ಜೆಡ್‌ಟಿಇ ಬ್ಲೇಡ್ ವಿ30, ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್ ಬಿಡುಗಡೆ

By Suvarna News  |  First Published Jul 23, 2021, 11:51 AM IST

ಜೆಡ್‌ಟಿಇ ಕಂಪನಿಯ ಜೆಡ್‌ಟಿಇ ಬ್ಲೇಡ್ ವಿ30 ಮತ್ತು ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್‌ಗಳು ಬೆಲೆ ಹಾಗೂ ಫೀಚರ್‌ಗಳ ದೃಷ್ಟಿಯಿಂದಲೂ ಗಮನಾರ್ಹವಾಗಿವೆ. ಈಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್‌ಗಳು ತಮ್ಮ ಕ್ಯಾಮೆರಾ ಹಾಗೂ ಶಕ್ತಿಶಾಲಿ ಬ್ಯಾಟರಿಗಳಿಂದ ಹೆಚ್ಚು ಗಮನ ಸೆಳೆಯುತ್ತಿವೆ.


ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳದ್ದೇ ಕಾರುಬಾರ್. ಈ ಕಂಪನಿಗಳು ಕೈಗೆಟುಕುವ ದರದಲ್ಲಿ ಪ್ರೀಮಿಯಂ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಹಾಗಾಗಿ, ಭಾರತವು ಸೇರಿದಂತೆ ವಿಶ್ವಬಹುತೇಕ ಮಾರುಕಟ್ಟೆಗಳಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಪಾರುಪತ್ಯ ಮೆರೆಯುತ್ತಿವೆ.

ಚೀನಾದ ಸ್ಮಾರ್ಟ್‌ಫೋನ್‌ ಉತ್ಪಾದಕ ಕಂಪನಿಗಳ ಸಾಲಿಗೆ ಜೆಡ್‌ಟಿಇ ಕೂಡ ಸೇರುತ್ತದೆ. ಈ ಕಂಪನಿಯು ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಕಂಪನಿಯು ಮೆಕ್ಸಿಕನ್ ಮಾರುಕಟ್ಟೆಗೆ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ.

Tap to resize

Latest Videos

undefined

ನಿಮ್ಮ ಬೆಡ್‌ ಪಕ್ಕ ಇರಲೇಬೇಕು ಲೆನೋವೋ ಸ್ಮಾರ್ಟ್‌ ಕ್ಲಾಕ್ 2

ಜೆಡ್‌ಟಿಇ ಬ್ಲೇಡ್ ವಿ30 ಮತ್ತು ಜೆಡ್‌ಟಿಇ ಬ್ಲೇಡ್ ವಿ30 ವಿಟಾ ಎಂಬೆರಡು ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಮೆಕ್ಸಿಕನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 5,000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಗಳಿವೆ. ಜೊತಗೆ ಹಲವು ವಿಶಿಷ್ಟ ಎನ್ನಬಹುದಾದ ಫೀಚರ್‌ಗಳನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಸೈಡ್ ಮೌಂಟ್ ಫಿಂಗರ್ ಪ್ರಿಂಟ್ ಸೆನ್ಸರ್‌ ಇರುವುದನ್ನು ಗಮನಿಸಬಹುದಾಗಿದೆ. 

4 ಜಿಬಿ ರ್ಯಾಮ್ ಮತ್ತು 128 ಸ್ಟೋರೇಜ್ ಸಾಮರ್ಥ್ಯದ ಜೆಡ್‌ಟಿಇ ಬ್ಲೇಡ್ ವಿ30 ಸ್ಮಾರ್ಟ್‌ಫೋನ್ ಬೆಲೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 23 ಸಾವಿರ ರೂಪಾಯಿ ಆಗಲಿದೆ. ಅಂದರೆ, ಈ ಫೋನ್ ಅನ್ನು ನಾವು ಪ್ರೀಮಿಯಂ ಕೆಟಗರಿಗೆ ಸೇರಿಸಬಹುದಾಗಿದೆ. ಹಾಗಿಯೇ, 3ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಜೆಟಿಇ ಬ್ಲೇಡ್ ವಿ30 ವಿಟಾ ಬೆಲೆ ಅಂದಾಜು 19 ಸಾವಿರ ರೂಪಾಯಿ ಇರಲಿದೆ. ಬೆಲೆಯ ದೃಷ್ಟಿಯಿಂದ ನೋಡಿದರೆ ಈ ಎರಡೂ ಫೋನ್‌ಗಳು ತೀರಾ ತುಟ್ಟಿಯೇನಲ್ಲ. ಜೆಡ್‌ಟಿಇ ಬ್ಲೇಡ್ ವಿ30 ನೀಲಿ, ಕಪ್ಪು ಬಣ್ಣಗಳಲ್ಲಿ ಆಯ್ಕೆಯಲ್ಲಿ ದೊರೆತರೆ, ಜೆಡ್‌ಟಿಇ ನೀಲಿ, ಬೂದು ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.

