wow! 5 ವರ್ಷದಲ್ಲಿ 1 ಲಕ್ಷಕ್ಕೆ 11.5 ಲಕ್ಷ ರೂಪಾಯಿ ಸಿಕ್ತು.. ಹಣ ಮಾಡೋದನ್ನ ಹೀಗೆ ಕಲೀಬೇಕು!

Published : Aug 10, 2026, 08:10 PM IST
indian currency PTI (1)

ಸಾರಾಂಶ

ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.

ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಐಸ್ ಮೇಕ್ ರೆಫ್ರಿಜರೇಷನ್ (ICE Make Refrigeration) ಕಂಪನಿಯ ಶೇರುಗಳು. ಕಳೆದ ಐದು ವರ್ಷಗಳಲ್ಲಿ ಈ ಕಂಪನಿಯ ಶೇರು ಬೆಲೆ ಎಷ್ಟು ವೇಗವಾಗಿ ಬೆಳೆದಿದೆ ಎಂದರೆ ಹೂಡಿಕೆದಾರರ ಹಣ ಹಲವು ಪಟ್ಟು ಹೆಚ್ಚಾಗಿದೆ.

1 ಲಕ್ಷ ರೂಪಾಯಿ ಇಂದು 11.5 ಲಕ್ಷ!

ಒಬ್ಬ ಹೂಡಿಕೆದಾರ 5 ವರ್ಷಗಳ ಹಿಂದೆ ಈ ಕಂಪನಿಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಶೇರುಗಳನ್ನು ಮಾರಾಟ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರೆ ಇಂದು ಆ ಹೂಡಿಕೆಯ ಮೌಲ್ಯ ಸುಮಾರು 11.54 ಲಕ್ಷ ರೂಪಾಯಿ ಆಗುತ್ತಿತ್ತು. ಕೇವಲ 5 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭವನ್ನು ಈ ಸ್ಟಾಕ್ ನೀಡಿದೆ. ಐದು ವರ್ಷಗಳ ಹಿಂದೆ ಕೇವಲ 71 ರೂಪಾಯಿಯಿದ್ದ ಈ ಷೇರು ಇಂದು 820 ರೂಪಾಯಿಗೆ ತಲುಪಿದೆ. ಇತ್ತೀಚೆಗೆ ಈ ಷೇರು 1,088 ರೂಪಾಯಿಯ ದಾಖಲೆಯ ಮಟ್ಟವನ್ನೂ ತಲುಪಿತ್ತು.

2022ರ ಫೆಬ್ರವರಿಯಿಂದ ಏಪ್ರಿಲ್ 2025ರವರೆಗೆ ಈ ಸ್ಟಾಕ್ ಭರ್ಜರಿ ಏರಿಕೆ ಕಂಡಿದ್ದು, ಸುಮಾರು 1240 ಶೇಕಡಾ ಲಾಭ ನೀಡಿದೆ. ಮಾರ್ಚ್ 2020ರಲ್ಲಿ ಈ ಷೇರು ಕೇವಲ 25.65 ರೂಪಾಯಿಗೆ ಕುಸಿದಿತ್ತು. ಅಲ್ಲಿಂದ ಲೆಕ್ಕ ಹಾಕಿದರೆ ಈವರೆಗೂ ಬರೋಬ್ಬರಿ 3096 ಶೇಕಡಾ ಏರಿಕೆ ಕಂಡಿದೆ.

ಕಂಪನಿಯ ವ್ಯವಹಾರವೇನು?

'ಐಸ್ ಮೇಕ್ ರೆಫ್ರಿಜರೇಷನ್' ಕಂಪನಿಯು ವಿವಿಧ ಕೈಗಾರಿಕೆಗಳಿಗೆ ಬೇಕಾದ ಕೂಲಿಂಗ್ ಪರಿಹಾರಗಳನ್ನು (Cooling Solutions) ಒದಗಿಸುತ್ತದೆ. ಅಂದರೆ ರೆಫ್ರಿಜರೇಷನ್ ಉತ್ಪನ್ನಗಳು ಮತ್ತು ಉಪಕರಣಗಳ ತಯಾರಿಕೆ ಹಾಗೂ ಸರಬರಾಜು ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ (Market Cap) ಪ್ರಸ್ತುತ 1,200 ಕೋಟಿ ರೂಪಾಯಿಗಳಷ್ಟಿದೆ. ಇತ್ತೀಚಿನ ತಿಂಗಳಲ್ಲಿ ಈ ಸ್ಟಾಕ್ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದರೂ, ದೀರ್ಘಾವಧಿಯಲ್ಲಿ ಇದು ಅತ್ಯುತ್ತಮ ಲಾಭ ನೀಡಿದ ಷೇರುಗಳ ಪಟ್ಟಿಯಲ್ಲಿದೆ. ಚಿಲ್ಲರೆ ಹೂಡಿಕೆದಾರರು (Retail Investors) ಈ ಕಂಪನಿಯಲ್ಲಿ ಸುಮಾರು 24 ಪ್ರತಿಶತದಷ್ಟು ಪಾಲನ್ನು ಹೊಂದಿದ್ದಾರೆ.

PREV
Read more Articles on
click me!

Recommended Stories

12 ಬಾರಿ ಅಲ್ಲ, ವರ್ಷಕ್ಕೆ 24 ಬಾರಿ ಸಂಬಳ! ಆಸ್ಟ್ರೇಲಿಯಾ Salary System ಬಗ್ಗೆ ಭಾರತೀಯನ ಮಾತು ವೈರಲ್
Credit Card ಇರೋರು ಸಾಲದಿಂದ ಹೊರ ಬರೋದು ಯಾಕೆ ಕಷ್ಟಕರ? ಈ 7 ಟ್ರಿಕ್ಸ್ ಫಾಲೋ ಮಾಡಿ