Apple ತನ್ನ ಇತ್ತೀಚಿನ iPhone 16 ಸರಣಿಯನ್ನು ಸೆಪ್ಟೆಂಬರ್ 9 ರಂದು 'ಗ್ಲೋಟೈಮ್' ಈವೆಂಟ್‌ನಲ್ಲಿ ಬಹಿರಂಗಪಡಿಸಲು ಸಿದ್ಧವಾಗಿದೆ. ಸುಧಾರಿತ AI ವೈಶಿಷ್ಟ್ಯಗಳು ಮತ್ತು ಗಮನಾರ್ಹ ಕ್ಯಾಮರಾ ಸುಧಾರಣೆಗಳನ್ನು ಒಳಗೊಂಡಿವೆ.
Kannada
ಐಫೋನ್ 16 ಲಾಂಚ್ ಸಮಯ
ಸೋಮವಾರ, ಸೆಪ್ಟೆಂಬರ್ 9 ರಂದು ಐಫೋನ್ 16 ಬಿಡುಗಡೆಯಾಗಲಿದೆ. ರಾತ್ರಿ 10.30 ಕ್ಕೆ ನಡೆಯಲಿರುವ 'ಇಟ್ಸ್ ಗ್ಲೋಟೈಮ್' ಕಾರ್ಯಕ್ರಮವನ್ನು ನೀವು ಆಪಲ್‌ನ ಅಧಿಕೃತ YouTube ಚಾನೆಲ್ ಮತ್ತು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
Kannada
ಮೊದಲ ಐಫೋನ್‌ನ ಲಾಂಚಿಂಗ್
ಜ. 9, 2007 ರಂದು ಸ್ಯಾನ್ ಫ್ರಾನ್ಸಿಸ್ಕೋದ ಮ್ಯಾಕ್‌ವರ್ಡ್ ಸೆಂಟರ್‌ನಲ್ಲಿ ಸ್ಟೀವ್ ಜಾಬ್ಸ್ ಮೊದಲ ಐಫೋನ್ ಬಿಡುಗಡೆ ಮಾಡಿದರು. ಇದರ ಬಗ್ಗೆ ಮಾತನಾಡಿದ ಅವರು, ಐಫೋನ್ ಉಳಿದ ಫೋನ್‌ಗಳಿಗಿಂತ 5 ವರ್ಷ ಮುಂದಿದೆ ಎಂದಿದ್ದರು.
Kannada
2 ದಿನಗಳಲ್ಲಿ ಸುಮಾರು 3 ಲಕ್ಷ ಐಫೋನ್‌ಗಳು ಮಾರಾಟ
ಜೂನ್ 29, 2007 ರಂದು ಮಾರುಕಟ್ಟೆಗೆ ಬಂದ ಎರಡು ದಿನಗಳಲ್ಲಿ ಮೊದಲ ಐಫೋನ್ 2.70 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿತು. ಆಗ ಅದರ 4GB ಬೆಲೆ 499 ಡಾಲರ್ ಮತ್ತು 8 GB ಬೆಲೆ 599 ಡಾಲರ್ ಆಗಿತ್ತು.
Kannada
1 ನೇ ಐಫೋನ್ ಲಾಂಚ್‌ನಲ್ಲಿ ಕುಡಿದ ಆಪಲ್ ಇಂಜಿನಿಯರ್
ಜನವರಿ 9, 2007 ರಂದು ಸ್ಟೀವ್ ಜಾಬ್ಸ್ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿದಾಗ, ಆಪಲ್ ಇಂಜಿನಿಯರ್‌ಗಳು ಮತ್ತು ವ್ಯವಸ್ಥಾಪಕರು ಪ್ರೇಕ್ಷಕರ ನಡುವೆ ಕುಳಿತು ವಿಸ್ಕಿ ಮತ್ತು ಸ್ಕಾಚ್ ಕುಡಿಯುತ್ತಿದ್ದರು.
Kannada
ಆಪಲ್ ಇಂಜಿನಿಯರ್‌ಗಳು ಮದ್ಯ ಸೇವಿಸಿದ್ದು ಏಕೆ
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಸ್ಟೀವ್ ಜಾಬ್ಸ್ ಮೊದಲ ಐಫೋನ್ ಅನ್ನು ಪರಿಚಯಿಸುತ್ತಿದ್ದಾಗ ಆಪಲ್ ಇಂಜಿನಿಯರ್‌ಗಳು ತುಂಬಾ ನರ್ವಸ್ ಆಗಿದ್ದರು. ಏನಾದರೂ ತಪ್ಪಾದರೆ ಸ್ಟೀವ್ ಕೋಪಗೊಳ್ಳುತ್ತಾರೆಂದು ಹೆದರಿದ್ದರು
Kannada
ಮೊದಲ ಐಫೋನ್‌ನಲ್ಲಿ ಏನಾದರೂ ದೋಷಗಳಿದ್ದವಾ?
ವರದಿಗಳ ಪ್ರಕಾರ, ಸ್ಟೀವ್ ಜಾಬ್ಸ್ ಬಿಡುಗಡೆ ಮಾಡಿದ ಮೊದಲ ಐಫೋನ್ ಹ್ಯಾಂಡ್‌ಸೆಟ್‌ನಲ್ಲಿ ಹಲವು ನ್ಯೂನತೆಗಳಿದ್ದವು. ಫೋನ್ ಸರಿಯಾಗಿ ಕೆಲಸ ಮಾಡದಿದ್ದರೆ ಸ್ಟೀವ್ ಬೈಯುತ್ತಾರೆ ಎಂದು ಇಂಜಿನಿಯರ್‌ಗಳು ಹೆದರುತ್ತಿದ್ದರು.
Kannada
ಕ್ರ್ಯಾಶ್ ಆಗಬಹುದಿತ್ತು ಮೊದಲ ಐಫೋನ್
ಮೊದಲ ಐಫೋನ್ ವೀಡಿಯೊ-ಹಾಡನ್ನು ಪ್ಲೇ ಮಾಡಬಹುದು ಆದರೆ ಪೂರ್ಣ ವೀಡಿಯೊ ಕ್ಲಿಪ್ ಪ್ಲೇ ಆದರೆ ಅದು ಕ್ರ್ಯಾಶ್ ಆಗಬಹುದು, ಅಪ್ಲಿಕೇಶನ್ ಸರಿಯಾಗಿ ಡೆವೆಲಪ್ ಆಗಿರಲಿಲ್ಲ ಹೀಗಾಗಿ ಹೆದರಿದ್ದರು.