ಅಮರನಾಥ ಭಕ್ತರು ನಿರಾಸೆ ಪಡಬೇಕಿಲ್ಲ, ಜಿಯೊ ಟೀವಿಯಲ್ಲಿ ಆರತಿ ನೇರಪ್ರಸಾರ!

By Suvarna News  |  First Published Jul 19, 2021, 9:38 PM IST
  • ಕೊರೋನಾ ಕಾರಣ ಅಮರನಾಥ ದೇಗುಲಕ್ಕೆ ಪ್ರವೇಶ ನಿರಾಕರಣೆ
  • ನಿರ್ಬಂಧದ ಕಾರಣ ಭಕ್ತರು ನಿರಾಸೆ ಪಡಬೇಕಿಲ್ಲ
  • ಜಿಯೊ ಟೀವಿಯಿಂದ ಅಮರನಾಥ ದೇಗುಲದ ಆರತಿ  ನೇರಪ್ರಸಾರ

ಜಮ್ಮು(ಜು.19):  ಕೊರೋನಾ ಕಾರಣ ಯಾತ್ರೆ, ಜಾತ್ರೆ, ಉತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ಇದರಂತೆ ಅಮರನಾಥ ಯಾತ್ರೆ ಹಾಗೂ ದೇಗುಲಕ್ಕೂ ಭಕ್ತರ ಪ್ರವೇಶ ನಿರಾಕರಿಸಲಾಗಿದೆ. ಹಾಗಂತ ನಿರಾಸೆ ಪಡಬೇಕಿಲ್ಲ.  ರಿಲಯನ್ಸ್ ಜಿಯೊದ ಜಿಯೊ ಟೀವಿ, ಅಮರನಾಥ ದೇಗುಲದ ಆರತಿಯನ್ನು ನೇರಪ್ರಸಾರವನ್ನು ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಈ ಪವಿತ್ರ ದೇವಾಲಯಕ್ಕೆ ನೇರವಾಗಿ ಭೇಟಿ ನೀಡಿ ದರ್ಶನ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಭಕ್ತರಿಗೆ ನೆರವಾಗಲು ಜಿಯೊ ಟೀವಿ ಈ ನೇರಪ್ರಸಾರ ಮಾಡುತ್ತಿದೆ.

ಗಣೇಶ ಹಬ್ಬಕ್ಕೆ ಜಿಯೋ ಕೂಡುಗೆ ; ಗೂಗಲ್-ಜಿಯೋ ಅಭಿವೃದ್ಧಿಪಡಿಸಿದ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ!

Tap to resize

Latest Videos

undefined

ಕಡಿದಾದ ಭೂಪ್ರದೇಶ ಮತ್ತು ಸವಾಲಿನ ಪರಿಸ್ಥಿತಿಯಲ್ಲಿಯೂ ಕಂಪನಿಯು, ನೇರಪ್ರಸಾರಕ್ಕೆ ಅಗತ್ಯವಿರುವ ನೆಟ್‌ವರ್ಕ್‌ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಅತ್ಯಲ್ಪ ಅವಧಿಯಲ್ಲಿಯೇ ಸ್ಥಾಪಿಸಿದೆ. ಭಕ್ತರಿಗೆ ನೇರವಾಗಿ ಬಂದು ದರ್ಶನ ಪಡೆದಷ್ಟೇ ಒಳ್ಳೆಯ ಅನುಭವ ಕೊಡುವ ನಿಟ್ಟಿನಲ್ಲಿ, ಶ್ರೀ ಅಮರನಾಥ ದೇವಾಲಯ ಸಮಿತಿಯ ಆರಂಭಿಸಿದ ವಿವಿಧ ಆನ್‌ಲೈನ್‌ ಸೇವೆಗಳನ್ನು ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದ್ದಾರೆ.

