ಸ್ಯಾಮ್‌ಸಂಗ್ S24 ಗ್ಯಾಲಕ್ಸಿ ಅಲ್ಟ್ರಾ ಫೋನ್‌ಗೆ ಭರ್ಜರಿ ಡಿಸ್ಕೌಂಟ್, ಸೀಮಿತ ಅವಧಿ ಆಫರ್!

By Chethan Kumar  |  First Published Sep 20, 2024, 3:05 PM IST

ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ ಢಿಸ್ಕೌಂಟ್ ಆಫರ್ ನೀಡಲಾಗಿದೆ. ಇದರ ಜೊತೆಗೆ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಆಫರ್ ಲಭ್ಯವಿದೆ. ಇದು ಸೀಮಿತ ಅವಧಿ ಆಫರ್.


ಬೆಂಗಳೂರು(ಸೆ.20) ಸ್ಯಾಮ್‌ಸಂಗ್ ಭಾರತದಲ್ಲಿ ಇದೀಗ ಗ್ಯಾಲಕ್ಸಿ ಫೋನ್‌ಗೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಪ್ರಮುಖವಾಗಿ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ಗೆ ಡಿಸ್ಕೌಂಟ್ ನೀಡಲಾಗಿದೆ. ಈಗಾಗಲೇ ಸೀಮಿತ ಅವಧಿ ಆಫರ್ ಜಾರಿಯಾಗಿದೆ. ಈ ಡಿಸ್ಕೌಂಟ್ ಆಫರ್ ಮೂಲಕ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ 1,09,999 ರೂಪಾಯಿಗೆ ಲಭ್ಯವಾಗಿದೆ. ಇದರ ಮೂಲ ಬೆಲೆ 1,29,999 ರೂಪಾಯಿ. ಇದರ ಜೊತೆಗೆ 8000ರ ಇನ್ ಸ್ಟಾಂಟ್ ಕ್ಯಾಶ್ ಬ್ಯಾಕ್,  12000ರ ಹೆಚ್ಚುವರಿ ಅಪ್‌ಗ್ರೇಡ್ ಬೋನಸ್ ಒಳಗೊಂಡಿರುತ್ತದೆ. ಇದರ ಜೊತೆ ಬ್ಯಾಂಕ್ ಕ್ಯಾಶ್‌ಬ್ಯಾಕ್ 12000 ಪಡೆಯಲು ಸಾಧ್ಯವಿದೆ. ಇದರ ಜೊತೆಗೆ 24 ತಿಂಗಳ ವರೆಗೆ ನೋ ಕಾಸ್ಟ್ ಇಎಂಐ ಸೌಲಭ್ಯವೂ ಲಭ್ಯವಿದೆ. 

ಸ್ಯಾಮ್‌ಸಂಗ್ ಎಸ್ 24 ಗ್ಯಾಲಕ್ಸಿ ಫೋನ್ ಹಲವು ವಿಶೇಷತೆ ಹೊಂದಿದೆ. ಲೈವ್ ಟ್ರಾನ್ಸ್‌ ಲೇಟ್‌ ಫೀಚರ್ ಮೂಲಕ ತಕ್ಷಣವೇ ಫೋನ್ ಕಾಲ್ ನ ವಾಯ್ಸ್  ಟೆಕ್ಸ್ಟ್ ಅನುವಾದಿಸಲು ಸಾಧ್ಯವಿದೆ.ಇಂಟರ್ ಪ್ರಿಟರ್ ಫೀಚರ್ ಮೂಲಕ ಲೈವ್ ಸಂಭಾಷಣೆಗಳನ್ನು ಸ್ಪ್ಲಿಟ್ ಸ್ಕ್ರೀನ್ ಡಿಸ್ ಪ್ಲೇ ಸೌಲಭ್ಯದ ಮೂಲಕ ತಕ್ಷಣವೇ ಅನುವಾದಿಸಬಹುದು. ಫೋನ್ ಡೇಟಾ ಅಥವಾ ವೈ-ಫೈ ಇಲ್ಲದೆಯೂ ಈ ಫೋನ್ ನಲ್ಲಿ ಸಂದೇಶಗಳು ಮತ್ತು ಇತರ ಹಲವು ಆಪ್ ಗಳು ಕಾರ್ಯನಿರ್ವಹಿಸುತ್ತದೆ. ಜೊತೆಗೆ ಚಾಟ್ ಅಸಿಸ್ಟ್ ಫೀಚರ್ ಸೂಕ್ತವಾದ ಸಂವಹನದ ಟೋನ್ ಗಳನ್ನು ಹೊಂದಲು ಸೂಚನೆ ನೀಡುತ್ತದೆ. ಆ ಮೂಲಕ ಸಂವಹನವನ್ನು ನೀವು ಉದ್ದೇಶಿಸಿದ ರೀತಿಯಲ್ಲಿ ನಡೆಸಬಹುದು. ಎಐ ಆಧರಿತ ಸ್ಯಾಮ್ ಸಂಗ್ ಕೀಬೋರ್ಡ್‌ ಮೂಲಕವೂ ಹಿಂದಿ ಸೇರಿದಂತೆ ಇತರ 13 ಪ್ರಾದೇಶಿಕ ಭಾಷೆಗಳಿಗೆ ತಕ್ಷಣವೇ ಸಂದೇಶಗಳನ್ನು ಅನುವಾದಿಸಬಹುದು.

