Blinkit ನಲ್ಲಿ ಆರ್ಡರ್ ಮಾಡಿ 10 ನಿಮಿಷಗಳಲ್ಲಿ iPhone 16 ನಿಮ್ಮ ಮನೆ ಬಾಗಿಲಿಗೆ!

By Ravi Janekal  |  First Published Sep 20, 2024, 3:45 PM IST

iPhone 16 ಇಂದು ಬಿಡುಗಡೆಯಾಗಿದೆ. ದೇಶಾದ್ಯಂತ ಐಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ ಸರತಿ ಸಾಲು ತಪ್ಪಿಸಲು ಗ್ರಾಹಕರು ಆರ್ಡರ್ ಮಾಡಿದ ಹತ್ತು ನಿಮಿಷದೊಳಗೆ ಗ್ರಾಹಕರಿಗೆ ತಲುಪಿಸುವ ಹೊಸ ಬ್ಲಿಂಕಿಟ್ ಕೈಹಾಕಿ ಯಶಸ್ವಿಯಾಗಿದೆ.


Apple iPhone 16: ಸೆಪ್ಟೆಂಬರ್ 9 ರಂದು ಗ್ಲೋಟೈಮ್ ಇವೆಂಟ್‌ನಲ್ಲಿ Apple iPhone 16 ಸರಣಿಯ ಮೊಬೈಲ್‌ಗಳನ್ನು ಆಪಲ್ ಕಂಪನಿ ಬಿಡುಗಡೆಗೊಳಿಸಿದೆ. ಐಫೋನ್ 16 ಮಾರಾಟವು ಇಂದಿನಿಂದ (ಸೆ.20) ಪ್ರಾರಂಭವಾಗಿದ್ದು ದೇಶಾದ್ಯಂತ ಕ್ರೇಜ್ ಸೃಷ್ಟಿಸಿದೆ. ಐಫೋನ್ 16 ಖರೀದಿಸಲು ಆಪಲ್ ಸ್ಟೋರ್‌ಗಳ ಮುಂದೆ ಕಿಮೀಟರ್ ಉದ್ದಕ್ಕೂ ಸರತಿ ಸಾಲಿನಲ್ಲಿ ಗ್ರಾಹಕರು ಕಾದು ನಿಂತಿದ್ದಾರೆ. 

iPhone 16 ಬಿಡುಗಡೆಗೂ ಮುನ್ನವೇ ಇಂದು ಮುಂಬೈನ ಕೆಲವೆಡೆ ಸ್ಟೋರ್ ಸಾವಿರಾರು ಗ್ರಾಹಕರು ಏಕಕಾಲಕ್ಕೆ ಮಳಿಗೆಗೆ ನುಗ್ಗಿದ ಘಟನೆ ನಡೆದಿದೆ. ಇದನ್ನ ಗಮನಿಸಿರುವ Bliknit ತನ್ನ ಬಳಕೆದಾರರು ದೀರ್ಘ ಕಾಲ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಮಾಡಿದೆ. ಅದರಂತೆ ನೀವು  Blinkit ನಲ್ಲಿ ಐಫೋನ್ 16 ಆರ್ಡರ್ ಮಾಡಿದರೆ ಕೇವಲ ಹತ್ತು ನಿಮಿಷಗಳಲ್ಲೇ ನಿಮ್ಮ ಮನೆ ಬಾಗಿಲಿಗೆ iPhone 16 ತಲುಪಿಸಲಾಗುತ್ತದೆ. Blicint ಯುನಿಕಾರ್ನ್ ಸ್ಟೋರ್‌ಗಳ ಹೊರತಾಗಿ Apple ರಿಟೈಲ್ಸ್‌ 10 ನಿಮಿಷಗಳಲ್ಲಿ ಐಫೋನ್ ಅನ್ನು ತಲುಪಿಸಲು ಒಪ್ಪಂದ ಮಾಡಿಕೊಂಡಿದೆ, ಇದರಿಂದಾಗಿ ಸರತಿ ಸಾಲಿನಲ್ಲಿ ನಿಲ್ಲದೆ ಆರ್ಡರ್ ಮಾಡಿದ ಕೇವಲ ಹತ್ತು ನಿಮಿಷದೊಳಗೆ iPhone 16 ತನ್ನ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದೆ.

