ಭುವನಂ ಗಗನಂ ಚಿತ್ರ ವಿಮರ್ಶೆ: ಪಯಣಕ್ಕೊಂದು ಪ್ರೇಮದ ದಾರಿ, ಒಮ್ಮೆ ಭಾವುಕ, ಕೊಂಚ ಸಸ್ಪೆನ್ಸ್‌

Published : Feb 15, 2025, 04:24 PM ISTUpdated : Feb 15, 2025, 04:37 PM IST
ಭುವನಂ ಗಗನಂ ಚಿತ್ರ ವಿಮರ್ಶೆ: ಪಯಣಕ್ಕೊಂದು ಪ್ರೇಮದ ದಾರಿ, ಒಮ್ಮೆ ಭಾವುಕ, ಕೊಂಚ ಸಸ್ಪೆನ್ಸ್‌

ಸಾರಾಂಶ

ಇದು ಕೊಂಚ ಸಸ್ಪೆನ್ಸ್‌. ಆದರೆ, ಇಬ್ಬರು ಜತೆಯಾಗಿ ಪ್ರಯಾಣ ಮಾಡುತ್ತಲೇ ತಮ್ಮ ಕತೆ ಹೇಳಿಕೊಳ್ಳುತ್ತಾರೆ. ಕಾಲೇಜು, ಹುಡುಗಾಟಿಕೆ, ಫೈಟು, ಪ್ರೀತಿ-ಪ್ರೇಮ, ಮದುವೆ ಮತ್ತು ಹೆತ್ತವರ ಸಿಟ್ಟು, ಕೈ ಹಿಡಿದವಳೇ ದೂರ ಆಗಿದ್ದು ಯಾಕೆ ಎನ್ನುವ ಸಂಗತಿಗಳು ಒಬ್ಬರ ಕತೆಯಲ್ಲಿ ಬಂದು ಹೋಗುತ್ತವೆ.   

ಆರ್‌.ಕೇಶವಮೂರ್ತಿ

ಅವರಿಬ್ಬರು ಸೇರಬೇಕಾದ ಜಾಗ ಒಂದೇ. ಆದರೆ, ಸಾಗಿ ಬಂದ ಹಾದಿ ಬೇರೆ ಬೇರೆ. ಒಬ್ಬರಿಗೆ ಬಿಟ್ಟು ಹೋದ ಪ್ರಿಯತಮೆಯನ್ನು ದಕ್ಕಿಸಿಕೊಳ್ಳುವ ಯೋಚನೆ, ಮತ್ತೊಬ್ಬರಿಗೆ!? ಇದು ಕೊಂಚ ಸಸ್ಪೆನ್ಸ್‌. ಆದರೆ, ಇಬ್ಬರು ಜತೆಯಾಗಿ ಪ್ರಯಾಣ ಮಾಡುತ್ತಲೇ ತಮ್ಮ ಕತೆ ಹೇಳಿಕೊಳ್ಳುತ್ತಾರೆ. ಕಾಲೇಜು, ಹುಡುಗಾಟಿಕೆ, ಫೈಟು, ಪ್ರೀತಿ-ಪ್ರೇಮ, ಮದುವೆ ಮತ್ತು ಹೆತ್ತವರ ಸಿಟ್ಟು, ಕೈ ಹಿಡಿದವಳೇ ದೂರ ಆಗಿದ್ದು ಯಾಕೆ ಎನ್ನುವ ಸಂಗತಿಗಳು ಒಬ್ಬರ ಕತೆಯಲ್ಲಿ ಬಂದು ಹೋಗುತ್ತವೆ. 

ಮತ್ತೊಬ್ಬರು ನಾರ್ಮಲ್‌ ಅಲ್ಲ. ಜನ್ಮ ಕೊಟ್ಟ ತಾಯಿಯೇ ಬಿಟ್ಟು ಹೋಗಿದ್ದಾಳೆ. ಇತ್ತ ಪ್ರೀತಿಸಿದ ಹುಡುಗಿ ಏನಾದಳು, ಮತ್ತೆ ತಾಯಿ ಬರ್ತಾಳೆಯೇ ಎಂಬುದು ಕೊನೆಯಲ್ಲಿ ಗೊತ್ತಾಗುತ್ತದೆ. ಹೀಗೆ ಇಬ್ಬರು ಪ್ರಯಾಣದ ಉದ್ದಕ್ಕೂ ಹೇಳುತ್ತಾ ಹೋಗುವ ಕತೆಯನ್ನು ನೀವು ಕೇಳಿಸಿಕೊಳ್ಳುತ್ತಾ ಹೋಗಬೇಕು ಅಷ್ಟೆ. ಒಮ್ಮೆ ನೀವು ಭಾವುಕರಾಗಬಹುದು, ಮತ್ತೊಮ್ಮೆ ನಗಬಹುದು. ಯಾವುದೂ ಬೇಡ ಅಂದರೆ ಪಾಪ್‌ ಕಾರ್ನ್‌ ಮೆಲ್ಲಬಹುದು! 

ಚಿತ್ರ: ಭುವನಂ ಗಗನಂ
ತಾರಾಗಣ: ಪ್ರಮೋದ್‌, ಪೃಥ್ವಿ ಅಂಬಾರ್‌, ರೇಚೆಲ್ ಡೇವಿಡ್, ಅಶ್ವಥಿ, ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ
ನಿರ್ದೇಶನ: ಗಿರೀಶ್ ಮೂಲಿಮನಿ
ರೇಟಿಂಗ್: 3

ಯಾಕೆಂದರೆ ಈ ಸಿನಿಮಾ ನಿಮಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡಲ್ಲ! ಇಲ್ಲಿ ಕತೆ ಹೇಳಿಕೊಳ್ಳುವ ನಾಯಕ ಪಾತ್ರಧಾರಿಗಳಾದ ಪ್ರಮೋದ್‌, ಪೃಥ್ವಿ ಅಂಬಾರ್‌ ತಮ್ಮ ತಮ್ಮ ಗಡಿಯನ್ನು ಕ್ರಾಸ್‌ ಮಾಡಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇವರ ಜೀವನದಲ್ಲಿ ಬರುವ ರೇಚೆಲ್ ಡೇವಿಡ್, ಅಶ್ವಥಿ ನೋಡಲು ಚಂದ. ಅಚ್ಯುತ್‌ ಕುಮಾರ್‌ ಅವರದ್ದು ಘನತೆಯ ಪಾತ್ರ. ಉಳಿದಿದ್ದು ತೆರೆ ಮೇಲೆ ನೋಡುವುದೇ ಸರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?