ನಿಮ್ಮ ಮಕ್ಕಳಿಗೆ 1 ಕೋಟಿ ರೂ. ಕೂಡಿಟ್ಟರೆ ಅವರ ಕೈಗೆ ಸಿಗೋದು ಕೇವಲ ₹4 ಲಕ್ಷ; ಇಲ್ಲಿದೆ ಶಾಕಿಂಗ್ ವರದಿ!

Published : Aug 09, 2026, 05:58 PM ISTUpdated : Aug 10, 2026, 12:36 PM IST
Impact of Inflation

ಸಾರಾಂಶ

₹1 ಕೋಟಿ ರೂಪಾಯಿ ಇದ್ದರೆ ಜೀವನ ಪೂರ್ತಿ ನೆಮ್ಮದಿಯಾಗಿರಬಹುದು ಎಂಬುದು ನಿಜವಲ್ಲ. ಜೆರೋಧಾ ವಾರ್ಸಿಟಿ ವರದಿಯ ಪ್ರಕಾರ, ಹಣದುಬ್ಬರವು ನಿಮ್ಮ ಹಣದ ಖರೀದಿ ಸಾಮರ್ಥ್ಯವನ್ನು ಕಾಲಕ್ರಮೇಣ ಕಡಿಮೆ ಮಾಡುತ್ತದೆ, 50 ವರ್ಷಗಳಲ್ಲಿ ₹1 ಕೋಟಿಯ ಮೌಲ್ಯವನ್ನು ಕೇವಲ ₹3.4 ಲಕ್ಷಕ್ಕೆ ಇಳಿಸುತ್ತದೆ. ಹಣವನ್ನು ಕೇವಲ ಬ್ಯಾಂಕ್‌ನಲ್ಲಿಡುವುದು ಹಣದುಬ್ಬರವನ್ನು ಎದುರಿಸಲು ಸಾಕಾಗುವುದಿಲ್ಲ.

ಇದೀಗ 'ನಿಮ್ಮ ಬಳಿ 1 ಕೋಟಿ ರೂಪಾಯಿ ಇದ್ದರೆ, ಇಡೀ ಜೀವನ ನೆಮ್ಮದಿಯಿಂದ ಕಳೆಯಬಹುದು' ಎಂದು ನೀವು ಭಾವಿಸಿದ್ದರೆ ಅದು ಸಂಪೂರ್ಣ ನಿಜವಲ್ಲ! ಪ್ರಸಿದ್ಧ ಶೇರು ಮಾರುಕಟ್ಟೆ ವೇದಿಕೆ ಜೆರೋಧಾ ವಾರ್ಸಿಟಿ (Zerodha Varsity) ಹಂಚಿಕೊಂಡಿರುವ ಇತ್ತೀಚಿನ ವರದಿಯೊಂದು ಹಣಕಾಸು ನಿರ್ವಹಣೆ (Personal Finance) ಬಗ್ಗೆ ಪ್ರತಿಯೊಬ್ಬರ ಕಣ್ಣು ತೆರೆಸುವಂತಿದೆ.

ನಾವು ಗಳಿಸಿ ಇಟ್ಟುಕೊಳ್ಳುವ ಹಣವನ್ನು 'ಹಣದುಬ್ಬರ' (Inflation) ಎಂಬ ಸೈಲೆಂಟ್ ಕಿಲರ್ ನಿಧಾನವಾಗಿ ಕರಗಿಸುತ್ತಿರುತ್ತದೆ. ಹಣದುಬ್ಬರದ ಪ್ರಭಾವದಿಂದಾಗಿ ಕಾಲಕ್ರಮೇಣ ಹಣದ 'ಖರೀದಿ ಸಾಮರ್ಥ್ಯ' (Purchasing Power) ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಈ ಕೆಳಗಿನ ಶಾಕಿಂಗ್ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.

ವೇಳಾಪಟ್ಟಿ: 1 ಕೋಟಿ ರೂಪಾಯಿಯ ಮೌಲ್ಯ ಹೇಗೆ ಕುಸಿಯುತ್ತದೆ?