Tap to resize

Latest Videos

ಭಾರತದಲ್ಲಿ ಐಫೋನ್‌ಗೆ ಬಂತು ಸಿನಿಮಾ ಕ್ರೇಜ್, ರಾತ್ರಿಯಿಂದಲೇ ಕ್ಯೂ ನಿಂತು ಐಫೋನ್ 16 ಖರೀದಿಸಿದ ಗಾಯಕ!

ಬ್ಲಿಂಕಿಂಟ್ ಬಳಕೆದಾರರಿಗೆ ಮೊದಲ ದಿನವೇ ಐಫೋನ್ 16 ಉಡುಗೊರೆ!

Blinkit ಸಹ-ಸಂಸ್ಥಾಪಕ ಮತ್ತು CEO ಅಲ್ಬಿಂದರ್ ದಿಂಡ್ಸಾ(Albinder Dhindsa
)twitter x ಬರೆದಿದ್ದಾರೆ, 10 ನಿಮಿಷಗಳಲ್ಲಿ ಹೊಸ iPhone 16 ಪಡೆಯಿರಿ! ದೆಹಲಿ NCR, ಮುಂಬೈ, ಪುಣೆ, ಬೆಂಗಳೂರು ಮತ್ತು ಲಕ್ನೋದ ಕೆಲವು ಪ್ರದೇಶಗಳಲ್ಲಿ ಅದೇ ಬಿಡುಗಡೆಯ ದಿನದಂದು ಬ್ಲಿಂಕಿಂಟ್ ಬಳಕೆದಾರರಿಗೆ ಇತ್ತೀಚಿನ ಐಫೋನ್‌ಗಳನ್ನು ಒದಗಿಸಲು ಸತತ ಮೂರನೇ ವರ್ಷಕ್ಕೆ ನಾವು ಯುನಿಕಾರ್ನ್ ಸ್ಟೋರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಯೂನಿಕಾರ್ನ್ ಆಯ್ದ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ಆಯ್ಕೆಗಳ ಮೇಲೆ ರಿಯಾಯಿತಿಗಳನ್ನು ಸಹ ನೀಡುತ್ತಿದೆ ಎಂದು ಅವರು ಹೇಳಿದರು. ಕೆಲವೇ ನಿಮಿಷಗಳಲ್ಲಿ ಇಂದು blinkit 300 iPhone 16 ಅನ್ನು ವಿತರಿಸಿದೆ

ಜೀವಿತಾವಧಿಯಲ್ಲಿ ಎತ್ತರಕ್ಕೆ ಜಿಗಿದ Zomato ಸ್ಟಾಕ್ 

ಈ ಸುದ್ದಿಯಿಂದಾಗಿ, ಝೊಮಾಟೊ ಸ್ಟಾಕ್ ರೂ 279 ಕ್ಕೆ ಪ್ರಾರಂಭವಾಯಿತು ಮತ್ತು ನೇರವಾಗಿ ರೂ 290.70 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಪ್ರಸ್ತುತ ಷೇರು 3.25 ರಷ್ಟು ಏರಿಕೆಯೊಂದಿಗೆ 287.90 ರೂ. ಝೊಮಾಟೊಗೆ ಬ್ಲಿಕಿಂಟ್ ಬ್ಲಾಕ್ ಡೈಮಂಡ್ ಎಂದು ಸಾಬೀತಾಗಿದೆ. zomato blinkit ಅನ್ನು ಸ್ವಾಧೀನಪಡಿಸಿಕೊಂಡಾಗ, ಅದು ಟೀಕೆಗೆ ಒಳಗಾಗಿತ್ತು ಆದರೆ ಈಗ blinkit ನ ವಿಸ್ತರಣೆಯಿಂದಾಗಿ, ಎಲ್ಲಾ ಬ್ರೋಕರೇಜ್  Zomato ನ ಸ್ಟಾಕ್‌ನಲ್ಲಿ ಬುಲಿಶ್ ಆಗಿವೆ ಮತ್ತು ರೂ 340 ರಿಂದ ರೂ 360 ಕ್ಕೆ ತಲುಪುವ ಗುರಿಯನ್ನು ಹೊಂದಿವೆ.  

 

We started delivering iPhones at 8 AM - and we're going to cross the 300 mark in a couple of minutes 🤯

Today is going to be one crazy day! pic.twitter.com/12oZfcY0Z8

— Albinder Dhindsa (@albinder)
click me!