ಇತ್ತೀಚೆಗೆ ಬಿಡುಗಡೆಯಾಗ ಐಫೋನ್ 16 ಸೀರಿಸ್ ಇಂದಿನಿಂದ ಮಾರಾಟ ಆರಂಭಗೊಂಡಿದೆ. ಆ್ಯಪಲ್ ಸ್ಟೋರ್ ಮುಂದೆ ಜನ ನಿನ್ನೆ ರಾತ್ರಿಯಿಂದಲೇ ಕ್ಯೂ ನಿಂತಿದ್ದಾರೆ. ಕೆಲವರು ಇಂದು ಬೆಳಗ್ಗೆ 6.30ರಿಂದ ಸಾಲಿನಲ್ಲಿ ನಿಂತಿದ್ದು, ಖರೀದಿಗೆ ಉತ್ಸುಕರಾಗಿದ್ದಾರೆ. ಈ ಪೈಕಿ ಗಾಯಕ ದೆಹಲಿಯಲ್ಲಿ ಐಫೋನ್ 16 ಖರೀದಿಸಿದ ಮೊದಲಿಗೆ ಅನ್ನೋ ದಾಖಲೆ ಬರೆದಿದ್ದಾರೆ.
ದೆಹಲಿ(ಸೆ.20) ಸಿನಿಮಾ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಾಯಕಿ ಸಿನಿಮಾ ಬಿಡುಗಡೆಯಾದಾಗ ಫಸ್ಟ್ ಡೇ, ಫಸ್ಟ್ ಶೋ ನೋಡಲು ಮುಗಿಬೀಳುತ್ತಾರೆ. ಈ ಟ್ರೆಂಡ್ ಇದೀಗ ಐಫೋನ್‌ಗೂ ಕಾಲಿಟ್ಟಿದೆ. ಇಂದಿನಿಂದ(ಸೆ.20) ಐಫೋನ್ 16 ಸೀರಿಸ್ ಮಾರಾಟ ಆರಂಭಗೊಂಡಿದೆ. ಆದರೆ ಆ್ಯಪಲ್ ಸ್ಟೋರ್ ಮುಂದೆ ನಿನ್ನೆ ರಾತ್ರಿಯಿಂದಲೇ ಜನ ಕ್ಯೂ ನಿಂತಿದ್ದಾರೆ. ಮೊದಲ ಐಫೋನ್ 16 ಖರೀದಿದಾರರ ಪಟ್ಟ ಗಿಟ್ಟಿಸಿಕೊಳ್ಳಲು ಪೈಪೋಟಿ, ಹಗ್ಗಜಗ್ಗಾಟ ಶುರುವಾಗಿದೆ. ಇದೀಗ ದೆಹಲಿಯ ಆ್ಯಪಲ್ ಸ್ಟೋರ್ ಮುಂದೆ ಬೆಳಗ್ಗೆ 6.30ರಿಂದಲೇ ಕ್ಯೂ ಆರಂಭಗೊಂಡಿದೆ. ಹಲವರು ನಿನ್ನೆ ರಾತ್ರಿಯಿಂದಲೇ ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿದೆ. ಈ ಕ್ಯೂ ನಡುವೆ ನೋಯ್ಡಾ ಮೂಲದ ಗಾಯಕ ಸಹಜ್ ಅಂಬಾವತ್ ಸಾಕೆತ್ ಆ್ಯಪಲ್ ಸ್ಟೋರ್‌ನಿಂದ ಮೊದಲ ಐಫೋನ್ 16 ಖರೀದಿಸಿದ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಸಹಜ್ ಐಫೋನ್ 16 ಪ್ರೋ 256ಜಿಬಿ ವೇರಿಯೆಂಟ್ ಖರೀದಿಸಿದ್ದಾರೆ. 1.30 ಲಕ್ಷ ರೂಪಾಯಿ ಬೆಲೆಯ ಫೋನ್ ಕ್ಯಾಶ್‌ಬ್ಯಾಕ್ ಆಫರ್‌ನಿಂದ 1.25 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.
ದೆಹಲಿಯ ಸಾಕೆತ್ ಬಳಿ ಇರುವ ಆ್ಯಪಲ್ ಅಧಿಕೃತ ಸ್ಟೋರ್ ಬಳಿ ಜನಸಾಗರವೇ ಹರಿದು ಬಂದಿದೆ. ಸ್ಟೋರ್ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ತೆರೆಯುತ್ತದೆ. ಆದರೆ ಜನರು ಬೆಳಗ್ಗೆ 6.30ರಿಂದಲೇ ಆಗಮಿಸುತ್ತಿದ್ದಾರೆ. ಹಲವರು ನಿನ್ನೆ ತಡ ರಾತ್ರಿಯಿಂದ ಆ್ಯಪಲ್ ಸ್ಟೋರ್ ಬಳಿಯೇ ಬೀಡು ಬಿಟ್ಟಿದ್ದಾರೆ. ನಾನು ಮೊದಲಿಗನಾಗಿ ಆ್ಯಪಲ್ ಐಫೋನ್ 16 ಖರೀದಿಸಬೇಕು ಅನ್ನೋದು ಕ್ಯೂ ಆರಂಭದಲ್ಲಿ ನಿಂತಿರುವ ವ್ಯಕ್ತಿಯ ಮಾತು. ನಿನ್ನೆ ರಾತ್ರಿಯೇ ಇಲ್ಲಿಗೆ ಆಗಮಿಸಿದ್ದೇನೆ ಎಂದು ಅತೀವ ಸಂಸತ ಹಾಗೂ ಉತ್ಸಾಹದಿಂದ ಹೇಳಿಕೊಂಡಿದ್ದಾನೆ.