ಈ ಫೋನ್‌ಗಳ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಜೆಡ್‌ಟಿಇ ಬ್ಲೇಡ್ ವಿ 30 ವಿಟಾ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧರಿತವಾಗಿದ್ದು, ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಆಲ್‌ಮೋಸ್ಟ್ 7 ಇಂಚ್ ಅಂದರೆ, 6.82 ಇಂಚ್ ಫುಲ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 4ಜಿ ವೋಎಲ್ಇಟಿ, 2ಐ-ಫೈ 892.11ಎಸಿ, ಬ್ಲೂಟೂಥ್ 5.0, ಜಿಪಿಎಸ್, 3.5 ಎಂಎಂ ಆಡಿಯೋ ಜಾಕ್‌ಗೆ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಸ್ಟೋರೇಜ್ ಕೂಡ ವಿಸ್ತರಿಸಿಕೊಳ್ಳಬಹುದಾಗಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿದ್ದು, ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು.

ಆಪಲ್ ಹಿಂದಿಕ್ಕಿರುವ ಶಿಯೋಮಿ, ಈಗ ಜಗತ್ತಿನ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ

ವಿಟಾ ಮಾದರಿಯ ಫೋನಿನ ಕ್ಯಾಮೆರಾಗಳು ಕೂಡ ಗಮನ ಸೆಳೆಯುತ್ತವೆ. ಸ್ಮಾರ್ಟ್‌ಪೋನ್ ಹಿಂಭಾಗದಲ್ಲಿ ನೀಡಲಾಗಿರುವ ಕ್ಯಾಮೆರಾ ಸೆಟ್‌ಅಪ್‌ನಲ್ಲಿ 46 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದರೆ, ಇನ್ನುಳಿದ ಎರಡು ಕ್ಯಾಮೆರಾಗಳು 5 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿವೆ. ಸೆಲ್ಫಿಗಾಗಿ ಕಂಪನಿ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. 

ಜೆಡ್‌ಟಿಇ ಬ್ಲೇಡ್ ವಿ430 ಸ್ಮಾರ್ಟ್‌ಫೋನ್ ಕೂಡ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬ್ಲೇಡ್ ವಿ 30 2.0ಗಿಗಾ ಹರ್ಡ್ಸ್ ಯುನಿಸಾಕ್ ಟಿ 618 ಸಿಪಿಯುನೊಂದಿಗೆ ಬರುತ್ತದೆ. ಯುನಿಸಾಕ್ ಟಿ 618 ಸಿಪಿಯು ಎರಡು 2.0 ಗಿಗಾಹರ್ಡ್ಸ್ ಆರ್ಮ್ ಕಾರ್ಟೆಕ್ಸ್-ಎ 75 ಸಿಪಿಯುಗಳನ್ನು ಮತ್ತು 12 ಎನ್ಎಂ ಉತ್ಪಾದನಾ ತಂತ್ರಜ್ಞಾನದ ಆಧಾರದ ಮೇಲೆ ಆರು 1.8 ಗಿಗಾಹರ್ಡ್ಸ್ ಆರ್ಮ್ ಕಾರ್ಟೆಕ್ಸ್-ಎ 55 ಪ್ರೊಸೆಸರ್‌ಗಳನ್ನು ಇದು ಒಳಗೊಂಡಿದೆ.

ಬ್ಲೇಡ್ ವಿ30 ಸ್ಮಾರ್ಟ್‌ಫೋನ್ ಜಬರ್ದಸ್ತ್ ಎನ್ನಬಹುದಾದ ಕ್ಯಾಮೆರಾಗಳನ್ನು ಒಳಗೊಂಡಿದೆ. ಮೂರು ಕ್ಯಾಮೆರಾಗಳ ಸೆಟ್‌ಅಪ್ ಇದ್ದು, ಇದರಲ್ಲಿ 63 ಮೆಗಾ ಪಿಕ್ಸಲ್ ಕ್ಯಾಮೆರಾ ಮೊದಲನೇ ಕ್ಯಾಮೆರವಾದರೆ, ಉಳಿದೆರಡು ಮೂರು ಕ್ಯಾಮೆರಾಗಳ 8 ಮೆಗಾ ಪಿಕ್ಸಲ್, 2 ಮೆಗಾ ಪಿಕ್ಸಲ್ ಮತ್ತು 5 ಮೆಗಾ ಪಿಕ್ಸಲ್ ಕ್ಯಾಮೆರಾಗಳಿವೆ. ಇನ್ನು ಸೆಲ್ಫಿಗಾಗಿ ಕಂಪನಿಯು 16 ಮೆಗಾ ಪಿಕ್ಸಲ್ ಕ್ಯಾಮೆರಾಗಳನ್ನು ಒಳಗೊಂಡಿದೆ.

ಆಗಸ್ಟ್‌ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?

ಈ ಎರಡೂ ಸ್ಮಾರ್ಟ್‌ಫೋನ್‌ಗಳು ತಮ್ಮ ಈ ಸೆಗ್ಮೆಂಟ್‌ನ ಇತರ ಬ್ರ್ಯಾಂಡ್ ಫೋನ್‌ಗಳಿಗಿಂತಲೂ ತುಂಬ ಭಿನ್ನವಾಗಿ ನಿಲ್ಲುತ್ತಿವೆ. ಬೆಲೆ ಹಾಗೂ ವೈಶಿಷ್ಟ್ಯಗಳ ದೃಷ್ಟಿಯಿಂದಲೂ ಜೆಡ್‌ಟಿಇ ಕಂಪನಿಯ ಈ ಫೋನ್‌ಗಳು ಹೆಚ್ಚು ಗಮನಾರ್ಹವಾಗಿವೆ ಮತ್ತು ಈ ಫೋನುಗಳು ಯಾವಾಗ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

click me!