ಬ್ಯಾಂಡ್, ಪ್ರೊಜೆಕ್ಟರ್ ಜತೆಗೆ ಎಂಐ 11 ಸೀರೀಸ್ ಫೋನ್‌ ಲಾಂಚ್

By Suvarna News  |  First Published Mar 30, 2021, 2:18 PM IST

ಚೀನಾ ಮೂಲದ ಶಿಯೋಮಿ ಎಂ11 ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಸ್ಮಾರ್ಟ್ ಬ್ಯಾಂಡ್ ಮತ್ತು ಸ್ಮಾರ್ಟ್‌ ಪ್ರೊಜೆಕ್ಟರ್ ಜತೆಗೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಂಐ 11 ಸೀರೀಸ್ ಫೋನ್‌ಗಳ ಬಗ್ಗೆ ಹಲವು ದಿನಗಳಿಂದ ಭಾರಿ ಸುದ್ದಿಯಾಗುತ್ತಿತ್ತು. ಈ ಪೈಕಿ ಎಂಐ 11 ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.


ಬಹು ದಿನಗಳಿಂದ ಸಂಚಲನ ಸೃಷ್ಟಿಸಿದ್ದ ಶಿಯೋಮಿಯ ಎಂಐ 11 ಸೀರೀಸ್  ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಕಂಪನಿಯು ಸೋಮವಾರ ಎಂಐ 11 ಅಲ್ಟ್ರಾ, ಎಂಐ 11 ಲೈಟ್, ಎಂಐ 11 ಲೈಟ್ಸ್ 5ಜಿ, ಎಂಐ 11 ಪ್ರೋ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಎಂಐ ಸ್ಮಾರ್ಟ್‌ ಬ್ಯಾಂಡ್ 6 ಮತ್ತು ಎಂಐ ಸ್ಮಾರ್ಟ್ ಪ್ರೊಜೆಕ್ಟರ್ 2 ಪ್ರೋ ಸಾಧನಗಳನ್ನು ಲಾಂಚ್ ಮಾಡಿದೆ.

ಕೊರೋನಾ ಕಾಡಿದ್ರೂ ಆನ್‌ಲೈನ್‌ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರೀ ಏರಿಕೆ

Tap to resize

Latest Videos

undefined

ಈ ಪೈಕಿ ಶಿಯೋಮಿಯ ಎಂಐ 11 ಅಲ್ಟ್ರಾ ಪ್ರೀಮಿಯಂ  ಸ್ಮಾರ್ಟ್‌ಫೋನ್ ಆಗಿದ್ದು, 120 ಹಜಾರ್ಡ್ಸ್ ಒಎಲ್‌ಇಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್, 67 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ ಮತ್ತು ಡಿಸ್‌ಪ್ಲೆಯಲ್ಲೇ ಫಿಂಗರ್ ಫ್ರಿಂಟ್ ಸೆನ್ಸರ್ ನೀಡಲಾಗಿದೆ.

ಈ ಫೋನ್‌ನ ಹಿಂಬದಿಯಲ್ಲಿ ಕಿರಿದಾದ ಎರಡನೆಯ ಡಿಸ್‌ಪ್ಲೇಯನ್ನು ಕೊಡಲಾಗಿದ್ದು, ಮುಖ್ಯ ಡಿಸ್‌ಪ್ಲೇಯಲ್ಲಿ ಕಾಣಿಸಿಕೊಳ್ಳುವ ನೋಟಿಫಿಕೇಷನ್‌ಗಳನ್ನು ಈ ಡಿಸ್‌ಪ್ಲೇಯಲ್ಲಿ ಪ್ರತಿಫಲನಗೊಳ್ಳುವಂತೆ ಮಾಡುತ್ತದೆ.  ಇನ್ನು ಶಿಯೋಮಿ ಎಂಐ ಲೈಟ್ ಮಧ್ಯಮ ವ್ಯಾಪ್ತಿಯ ಸ್ಮಾರ್ಟ್ ಫೋನ್ ಆಗಿದ್ದು, ಅಮೋಎಲ್ಇಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 780 ಪ್ರೊಸೆಸರ್, 64 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು, 33 ವ್ಯಾಟ್ ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಶಿಯೋಮಿಯ ಎಂಐ 11 ಅಲ್ಟ್ರಾ ಬೆಲೆ ಅಂದಾಜು 62 ಸಾವಿರ ರೂ.(8ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್). 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್‌ನ ಮಾಡೆಲ್‌ಗೆ ಅಂದಾಜು 66,500 ರೂಪಾಯಿ ಇದ್ದರೆ, 16 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಮಾಡೆಲ್‌ಗೆ ಅಂದಾಜು  77,500 ರೂ. ಆಗಬಹುದು.

ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?

8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಶಿಯೋಮಿ ಎಂಐ 11 ಪ್ರೋ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 55,400 ರೂ. ಆಗಬಹುದು. ಇದೇ ವೇಳೆ, 8ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್‌ ಬೆಲೆ 58,700 ರೂಪಾಯಿಯಾದರೆ, 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಮಾಡೆಲ್ ಬೆಲೆ  ಅಂದಾಜು 63,100 ರೂ. ಆಗಬಹುದು. ಇನ್ನು ಶಿಯೋಮಿ ಎಂಐ 11 ಲೈಟ್ ಸ್ಮಾರ್ಟ್‌ಫೋನ್ ಬೆಲೆ 25,500ರಿಂದ 28,800 ರೂಪಾಯಿವರೆಗೂ ಇರಲಿದೆ ಎಂದು ಲೆಕ್ಕಹಾಕಲಾಗಿದೆ.

ಪ್ರಿಮಿಯಂ ಸ್ಮಾರ್ಟ್‌ಫೋನ್ ಆಗಿರುವ ಎಂಐ 11 ಅಲ್ಟ್ರಾ ಹಲವು ವಿಶಿಷ್ಟವಾದ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ 6.81 ಇಂಚ್ ಇದ್ದು, ಕ್ಯುಎಚ್‌ಡಿ ಪ್ಲಸ್ ಸ್ಯಾಮ್ಸಂಗ್ ಇ4 ಅಮೋಎಲ್‌ಇಡಿ ಸ್ಕ್ರೀನ್ ಒಳಗೊಂಡಿದೆ.  

12 ಜಿಬಿವರೆಗೂ ರ್ಯಾಮ್ ಮತ್ತು 512 ಜಿಬಿ ವರೆಗೂ ಸ್ಟೋರೇಜ್ ಪೇರ್‌ನೊಂದಿಗೆ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 ಆಧರಿತವಾಗಿದೆ ಈ ಪ್ರೀಮಿಯಂ ಸ್ಮಾರ್ಟ್‌ಫೋನ್. ಎಂಐಯುಐ 12.5 ಆಧರಿತ ಆಂಡ್ರಾಯ್ಡ್ 11 ಒಎಸ್ ಇದೆ. ಕನೆಕ್ಟಿವಿಟಿ  ಬಗ್ಗೆ ಹೇಳುವುದಾದರೆ, 5ಜಿ ಮತ್ತು 4ಜಿ ವೋಎಲ್‌ಟಿಗೆ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತದೆ. ವೈಫೈ 6, ಬ್ಲೂಟೂಥ್ 5.1, ಜಿಪಿಎಲ್, ಎನ್‌ಎಫ್‌ಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಚಾರ್ಜಿಂಗ್ ಮತ್ತು ಡೇಟಾ ಸಿಂಕ್ ಮಾಡಲು ಕೊಡಲಾಗಿದೆ. 5,00 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ದ್ದು, 67 ವ್ಯಾಟ್ ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ,  10 ವ್ಯಾಟ್ ರಿವರ್ಸ್ ಚಾರ್ಜಿಂಗ್ ಕೂಡ ಮಾಡಲು ಅವಕಾಶ ಕಲ್ಪಿಸುತ್ತದೆ.

1,19,000 ರೂ. ಬೆಲೆಯ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್ ಬಿಡುಗಡೆ

ಈ ಫೋನ್‌ನಲ್ಲಿ ಮೂರು ಕ್ಯಾಮೆರಾಗಳ ಸೆಟ್‌ ಅಪ್ ಇದೆ. ಪ್ರೈಮರಿ ಕ್ಯಾಮೆರಾ ಆಗಿ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ವೈಡ್ ಆಂಗಲ್‌ಗಾಗಿ ಎರಡನೇ ಕ್ಯಾಮೆರಾ ಆಗಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಮೂರನೆಯ ಕ್ಯಾಮೆರಾ ಕೂಡ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ.

click me!