undefined
Sahaj Ambavat from Noida has bought the first iPhone 16 Pro at the Apple Store in Saket. pic.twitter.com/KwznstII0l
— Digit (@digitindia)
ಭಾರತದಲ್ಲಿ ಆ್ಯಪಲ್ ಐಫೋನ್ 16 ಸೀರಿಸ್ ಬಿಡುಗಡೆ, ನೂತನ ಫೋನ್ ಬೆಲೆ, ಫೀಚರ್ಸ್ ಹೇಗಿದೆ?
ಐಫೋನ್ 16 ಸೀರಿಸ್ ಫೋನ್ ಕ್ರೇಜ್ ನಿರೀಕ್ಷೆಗೂ ಮೀರಿದೆ. ಆ್ಯಪಲ್ ಸ್ಟೋರ್ ಈಗಾಗಲೇ ಹಲವು ಮಳಿಗೆಗೆಳನ್ನು ತೆರೆದಿದೆ. ಐಪೋನ್ 16 ಸೀರೀಸ್ ಖರೀದಿಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಅನ್ನೋ ಕಾರಣಕ್ಕೆ ಸಾಕೆತ್ ಬಳಿ ಹಲವು ಮಳಿಗೆ ತೆರೆದಿದೆ. ಆದರೂ ಕ್ಯೂ ಹೆಚ್ಚಾಗುತ್ತಲೇ ಇದೆ. ಈ ಪೈಕಿ ಕೆಲವರು ಐಫೋನ್ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಐಫೋನ್ ಬಳಕೆ ಮಾಡುತ್ತಿದ್ದೇನೆ. ಇದೀಗ 16 ಸೀರಿಸ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಐಫೋನ್ 16 ಸೀರಿಸ್ ಭಾರತದಲ್ಲಿ ಹಲವು ವೇರಿಯೆಂಟ್ ಬಿಡುಗಡೆ ಮಾಡಲಾಗಿದೆ. ಆರಂಭಿಕ ಬೆಲೆ 79,990 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಕೆಲ ಆಫರ್, ಎಕ್ಸೆಂಜ್ ಬೋನಸ್, ಇಎಂಐ, ಬ್ಯಾಂಕ್ ಡಿಸ್ಕೌಂಟ್ ಸೇರಿದಂತೆ ಇತರ ಕೆಲ ಆಫರ್‌ಗಳು ಲಭ್ಯವಿದೆ.
ಐಫೋನ್ 16 128ಜಿಬಿ ಬೆಲೆ 79,990 ರೂಪಾಯಿ, ಆದರೆ 5,000 ರೂಪಾಯಿ ಡಿಸ್ಕೌಂಟ್ ಲಭ್ಯವಿದೆ. 256ಜಿಬಿ ವೇರಿಯೆಂಟ್ ಫೋನ್ ಬೆಲೆ ಡಿಸ್ಕೌಂಟ್ ಬಳಿಕ 84,900 ರೂಪಾಯಿಗೆ ಲಭ್ಯವಿದೆ. ಐಫೋನ್ 16 ಪ್ಲಸ್ 128ಜಿಬಿ ಫೋನ್ 84,900 ರೂಪಾಯಿ, 256ಜಿಬಿ ವೇರಿಯೆಂಟ್ 94,900 ರೂಪಾಯಿ, 512 ಜಿಬಿ ಸ್ಟೋರೇಜ್ 1,14,900 ರೂಪಾಯಿಗೆ ಲಭ್ಯವಿದೆ. ಇದಕ್ಕೆ 5,000 ರೂಪಾಯಿ ಡಿಸ್ಕೌಂಟ್ ಲಭ್ಯವಿದೆ. ಐಫೋನ್ 16 ಪ್ರೋ 1,64,900 ರೂಪಾಯಿಗೆ ಲಭ್ಯವಿದೆ. 1ಟಿಬಿ ವರ್ಶನ್ ಫೋನ್‌ಗೆ 5,000 ರೂಪಾಯಿ ಲಭ್ಯವಿದೆ. 16ಪ್ರೋ ಮ್ಯಾಕ್ಸ್ 256 ಜಿಬಿ ಬೆಲೆ 1,39,900 ರೂಪಾಯಿಗೆ ಲಭ್ಯವಿದೆ. ಪ್ರೋ ಮ್ಯಾಕ್ಸ್‌ನಲ್ಲಿ 1ಟಿಬಿ ಸ್ಟೋರೇಜ್ ಬೆಲೆ 1,79,900 ರೂಪಾಯಿಗೆ ಲಭ್ಯವಿದೆ.
ನಕಲಿ ಐಫೋನ್ 16 ಬಗ್ಗೆ ಇರಲಿ ಎಚ್ಚರ, ಆರ್ಡರ್ ಮಾಡುವಾಗ ಇದನ್ನೂ ಚೆಕ್ ಮಾಡಿ!