ನೀವು ನಿಮ್ಮ ಹಳೆಯ ಫೋನ್ ಸಂಖ್ಯೆಯನ್ನು ಹೊಸ ಸಂಖ್ಯೆಗೆ ಬದಲಿಸಿದ್ದರೆ, ಹಳೆಯ ನಂಬರನ್ನು ಬಹುಕಾಲದಿಂದ ಬಳಸದೆ ಇದ್ದರೆ, ಏನಾಗುತ್ತದೆ ಗೊತ್ತೆ?
ನೀವು ಹೊಸ ಫೋನ್ ನಂಬರ್ ತೆಗೆದುಕೊಂಡು, ನಿಮ್ಮ ಹಳೆಯ ಫೋನ್ ಸಂಖ್ಯೆಯನ್ನು ಬಳಸದೆ ಎಂಟು ಹತ್ತು ತಿಂಗಳ ಕಾಲ ಸುಮ್ಮನಿದ್ದರೆ, ಟೆಲಿಕಾಂ ಕಂಪನಿಗಳು ನಿಮ್ಮ ಹಳೆಯ ಫೋನ್ ಸಂಖ್ಯೆಯನ್ನು ಮರುಬಳಕೆ ಮಾಡುತ್ತವೆ ಮತ್ತು ಅದನ್ನು ಬೇರೊಬ್ಬರಿಗೆ ಮಾರಾಟ ಮಾಡುತ್ತವೆ. ಆಗ ಏನಾಗುತ್ತದೆ? ನೀವು ನಿಮ್ಮ ಹೊಸ ಸಂಖ್ಯೆಯನ್ನು ಬಳಸುತ್ತಿರುತ್ತೀರಿ ಮತ್ತು ಹಳೆ ಸಂಖ್ಯೆಯಲ್ಲಿ ಏನಾಗುತ್ತಿರುತ್ತದೆ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ಆದರೆ ಅದೇ ಸಂಖ್ಯೆಯನ್ನು ಬಳಸಿಕೊಂಡು ಬೇರೊಬ್ಬರು ನಿಮ್ಮ ಖಾತೆಗಳಿಗೆ ಲಾಗಿನ್ ಆಗಬಹುದು, ನಿಮ್ಮ ಮಾಹಿತಿಗಳನ್ನೆಲ್ಲ ಪಡೆಯಬಹುದು.
ಮತ್ತೊಬ್ಬರು ಅವರ ಹೆಸರಿನಲ್ಲಿ ನಿಮ್ಮ ಹಳೆಯ ಸಂಖ್ಯೆಯ ಹೊಸ ಸಿಮ್ ಕಾರ್ಡ್ ಖರೀದಿಸಿದರೆ, ಆ ಸಂಖ್ಯೆಯಲ್ಲಿ ಬಳಕೆಯಾಗಿದ್ದ ನಿಮ್ಮ ಎಲ್ಲಾ ಖಾತೆಗಳಿಗೆ ಪ್ರವೇಶವನ್ನು ಪಡೆಯುವ ಅವಕಾಶವಿರುತ್ತದೆ. ಇದು ನಿಮ್ಮ ಗೌಪ್ಯತೆಗೆ ದೊಡ್ಡ ಅಪಾಯ. ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಈ ಕುರಿತು ನಡೆಸಿರುವ ಸಂಶೋಧನೆ ಎಲ್ಲರನ್ನು ಆಶ್ಚರ್ಯಗೊಳಿಸಿದೆ. ಟೆಲಿಕಾಂ ಕಂಪನಿಗಳು ಹಳೆಯ ಸಂಖ್ಯೆಗಳನ್ನು ಮರುಬಳಕೆ ಮಾಡುವ ಪ್ರಕ್ರಿಯೆಯಲ್ಲಿ ಹಳೆಯ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆ ಕುರಿತು ಯಾವುದೇ ಕಾಳಜಿ ವಹಿಸುವುದಿಲ್ಲವಂತೆ.
ಹಳ್ಳಿ ಮಕ್ಕಳ ಇಂಟರ್ನೆಟ್ ಸಮಸ್ಯೆಗೆ ಶೀಘ್ರ ಪರಿಹಾರ
ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ ವರದಿಗಾರ ಹೊಸ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡ ಬಳಿಕ ಆತನಿಗೆ ರಕ್ತ ಪರೀಕ್ಷೆ ಮತ್ತು ಸ್ಪಾ ಅಪಾಯಿಂಟ್ಮೆಂಟ್ ಸಂದೇಶಗಳು ಬರಲು ಆರಂಭಿಸಿದವು. ಸಂಶೋಧನೆಯ ಸಮಯದಲ್ಲಿ 200 ಮರುಬಳಕೆ ಸಂಖ್ಯೆಗಳನ್ನು ತನಿಖೆ ಮಾಡಲಾಗಿದ್ದು ಅದರಲ್ಲಿ ಹಳೆಯ ಸಂಪರ್ಕದಾರರ ಸಂದೇಶಗಳು ಮತ್ತು ಕರೆಗಳನ್ನು ಸ್ವೀಕರಿಸಲಾಗಿದೆ. ದೃಢೀಕರಣ ಸಂದೇಶಗಳು ಮತ್ತು ಒಟಿಪಿಗಳು ಸಹ ಈ ಸಂಖ್ಯೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡವು.
