ಎಲ್ಲೋ ಜೋಗಪ್ಪ ನಿನ್ನ ಅರಮನೆ ಚಿತ್ರ ವಿಮರ್ಶೆ: ಪ್ರಯಾಣವೇ ಪ್ರಧಾನ, ಸಂಬಂಧಗಳೇ ಜೀವಾಳ

Published : Feb 22, 2025, 04:17 PM ISTUpdated : Feb 22, 2025, 05:04 PM IST
ಎಲ್ಲೋ ಜೋಗಪ್ಪ ನಿನ್ನ ಅರಮನೆ ಚಿತ್ರ ವಿಮರ್ಶೆ: ಪ್ರಯಾಣವೇ ಪ್ರಧಾನ, ಸಂಬಂಧಗಳೇ ಜೀವಾಳ

ಸಾರಾಂಶ

ಅಪ್ಪ ಅಮ್ಮನ ಕಾಳಜಿಯಲ್ಲಿ ಜತನದಿಂದ ಬೆಳೆದ ಹುಡುಗ ಹೊರ ಜಗತ್ತಿಗೆ ಮುಖಾಮುಖಿಯಾದಾಗ ಆಗುವ ಅನುಭವ, ಜೀವನ ಸಾಕ್ಷಾತ್ಕಾರಗಳೇ ಈ ಸಿನಿಮಾ. ನಾಯಕನ ಜರ್ನಿಯುದ್ದಕ್ಕೂ ಅಲ್ಲಲ್ಲಿ ತಂದೆ ಮಗನ ಪ್ರೀತಿಯ ದೃಶ್ಯ ನಾಯಕನಿಗೆ ಕಾಣಸಿಕ್ಕು ಆತ ಎಮೋಶನಲ್‌ ಆಗ್ತಾನೆ.

ಪ್ರಿಯಾ ಕೆರ್ವಾಶೆ

ಲೈಫಲ್ಲಿ ರಿಯಲೈಸೇಶನ್‌ಗೆ ಇರುವ ಪವರ್ ದೊಡ್ಡದು. ಅದು ಬದುಕನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿಬಿಡುತ್ತದೆ. ಈ ವಿಚಾರವನ್ನು ಆತ್ಮವಾಗಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ ಇದು. ಮೇಲ್ನೋಟಕ್ಕೆ ಪ್ರಯಾಣವೇ ಪ್ರಧಾನವಾಗಿರುವ ಸಿನಿಮಾ. ಆದರೆ ಇದರೊಳಗೆ ನಾಡಿ ಮಿಡಿತದಂತೆ ಇರುವುದು ತಂದೆ ಮಗನ ಸಂಬಂಧ. ಬದುಕನ್ನರಸಿ ಹೊರಡುವ ಜೋಗಿಯಂಥಾ ಹುಡುಗ ತನ್ನ ನಿಜದ ನೆಲೆಯನ್ನು ಕಂಡುಕೊಳ್ಳುವುದೇ ಸಿನಿಮಾದ ಅಂತರಾರ್ಥ.

ನಾಯಕ ಆದಿ ಈ ಕಾಲದ ಹುಡುಗರ ಪ್ರತಿನಿಧಿ. ಅಪ್ಪನ ಬುದ್ಧಿಮಾತನ್ನೇ ತಪ್ಪಾಗಿ ಅರ್ಥೈಸಿ ತನ್ನ ಸಾಮರ್ಥ್ಯ ತೋರಿಸುವ ಛಲದಿಂದ ಮೊಬೈಲ್‌, ಕಾಸು ಇಲ್ಲದೆ ಮನೆಯಿಂದ ಹೊರಬೀಳುತ್ತಾನೆ. ಅಪ್ಪ ಅಮ್ಮನ ಕಾಳಜಿಯಲ್ಲಿ ಜತನದಿಂದ ಬೆಳೆದ ಹುಡುಗ ಹೊರ ಜಗತ್ತಿಗೆ ಮುಖಾಮುಖಿಯಾದಾಗ ಆಗುವ ಅನುಭವ, ಜೀವನ ಸಾಕ್ಷಾತ್ಕಾರಗಳೇ ಈ ಸಿನಿಮಾ. ನಾಯಕನ ಜರ್ನಿಯುದ್ದಕ್ಕೂ ಅಲ್ಲಲ್ಲಿ ತಂದೆ ಮಗನ ಪ್ರೀತಿಯ ದೃಶ್ಯ ನಾಯಕನಿಗೆ ಕಾಣಸಿಕ್ಕು ಆತ ಎಮೋಶನಲ್‌ ಆಗ್ತಾನೆ. 

ಎಲ್ಲೋ ಜೋಗಪ್ಪ ನಿನ್ನ ಅರಮನೆ
ತಾರಾಗಣ:
ಅಂಜನ್ ನಾಗೇಂದ್ರ, ವೆನ್ಯಾ ರೈ, ಸಂಜನಾ ದಾಸ್‌, ಶರತ್ ಲೋಹಿತಾಶ್ವ
ನಿರ್ದೇಶನ : ಹಯವದನ
ರೇಟಿಂಗ್‌ : 3.5

ಕಥೆಗಾಗಿ ಎಳೆದು ತಂದಂತೆ ತೋರುವ ಇಂಥಾ ಕ್ಲೀಷೆಗಳನ್ನು ನಿರ್ದೇಶಕರು ಮೀರಬಹುದಿತ್ತು. ಮೊದಲ ಭಾಗದಲ್ಲಿ ಕಥೆಗೆ ಅಂಥಾ ಮಹತ್ವ ಇಲ್ಲ. ಜೊತೆಗೆ ಇಲ್ಲಿನ ಜರ್ನಿ ವಾಸ್ತವದಿಂದ ಆಚೆ ನಿಂತಂತೆ ತೋರುತ್ತದೆ. ಕೊನೆಯಲ್ಲಿ ಸಿನಿಮಾದ ತಿರುಗಿ ನೋಡುವಂಥಾ ಗುಣ ಇಷ್ಟವಾಗುತ್ತದೆ. ನಟನೆ, ನಿರ್ದೇಶನ, ಸಿನಿಮಾಟೋಗ್ರಫಿ, ಹಿನ್ನೆಲೆ ಸಂಗೀತ ಕಥೆಗೆ ಜೀವ ತುಂಬುವಂತಿವೆ. ಬೆಂಗಳೂರಿಂದ ದೇಶದ ಉತ್ತರಕ್ಕಿರುವ ಜಾಗಗಳ ನೋಟದ ಜೊತೆಗೆ ಇಂಟೆನ್ಸ್‌ ಆದ ಅನುಭವಕ್ಕೆ ಪಕ್ಕಾಗುವ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