Tap to resize

Latest Videos

ಪ್ರಾಣ ಉಳಿಸುವ ಫೀಚರ್, ಎದೆಬಡಿತ ವ್ಯತ್ಯಾಸವಾದರೆ ಅಲರ್ಟ್ ನೀಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್!
 
ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ ಪ್ರೊ ವಿಶುವಲ್ ಎಂಜಿನ್ ಫೀಚರ್ ಹೊಂದಿದೆ. ಇದು ಎಐ ಆಧರಿತ ಸಮಗ್ರ ಗುಂಪು ಆಗಿದ್ದು, ಫೋಟೋ ಸೆರೆಹಿಡಿಯುವ ರೀತಿಯನ್ನೇ ಬದಲಿಸಲಿದೆ. ಸೃಜನಶೀಲವಾಗಿ ಫೋಟೋ ಸಿದ್ಧಗೊಳಿಸಲು ಅನುವು ಮಾಡಿ ಕೊಡಲಿದೆ. 2x, 3x, 5x ನಿಂದ 10x ವರೆಗೆ ಜೂಮ್ ಮಟ್ಟಗಳನ್ನು ಹೊಂದಿಸಲು ನೆರವಾಗುವ 50 ಎಂಪಿ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುವ 5x ಆಪ್ಟಿಕಲ್ ಜೂಮ್ ಲೆನ್ಸ್‌ ಹೊಂದಿರುವ ಕ್ವಾಡ್ ಟೆಲಿ ಸಿಸ್ಟಮ್ ಅನ್ನು ಗ್ಯಾಲಕ್ಸಿ ಎಸ್24 ಅಲ್ಟ್ರಾ ಹೊಂದಿದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ 6.8 ಇಂಚಿನ ಫ್ಲಾಟ್ ಡಿಸ್ ಪ್ಲೇ ಹೊಂದಿದೆ.ಗ್ಯಾಲಕ್ಸಿಗಾಗಿ ರೂಪುಗೊಳಿಸಿರುವ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದು, ಇದು ಅತ್ಯಪೂರ್ವ ಎಐ ಪ್ರಕ್ರಿಯೆಯಗಳನ್ನು ಸಾಧ್ಯವಾಗಿಸುವ ಅದ್ಭುತ ಎನ್ ಪಿ ಯು ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ

ಗ್ಯಾಲಕ್ಸಿ ಎಸ್24 ಅಲ್ಟ್ರಾ ನಲ್ಲಿರುವ ಕಾರ್ನಿಂಗ್ ® ಗೊರಿಲ್ಲಾ® ಆರ್ಮರ್ ಫೋನ್ ಬಾಳಿಕೆ ಹೆಚ್ಚಿಸಿದೆ. ಈ ಸ್ಮಾರ್ಟ್ ಫೋನ್ ಟೈಟಾನಿಯಂ ಗ್ರೇ, ಟೈಟಾನಿಯಂ ವೈಲೆಟ್, ಟೈಟಾನಿಯಂ ಬ್ಲಾಕ್ ಮತ್ತು ಟೈಟಾನಿಯಂ ಹಳದಿ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಟೈಟಾನಿಯಂ ಫ್ರೇಮ್ ಅನ್ನು ಒಳಗೊಂಡಿರುವ ಮೊದಲ ಗ್ಯಾಲಕ್ಸಿ ಫೋನ್ ಆಗಿದ್ದು, ದೀರ್ಘ ಬಾಳಿಕೆ ಮತ್ತು ದೀರ್ಘಾಯುಷ್ಯ ಹೊಂದುವಂತೆ ವಿನ್ಯಾಗೊಂಡಿದೆ. 

ನಿಮ್ಮ ಫೋನ್ ಚಾರ್ಜರ್‌ ಒರಿಜಿನಲ್ಲಾ, ಡೂಪ್ಲಿಕೇಟಾ? ಚೆಕ್‌ ಮಾಡ್ಕೊಳ್ಳಿ!

click me!