  • ಇಂದು (Today): ₹1.00 ಕೋಟಿ (0% ನಷ್ಟ - 100% ಖರೀದಿ ಸಾಮರ್ಥ್ಯ)
  • 5 ವರ್ಷಗಳ ನಂತರ: ₹71.3 ಲಕ್ಷ (28.7% ನಷ್ಟ)
  • 10 ವರ್ಷಗಳ ನಂತರ: ₹50.8 ಲಕ್ಷ (49.2% ನಷ್ಟ - ಬರೋಬ್ಬರಿ ಅರ್ಧದಷ್ಟು ಮೌಲ್ಯ ಖಾಲಿ!)
  • 20 ವರ್ಷಗಳ ನಂತರ: ₹25.8 ಲಕ್ಷ (74.2% ನಷ್ಟ)
  • 30 ವರ್ಷಗಳ ನಂತರ: ₹13.1 ಲಕ್ಷ (86.9% ನಷ್ಟ)
  • 40 ವರ್ಷಗಳ ನಂತರ: ₹6.7 ಲಕ್ಷ (93.3% ನಷ್ಟ)
  • 50 ವರ್ಷಗಳ ನಂತರ: ₹3.4 ಲಕ್ಷ ಮಾತ್ರ! (96.6% ನಷ್ಟ)

ಖರೀದಿ ಸಾಮರ್ಥ್ಯ (Purchasing Power) ಅಂದರೇನು?

ಇಂದು 1 ಕೋಟಿ ರೂಪಾಯಿಗೆ ನೀವು ಯಾವೆಲ್ಲಾ ವಸ್ತುಗಳನ್ನು (ಉದಾಹರಣೆಗೆ: ಜಮೀನು, ಮನೆ, ಕಾರು ಅಥವಾ ಚಿನ್ನ) ಖರೀದಿಸಬಹುದೋ, ಅದೇ ವಸ್ತುಗಳನ್ನು 50 ವರ್ಷಗಳ ನಂತರ ಖರೀದಿಸಲು ₹1 ಕೋಟಿ ಸಾಕಾಗುವುದಿಲ್ಲ. ಏಕೆಂದರೆ, ವಸ್ತುಗಳ ಬೆಲೆ ಗಗನಕ್ಕೇರಿರುತ್ತದೆ. 50 ವರ್ಷಗಳ ನಂತರ ಇಂದು ನೀವು ಬ್ಯಾಂಕ್‌ನಲ್ಲಿ ಇಡುವ ₹1 ಕೋಟಿಯ ಮೌಲ್ಯ ಕೇವಲ ₹3.4 ಲಕ್ಷಕ್ಕೆ ಸಮಾನವಾಗಿರುತ್ತದೆ!

ಹಣದುಬ್ಬರವನ್ನು ಎದುರಿಸುವುದು ಹೇಗೆ?

ಹಣವನ್ನು ಕೇವಲ ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ನಲ್ಲಿ (Savings Bank Account) ಅಥವಾ ಮನೆಯ ಲಾಕರ್‌ನಲ್ಲಿ ಇಡುವುದು ಅತ್ಯಂತ ದೊಡ್ಡ ತಪ್ಪು. ಏಕೆಂದರೆ ಬ್ಯಾಂಕ್ ನೀಡುವ ಶೇ. 3 ರಿಂದ 4% ಬಡ್ಡಿಯು 6% ರಿಂದ 7% ಇರುವ ಹಣದುಬ್ಬರವನ್ನು ಸರಿದೂಗಿಸಲು ಸಾಧ್ಯವಿಲ್ಲ.

PREV
Read more Articles on
click me!

Recommended Stories

12 ಬಾರಿ ಅಲ್ಲ, ವರ್ಷಕ್ಕೆ 24 ಬಾರಿ ಸಂಬಳ! ಆಸ್ಟ್ರೇಲಿಯಾ Salary System ಬಗ್ಗೆ ಭಾರತೀಯನ ಮಾತು ವೈರಲ್
Credit Card ಇರೋರು ಸಾಲದಿಂದ ಹೊರ ಬರೋದು ಯಾಕೆ ಕಷ್ಟಕರ? ಈ 7 ಟ್ರಿಕ್ಸ್ ಫಾಲೋ ಮಾಡಿ