿರ್ದೇಶನ ಚಿತ್ರಕ್ಕೆ ವಿಶೇಷ ಮೆರಗು ನೀಡಿದೆ. ಚಿತ್ರದ ರಿವ್ಯೂ ಇಲ್ಲಿದೆ..

'ಎಮರ್ಜೆನ್ಸಿ' ಚಿತ್ರದ ಕಥೆ ಏನು?
ಇಂದಿರಾ ಗಾಂಧಿ ಅವರ ಅಧಿಕಾರಾವಧಿಯ ಮಹತ್ವದ ಘಟನೆಗಳು, ವಿಶೇಷವಾಗಿ 21 ತಿಂಗಳ ತುರ್ತು ಪರಿಸ್ಥಿತಿಯ ಕಾಲವನ್ನ ಚಿತ್ರ ಒಳಗೊಂಡಿದೆ. ಈ ವೇಳೆ ಭಾರತದ ಜನರಿಗೆ ಸಾಂವಿಧಾನಿಕವಾಗಿ ನೀಡಲಾಗಿದ್ದ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿತ್ತು. ಜನರು ಮತವನ್ನು ಹಾಕಿದ ನಂತರ ಜನರ ಆಶೋತ್ತರಗಳನ್ನು ಈಡೇರಿಸುವ ಹಾಗೂ ಸಂವಿಧಾನಬದ್ಧವಾಗಿ ಆಡಳಿತ ಮಾಡುವುದಾಗಿ ಅಧಿಕಾರಕ್ಕೆ ಬಂದ ಸರ್ಕಾರ ತನ್ನ ಅಧಿಕಾರವನ್ನ ದುರುಪಯೋಗಪಡಿಸಿಕೊಂಡಿತ್ತು. ಇದನ್ನು ಜನರ ಕಣ್ಣಿಗೆ ಕಟ್ಟುವಂತೆ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮುಂದಿನ ನಡೆ ಏನು ಎಂಬುದನ್ನು ಎಲ್ಲಿಯೂ ಬೋರ್ ಆಗದಂತೆ ಕುತೂಹಲಕಾರಿಯಾಗಿ ಜನರ ಮುಂದೆ ಬಿಚ್ಚಿಡಲಾಗಿದೆ. ಇತಿಹಾಸದಲ್ಲಿ ಓದಲು ಸಿಗದ ಹಾಗೂ ಕೇವಲ ಕೆಲವರ ಬಾಯಿಗಳಿಂದ, ಭಾಷಣಗಳಿಂದ ಆಲಿಸುತ್ತಿದ್ದ ಇಂದಿರಾಗಾಂಧಿಯ ಎಲ್ಲ ಧೀಮಂತಿಕೆ, ಗಟ್ಟಿತನ ಹಾಗೂ ಕರಾಳತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: 'ಎಮರ್ಜೆನ್ಸಿ' ಸಿನಿಮಾಕ್ಕೆ ಪ್ರಿಯಾಂಕಾ ಗಾಂಧಿಗೆ ಕಂಗನಾ ಆಹ್ವಾನ: ಇಂದಿರಾ ಮೊಮ್ಮಗಳು ಹೇಳಿದ್ದೇನು ಕೇಳಿ...

ಇನ್ನು ಕೇವಲ ಎಮರ್ಜೆನ್ಸಿ ಘೋಷಣೆ ವೇಳೆ ನಡೆದ ದೃಶ್ಯಾವಳಿಯ ಜೊತೆಗೆ ಇಂದಿರಾಗಾಂಧಿ ಅಧಿಕಾರದಲ್ಲಿದ್ದಾಗ ಕೈಗೊಂಡ ಬಾಂಗ್ಲಾದೇಶ ಸ್ವಾತಂತ್ರ್ಯ ಯುದ್ಧ, ಆಪರೇಷನ್ ಬ್ಲೂ ಸ್ಟಾರ್, ಖಾಲಿಸ್ತಾನಿ ಚಳುವಳಿಯ ಆರಂಭವನ್ನೂ ಇಲ್ಲಿ ಕಟ್ಟಿಕೊಡಲಾಗಿದೆ. ಜೊತಗೆ, 1984 ರಲ್ಲಿ ಇಂದಿರಾ ಗಾಂಧಿ ಹತ್ಯೆಯಂತಹ ಘಟನೆಯನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ತುರ್ತು ಪರಿಸ್ಥಿತಿಯ ಕಾಲಘಟ್ಟವೇ ಚಿತ್ರದ ಪ್ರಮುಖ ಭಾಗವಾಗಿದೆ. ಸಂಸದೆ ಕಂಗನಾ ರಾಣಾವತ್ ಅವರು ಈ ಚಿತ್ರದ ಮೂಲಕ ಪ್ರಧಾನಮಂತ್ರಿಯವರ ದೌರ್ಬಲ್ಯಗಳನ್ನೂ ಬಿಚ್ಚಿಟ್ಟಿದ್ದಾರೆ.

ತಾರಾಗಣದ ಅಭಿನಯ: ಕಂಗನಾ ಚಿತ್ರವನ್ನ ಅದ್ಭುತವಾಗಿ ನಿರ್ದೇಶಿಸಿದ್ದಾರೆ. ಇನ್ನು ಅಭಿನಯದ ವಿಷಯಕ್ಕೆ ಬಂದರೆ, ಎಲ್ಲಾ ನಟ-ನಟಿಯರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಶಾಕ್ ನಾಯರ್ ಅವರು ಸಂಜಯ್ ಗಾಂಧಿ ಮತ್ತು ಅನುಪಮ್ ಖೇರ್ ಅವರು ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ಮಹಿಮಾ ಚೌಧರಿ ಇಂದಿರಾ ಗಾಂಧಿಯವರ ಆಪ್ತ ಪೂಪುಲ್ ಜಯಕರ್ ಪಾತ್ರದಲ್ಲಿ ಮಿಂಚಿದ್ದಾರೆ. ಮಿಲಿಂದ್ ಸೋಮನ್ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ಷಾ ಮತ್ತು ಸತೀಶ್ ಕೌಶಿಕ್ ಜಗಜೀವನ್ ರಾಮ್ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಚಿತ್ರ ಇತಿಹಾಸದ ಜೊತೆಗೆ ಭಾವನೆಗಳನ್ನೂ ಸೆರೆಹಿಡಿಯುತ್ತದೆ. ಭಾರತದ ರಾಜಕೀಯದಲ್ಲಿ ಆಸಕ್ತಿ ಇದ್ದವರಿಗೆ ಈ ಚಿತ್ರ ನೋಡಲೇಬೇಕು. ಈ ಚಿತ್ರಕ್ಕೆ ನಾವು 4 ಸ್ಟಾರ್ ನೀಡುತ್ತೇವೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಸಂಕಷ್ಟದಲ್ಲಿ ಸಿಲುಕಿದ ಕಂಗನಾ ನಟನೆಯ ‘ಎಮರ್ಜೆನ್ಸಿ’

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?