ಕೋವಿಡ್ –19 ಸಾಂಕ್ರಾಮಿಕ ರೋಗದ ಕಾರಣದಿಂದ ಈ ವರ್ಷ ಲಕ್ಷಾಂತರ ಜನರಿಗೆ ಪವಿತ್ರ ಶ್ರೀ ಅಮರನಾಥ ಗುಹಾಲಿಂಗ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇವಸ್ಥಾನ ಸಮಿತಿಯು, ವರ್ಚುವಲ್‌ ವಿಧಾನದಲ್ಲಿ ದರ್ಶನ, ಹವನ ಮತ್ತು ಪ್ರಸಾದದ ಸೌಲಭ್ಯವನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿದೆ. ದರ್ಶನ, ಹವನ, ಪ್ರಸಾದ ಮತ್ತು ಅರ್ಚಕರನ್ನೂ ಭಕ್ತರು ಆನ್‌ಲೈನ್‌ನಲ್ಲಿಯೇ ತಮ್ಮ ಹೆಸರಿನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ನಂತರ ಪ್ರಸಾದವನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು' ಎಂದು ದೇವಸ್ಥಾನ ಸಮಿತಿಯ ವಕ್ತಾರರು ತಿಳಿಸಿದ್ದಾರೆ. ಆನ್‌ಲೈನ್‌ ಸೇವೆಯನ್ನು ಆರಂಭಿಸಿರುವ ಕಾರಣ ವಿಶ್ವದಾದ್ಯಂತ ಇರುವ ಶಿವನ ಭಕ್ತರು ಆನ್‌ಲೈನ್‌ನಲ್ಲಿಯೇ ಪೂಜೆ, ಹವನಗಳನ್ನು ಮಾಡಿಸುತ್ತಿದ್ದಾರೆ.

ಟ್ರಾಯ್ ವರದಿ ಪ್ರಕಟ; 4G ಡೌನ್ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ!

ಈಗ ರಿಲಯನ್ಸ್ ಜಿಯೊ, ಜಿಯೊ ಟೀವಿಯಲ್ಲಿ ಅಮರನಾಥ ದೇಗುಲದ ಆರತಿಯ ನೇರಪ್ರಸಾರವನ್ನು ಪರಿಚಯಿಸುವ ಮೂಲಕ ಭಕ್ತರಿಗೆ ತನ್ಮಯಗೊಳಿಸುವ ಅನುಭವ ನೀಡುತ್ತಿದೆ. ವಿವಿಧ ಆಪ್‌ಗಳ ಮೂಲಕ ಒದಗಿಸಲಾಗುವ ಈ ಸೇವೆಯಿಂದ ದೇಶದಾದ್ಯಂತ ಲಕ್ಷಾಂತರ ಭಕ್ತರಿಗೆ ಸಹಾಯವಾಗಲಿದೆ.

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ 2021ರ ಅಮರನಾಥ ಯಾತ್ರೆಯನ್ನು ಅಮರನಾಥ ದೇಗುಲ ಸಮಿತಿಯು ರದ್ದುಗೊಳಿಸಿತ್ತು. ಹಾಗಾಗಿ ಭಕ್ತರು ಈ ವರ್ಷ ಈ ಪವಿತ್ರ ಯಾತ್ರಾಸ್ಥಳದ ದರ್ಶನ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಭಕ್ತರು ಈ ಯಾತ್ರಾಸ್ಥಳದ ಜೊತೆಗಿನ ಸಂಬಂಧವನ್ನು ಮುಂದುವರಿಸುವ ನಿಟ್ಟಿನಲ್ಲಿ ಜಿಯೊ ಡಿಜಿಟಲ್‌ ಲೈಫ್ ಬೆಂಬಲದೊಂದಿಗೆ ಜಿಯೊ ಸಂಸ್ಥೆಯು ಆರತಿಯ ನೇರಪ್ರಸಾರ ಆರಂಭಿಸಿದೆ. ಜಿಯೊ ಟೀವಿಯಲ್ಲಿ ಈ ನೇರಪ್ರಸಾರವಾಗುತ್ತಿದ್ದು, ಜಿಯೊಮೀಟ್‌ನ ಮೂಲಕ ಭಕ್ತರು ತಮ್ಮ ಅರ್ಚಕರ ಜೊತೆಯಲ್ಲಿ ದೇಗುಲದ ವರ್ಚುವಲ್‌ ಪೂಜಾಕೊಠಡಿಯಲ್ಲಿ ಸೇರಿ, ಅವರ ಹೆಸರು ಮತ್ತು ಗೋತ್ರಗಳನ್ನು ಹೇಳಿ ಹವನ, ಪೂಜೆ ನಡೆಸಲು ಸಾಧ್ಯವಿದೆ.

click me!