undefined
ನಿಮ್ಮ ಹಳೆಯ ಸಂಖ್ಯೆ ನುರಿತ ಹ್ಯಾಕರ್ ಕೈಗೆ ಸಿಕ್ಕಿದರೆ ಆತ ಅದನ್ನು ಫಿಶಿಂಗ್ ದಾಳಿಗೆ ಬಳಸಬಹುದು. ಬೇರೆ ಬೇರೆ ವೆಬ್‌ಸೈಟ್‌ಗಳ ಚಂದಾದಾರಿಕೆ ಇತ್ಯಾದಿಗಳಲ್ಲಿ ಬಳಸಬಹುದು. ನಿಮ್ಮ ಇ-ಮೇಲ್, ಸೋಶಿಯಲ್ ಮಿಡಿಯಾ ಅಕೌಂಟ್‌ಗಳು, ಮತ್ತು ಇ-ಕಾಮರ್ಸ್ ಖಾತೆಯನ್ನು ಪ್ರವೇಶಿಸಲು ಸಹ ಆ ಸಂಖ್ಯೆಯನ್ನು ಬಳಸಬಹುದು. ನಿಮ್ಮ ಡಿಜಿಟಲ್ ಸಂಪರ್ಕ ಖಾತೆಯನ್ನೂ ಪ್ರವೇಶಿಸಿ, ನಿಮ್ಮ ಬ್ಯಾಂಕ್‌ನಲ್ಲಿರುವ ಹಣವನ್ನು ಲಪಟಾಯಿಸಲೂ ಸಾಧ್ಯ.
ಹಾಗಾದರೆ ನೀವು ಮಾಡಬೇಕಾದದ್ದು ಏನು?
ನಾಳೆ ಜೆಫ್ ಬೆಜೋಸ್ ಅಂತರಿಕ್ಷ ಪ್ರವಾಸ: ಇಲ್ಲೂ ಭಾರತೀಯ ಮಹಿಳೆ ನಂಟು!
ಈ ರೀತಿಯ ಹ್ಯಾಕಿಂಗ್ ಅನ್ನು ತಪ್ಪಿಸಲು ಸುಲಭವಾದ ಮತ್ತು ಸರಳವಾದ ಮಾರ್ಗ ಯಾವುದು ಎಂಬುದು ಈಗ ಪ್ರಶ್ನೆ. ನಿಮ್ಮ ಹಳೆಯ ಸಂಖ್ಯೆಯನ್ನು ಬಿಟ್ಟುಕೊಟ್ಟು ಹೊಸ ಸಂಖ್ಯೆಯನ್ನು ಆನ್ ಮಾಡಿದ ಕೂಡಲೇ ನಿಮ್ಮ ಹೊಸ ಸಂಖ್ಯೆಯನ್ನು ನಿಮ್ಮ ಇಮೇಲ್, ಬ್ಯಾಂಕ್ ಖಾತೆ, ಆಧಾರ್ ಖಾತೆ, ಪಾನ್ ನಂಬರ್ ಲಿಂಕ್, ಸೋಶಿಯಲ್ ಮಿಡಿಯಾ ಅಕೌಂಟ್, ಇ ಕಾಮರ್ಸ್ ಖಾತೆಗಳು, ನೀವು ಚಂದಾದಾರರಾಗಿರುವ ವೆಬ್‌ಸೈಟ್‌ಗಳು, ಎಲ್ಲ ಕಡೆಯೂ ನವೀಕರಿಸಬೇಕು. ಇದು ಬಹಳ ಪರಿಶ್ರಮದ ಕೆಲಸ ಎಂಬುದು ನಿಜ. ಆದರೆ ಕೂಡಲೇ ಬದಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಗತ್ಯ.
ಇನ್ನೊಂದು ಸುಲಭದ ವಿಧಾನವೆಂದರೆ, ಈ ಸಂಖ್ಯೆ ಇನ್ಯಾರ ಕೈಗೂ ಸಿಗದಂತೆ ನೀವೇ ಇಟ್ಟುಕೊಳ್ಳುವುದು. ಹಾಗೂ ಆಗಾಗ ಮಿನಿಮಮ್ ಹಣ ಹಾಕಿ ಅದನ್ನು ಜೀವಂತವಾಗಿ ಇಟ್ಟುಕೊಳ್ಳುವುದು. ಅಥವಾ ಈ ನಂಬರ್ ಅನ್ನೇ ಉಳಿಸಿಕೊಳ್ಳಬೇಕು ಎಂದಿದ್ದರೆ, ಟೆಲಿಕಾಂ ಕಂಪನಿ ಬದಲಾಯಿಸಿ. ಆದರೆ ನಂಬರ್ ಪೋರ್ಟಬಿಲಿಟಿ ಸೇವೆ ಲಭ್ಯವಿರುವುದರಿಂದ ಅದೇ ನಂಬರ್ ಉಳಿಸಿಕೊಳ್ಳಿ.
ಒಟಿಪಿಗಳು ಎಲ್ಲಿಗೆ ಹೋಗುತ್ತಿವೆ ಎಂಬುದನ್ನು ಪರೀಕ್ಷಿಸಿ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದ ಸೈಟ್‌ಗಳನ್ನು ಲಾಗಿನ್ ಆಗಲು ನೀವು ಬಳಸಿಕೊಂಡ ಸಂಖ್ಯೆಗೆ ಸಾಮಾನ್ಯವಾಗಿ ಒಟಿಪಿ ಹೋಗುತ್ತದೆ. ನಿಮ್ಮ ಹೊಸ ಸಂಖ್ಯೆಗೆ ಸರಿಯಾಗಿ ಒಟಿಪಿ ಬರಲಿಲ್ಲ ಎಂದಾದರೆ ಪರಿಶೀಲಿಸುವುದು ಅಗತ್ಯ.