
ಆರ್.ಕೆ
ನಾಯಕಿ ಮತ್ತು ನಾಯಕಿ ಈ ಇಬ್ಬರ ನಡುವೆ ಒಂದು ಒಪ್ಪಂದ ಆಗುತ್ತದೆ. ಪ್ರೀತಿಗಾಗಿ ಕಾಲಹರಣ ಮಾಡೋದು ಬೇಡ. ವರ್ಷಕ್ಕೊಮ್ಮೆ ಭೇಟಿಯಾಗೋಣ ಎಂಬುದು. ಆ ಒಂದು ದಿನವೇ ಫೆಬ್ರವರಿ 14. ಇಲ್ಲಿ ನಾಯಕಿ ಡಾಕ್ಟರ್, ನಾಯಕಿ ಇಂಜಿನಿಯರ್ ಆಗಿರುತ್ತಾನೆ. ಈ ಇಬ್ಬರ ವರ್ಷದ ಪ್ರೇಮ್ ಕಹಾನಿಯನ್ನು ಹೇಳುವ ಚಿತ್ರವೇ ‘ನಗುವಿನ ಹೂಗಳ ಮೇಲೆ’.
ನಿರ್ದೇಶನ: ವೆಂಕಟ್ ಭಾರದ್ವಾಜ್
ನಿರ್ಮಾಣ: ಕೆ.ಕೆ. ರಾಧಾಮೋಹನ್
ತಾರಾಗಣ: ಅಭಿದಾಸ್, ಶರಣ್ಯ ಶೆಟ್ಟಿ, ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ
Juni Review ಬದುಕು ಡಿಸಾರ್ಡರ್, ಪ್ರೇಮ ಪ್ರೀ- ಆರ್ಡರ್
ಸರಳವಾದ ಪ್ರೇಮ ಕತೆ ಇದೆ. ಅದನ್ನು ತಾಳ್ಮೆಯಿಂದ ನೋಡುವ ಪ್ರೇಕ್ಷಕನಿಗೆ ಹತ್ತಿರವಾಗುತ್ತದೆ. ನಾಯಕ ಜೈಲಿನಿಂದ ಹೊರಬರುವ ದೃಶ್ಯದೊಂದಿಗೆ ಸಿನಿಮಾ ಶುರುವಾಗುತ್ತದೆ. ಇಲ್ಲಿಂದ ಕತೆ ಫ್ಲ್ಯಾಶ್‌ಬ್ಯಾಕ್ ಮೊರೆ ಹೋಗುತ್ತದೆ. ಅಲ್ಲೊಂದಿಷ್ಟು ಪಾತ್ರಧಾರಿಗಳ ಪರಿಚಯ. ಕವಿತೆ ಬರೆಯುತ್ತಾ ಹೂವುಗಳನ್ನು ಮಾರುವ ಯುವ, ರಸ್ತೆ ಬದಿ ಗುಜರಿ ಶಾಪು ಇಟ್ಟಿರುವ ಅಪ್ಪ-ಮಗಳು, ಅದೇ ರಸ್ತೆಯಲ್ಲಿ ಮುಸುಕಿನ ಜೋಳ ಮಾರುವ ವಯಸ್ಸಾದ ಹಿರಿಯ ದಂಪತಿ. ಈ ಪಾತ್ರಗಳ ಜತೆಗೆ ಮತ್ತೊಂದು ಫ್ಲ್ಯಾಶ್‌ಬ್ಯಾಕ್ ತೆರೆದುಕೊಳ್ಳುತ್ತದೆ. ಅಲ್ಲೊಂದಿಷ್ಟು ಕತೆ ಸಾಗುತ್ತದೆ. ಇಲ್ಲಿ ನಾಯಕನಿಗೊಬ್ಬ ಸ್ನೇಹಿತ ಹುಟ್ಟಿಕೊಳ್ಳುತ್ತಾನೆ.
Ondu Sarala Prema Kathe Review ಆಹ್ಲಾದಕರ ಅನುಭವ ಉಳಿಸುವ ಪ್ರೀತಿ ಕತೆ
ವರ್ಷಕ್ಕೊಮ್ಮೆ ಪ್ರೀತಿಸುವ ನಾಯಕ, ನಾಯಕಿ ಜತೆಯಾಗುತ್ತಾರೋ ಇಲ್ಲವೋ ಎನ್ನುವ ಕುತೂಹಲ ಸಾಗುತ್ತಿರುವಾಗ ನಾಯಕ ಜೈಲಿಗೆ ಹೋಗುತ್ತಾನೆ. ಯಾಕೆ? ನಾಯಕಿ ಅಪ್ಪ ಸಾವಿನ ಅಂಚಿನಲ್ಲಿದ್ದಾನೆ. ಯಾಕೆ? ನಾಯಕಿಗೆ ತಾಯಿ ಇಲ್ಲ. ಯಾಕೆ? ಇಷ್ಟಕ್ಕೂ ಹೀರೋ ಜೈಲಿಗೆ ಹೋಗಿದ್ದು ಯಾಕೆ? ಗುಜರಿ ಅಂಗಡಿಯಾತ ಸತ್ತಿದ್ದು ಯಾಕೆ? ಹೀಗೆ ಸ್ಕ್ರೀನ್ ಪ್ಲೇ ಹುಟ್ಟಿಸುವ ಈ ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರಿಸುವ ಮೂಲಕ ಕತೆ ತನ್ನ ಜವಾಬ್ದಾರಿ ನಿಭಾಯಿಸುವ ಪ್ರಯತ್ನ ಮಾಡುತ್ತದೆ. ಪ್ರೀತಿಗೆ ಕಾಲದ ಗಡಿ ಇಲ್ಲವೆಂಬ ತತ್ವ ಮುಂದಿಡುವ ಈ ಚಿತ್ರದ ಬೆನ್ನೆಲುಬು ಅಭಿದಾಸ್, ಶರಣ್ಯ ಶೆಟ್ಟಿ, ಬಲ ರಾಜವಾಡಿ, ಆಶಾ ಸುಜಯ್ ಅವರ ಪಾತ್ರಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.