ಹಳ್ಳಿಯಲ್ಲಿ ಹುಟ್ಟಿಕೊಳ್ಳುವ ಪ್ರೀತಿಗೆ ಮೊದಲ ಶತ್ರು ಯಾರು ಎನ್ನುವ ಪ್ರಶ್ನೆಗೆ ಸುಲಭವಾಗಿ ದಕ್ಕುವ ಉತ್ತರ ಜಾತಿ. ಮೇಲು- ಕೀಳು ಎನ್ನುವ ಆಟದಲ್ಲಿ ಬಲಿಯಾದ ಪ್ರೀತಿಯ ಕತೆಗಳಿಗೆ ಲೆಕ್ಕವಿಲ್ಲ. ಅಂಥ ಪ್ರೀತಿಯ ಕತೆಯನ್ನು ಹೊತ್ತು ತಂದಿದೆ ‘ಪ್ರೀತಿಗಿಬ್ಬರು’ ಚಿತ್ರ.
ಆರ್ ಕೇಶವಮೂರ್ತಿ
ಹಳ್ಳಿಯಲ್ಲಿ ಹುಟ್ಟಿಕೊಳ್ಳುವ ಪ್ರೀತಿಗೆ ಮೊದಲ ಶತ್ರು ಯಾರು ಎನ್ನುವ ಪ್ರಶ್ನೆಗೆ ಸುಲಭವಾಗಿ ದಕ್ಕುವ ಉತ್ತರ ಜಾತಿ. ಮೇಲು- ಕೀಳು ಎನ್ನುವ ಆಟದಲ್ಲಿ ಬಲಿಯಾದ ಪ್ರೀತಿಯ ಕತೆಗಳಿಗೆ ಲೆಕ್ಕವಿಲ್ಲ. ಅಂಥ ಪ್ರೀತಿಯ ಕತೆಯನ್ನು ಹೊತ್ತು ತಂದಿದೆ ‘ಪ್ರೀತಿಗಿಬ್ಬರು’ ಚಿತ್ರ. ಅದೊಂದು ಹಳ್ಳಿ. ಅಲ್ಲಿ ಯಾವುದೇ ಕೆಲಸಕ್ಕೂ ಹತ್ತು ರುಪಾಯಿ ಮಾತ್ರ ಕೂಲಿ ತೆಗೆದುಕೊಳ್ಳುವ ಹತ್ತು ಹೆಸರಿನ ಕೆಲ ಜಾತಿಯ ಹುಡುಗ. ಅದೇ ಊರಿನಲ್ಲಿರುವ ಗಂಡುಬೀರಿ ಹೆಣ್ಣು.
ಆಕೆಗೆ ಒಬ್ಬ ಉದಾರವಾದಿ ಮಗಳು. ಈಕೆಯ ಪರೋಡಿ ಅಣ್ಣ. ಸಾಲದಕ್ಕೆ ನಾಯಕಿಯ ಅಮ್ಮನಿಗೆ ಮೂವರು ಸೋದರರು. ಅವರು ಬೇರೆ ಬೇರೆ ಊರಿನಲ್ಲಿದ್ದಾರೆ. ಈಗ ಹತ್ತು ರುಪಾಯಿ ಕೆಲಸದವನಿಗೆ ಹಳ್ಳಿಯ ಶ್ರೀಮಂತ ಗಂಡುಬೀರಿ ಯಜಮಾನಿಕೆಯ ಮಗಳ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ನಿರೀಕ್ಷೆಯಂತೆ ಪ್ರೀತಿಗೆ ಜಾತಿ ಮತ್ತು ಶ್ರೀಮಂತಿಕೆ ಅಡ್ಡ ಬರುತ್ತದೆ. ಈಗ ಊರಿನವರ ಮಧ್ಯೆ ಪ್ರವೇಶ ಆಗುತ್ತದೆ. ತನ್ನ ಮನೆತನದ ಗೌರವ ಕಾಪಾಡಿಕೊಳ್ಳಲು, ಮಗಳ ಪ್ರೀತಿಯನ್ನು ದೂರ ಮಾಡಲು ನಾಯಕಿ ತಾಯಿ ಒಂದು ಒಪ್ಪಂದವನ್ನು ನಾಯಕನ ಮುಂದಿಡುತ್ತಾಳೆ.
ಚಿತ್ರ: ಪ್ರೀತಿಗಿಬ್ಬರು
ತಾರಾಗಣ: ಬಾಲಾಜಿ, ನಿರೋಷಾ ಶೆಟ್ಟಿ, ಕಾವ್ಯ ಪ್ರಕಾಶ್, ಮಂಜುಳಾ.
ನಿರ್ದೇಶನ: ಷಾಂಡಿಲ್ಯ
ರೇಟಿಂಗ್: 2
ಅದನ್ನು ಒಪ್ಪಿ ನಾಯಕಿ ಅಣ್ಣನ ಜತೆಗೆ ಊರು ಬಿಟ್ಟು ಹೊರಡುತ್ತಾನೆ ನಾಯಕ. ಆ ಒಪ್ಪಂದ ಏನು, ಊರು ಬಿಡುವ ನಾಯಕ ಮತ್ತೆ ಬರುತ್ತಾನೆಯೇ, ಇತ್ತ ಎದುರು ನೋಡುತ್ತಿರುವ ನಾಯಕಿ ಏನಾಗುತ್ತಾಳೆ ಇಂತಹ ಒಂದಿಷ್ಟು ತಿರುವು ಮತ್ತು ಕುತೂಹಲಗಳ ಹಲಗೆಯ ಮೇಲೆಯ ಇಡೀ ಸಿನಿಮಾ ಸಾಗುತ್ತದೆ. ಅದ್ಧೂರಿ ನಿರ್ಮಾಣ, ಬಹು ದೊಡ್ಡ ತಾರಾಗಣ, ಅಮೋಘ ಅಭಿನಯ, ಅದ್ಭುತ ಮೇಕಿಂಗ್ ಎಂಬಿತ್ಯಾದಿ ಅಂಶಗಳನ್ನು ಸಂಪೂರ್ಣವಾಗಿ ಮರೆತು ಈ ಚಿತ್ರವನ್ನು ದರ್ಶನ ಮಾಡಿಕೊಂಡರೆ ಮೆಚ್ಚುಗೆ ಆಗಲಿದೆ.
Ombatthane Dikku Film Review: ಸಿರಿತನ ಕನಸಿಗೆ ಬೇಟೆಗಾರನ ಬಾಣ
ಕಡಿಮೆ ಪಾತ್ರಗಳ ಮೂಲಕ ಒಂದು ಸಣ್ಣ ಕತೆಯನ್ನು ನಿರ್ದೇಶಕರು ಯಾವುದೇ ಆಡಂಬರ ಹಾಗೂ ಅವಸರವಿಲ್ಲದೆ ಹೇಳಿದ್ದಾರೆ. ನಿರ್ದೇಶಕರ ಈ ಸರಳ ನಿರೂಪಣೆಗೆ ತಕ್ಕಂತೆ ಇಡೀ ಚಿತ್ರತಂಡ ತಂತ್ರಜ್ಞರ ತಂಡ ಕೂಡ ಹೆಜ್ಜೆ ಹಾಕುತ್ತದೆ. ಹೊಸಬರ ಪ್ರಯತ್ನ ಎನ್ನುವ ಕಾರಣಕ್ಕೆ ಒಮ್ಮೆ ನೋಡಬಹುದಾದ ಸಿನಿಮಾ ‘ಪ್ರೀತಿಗಿಬ್ಬರು’.