ಶೀಘ್ರವೇ ಸಖತ್ ಕ್ಯಾಮೆರಾ ಇರುವ ಎಂಐ 11 ಸೀರೀಸ್ ಸ್ಮಾರ್ಟ್‌ಫೋನ್‌ ಬಿಡುಗಡೆ

By Suvarna News  |  First Published Mar 27, 2021, 5:47 PM IST

ಕಳೆದ ತಿಂಗಳವಷ್ಟೇ ಜಾಗತಿಕವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಎಂಐ 11 ಸೀರೀಸ್‌ ಸ್ಮಾರ್ಟ್‌ಫೋನ್‌ಗಳು ಶೀಘ್ರವೇ ಭಾರತದ ಮಾರುಕಟ್ಟೆಗೂ ಬಿಡುಗಡೆಯಾಗಲಿವೆ. ಈ ಟ್ವೀಟ್ ಮಾಡಿರುವ ಶಿಯೋಮಿ ಇಂಡಿಯಾ ಯಾವುದೇ ನಿರ್ದಿಷ್ಟ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಆದರೂ, ಮಾರ್ಚ್ 29ರಂದು ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.


ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಚೀನಾ ಮೂಲದ ಶಿಯೋಮಿ ತನ್ನ ಎಂಐ 11 ಸೀರೀಸ್‌ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಮುಂದಾಗಿದೆಯಾ?

1,19,000 ರೂ. ಬೆಲೆಯ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್ ಬಿಡುಗಡೆ

Tap to resize

Latest Videos

undefined

ಮಾ.23ರಂದು ಟ್ವಿಟರ್‌ನಲ್ಲಿ ಶಿಯೋಮಿ ಮಾಡಿರುವ ಟ್ವೀಟ್‌ನಲ್ಲಿ ಶೀಘ್ರವೇ ಭಾರತದಲ್ಲಿ ಎಂಐ 11 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಬರಲಿವೆ ಎಂದು ತಿಳಿಸಲಾಗಿದೆ. ಆದರೆ, ಯಾವ ದಿನಾಂಕದಂದು ಭಾರತದಲ್ಲಿ ಬಿಡುಗಡೆ ಕಾಣಲಿವೆ ಎಂಬುದನ್ನು ಖಚಿತಪಡಿಸಿಲ್ಲ. ಹಾಗೆಯೇ, ಎಂಐ 11 ಸೀರೀಸ್‌ನಲ್ಲಿ ಯಾವ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬುದರ ಬಗ್ಗೆಯೂ ತಿಳಿಸಿಲ್ಲ. ವಿಶೇಷ ಎಂದರೆ, ಎಂಐ 11 ಸೀರೀಸ್ ‌ಫೋನ್‌ಗಳನ್ನು ಶಿಯೋಮಿ ಕಳೆದ ತಿಂಗಳವೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ, ಆಗ ಭಾರತೀಯ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರಲಿಲ್ಲ.

ವಿಶೇಷ ಎಂದರೆ, ಎಂಐ 11 ಪ್ರೋ ಮತ್ತು ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳನ್ನು ಮಾರ್ಚ್ 29ರಂದು  ಬಿಡುಗಡೆ ಮಾಡುವ ಸಂಬಂಧ ಶಿಯೋಮಿ ಟೀಸರ್ ಬಿಡುಗಡೆ ಮಾಡಿತ್ತು. ಬಹುಶಃ ಇದೇ ಕಾರ್ಯಕ್ರಮದಲ್ಲಿ ಎಂಐ 11 ಲೈಟ್‌ ಕೂಡ ಬಿಡುಗಡೆಯಾಗಬಹುದು. ಆದರೆ, ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಶಿಯೋಮಿಇಂಡಿಯಾ ಟ್ವೀಟ್ ಪ್ರಕಾರ, ಎಂಐ 11 ಸೀರೀಸ್ ‌ಫೋನ್‌ಗಳು ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿವೆ.

ಆರ್‌ಐಎಲ್ ಎಜಿಎಂ ವೇಳೆ ಜಿಯೋ ಲ್ಯಾಪ್‌ಟ್ಯಾಪ್, 5ಜಿ ಫೋನ್ ಬಿಡುಗಡೆ?

ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚ್ ಕರ್ವ್ಡ್ ಒಎಲ್ಇಡಿ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆರ್, 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ. ಈ ಬ್ಯಾಟರಿ ನಿಮಗೆ 67 ವ್ಯಾಟ್ ತಂತಿ ಸಹಿತ ಚಾರ್ಜಿಂಗ್ ಹಾಗೂ 10 ವ್ಯಾಟ್ ರಿವರ್ಸ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ನಿಮಗೆ  ಐಪಿ68 ಧೂಳು ನಿರೋಧಕ ಹಾಗೂ ವಾಟರ್ ರೆಜಿಸ್ಟೆನ್ಸ್ ರೂಪದಲ್ಲಿ ಸಿಗಬಹುದು.

ಎಂಐ11 ಸ್ಮಾರ್ಟ್‌ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹಾಗೂ  48 ಮೆಗಾಪಿಕ್ಸೆಲ್ ವೈಡ್ ಆಂಗಲ್ ಶೂಟರ್ ಹಾಗೂ ಪೆರಿಸ್ಕೋಪಿಕ್ ಟೆಲಿಫೋಟೋ ಲೆನ್ಸ್‌ನ 48 ಮೆಗಾ ಪಿಕ್ಸೆಲ್ ಕ್ಯಾಮೆರಾಗಳ ಸೆಟ್‌ಅಪ್ ಇರುವ ಸಾಧ್ಯತೆ ಇದೆ.

ಈ ಎಂಐ 11 ಲೈಟ್ ಸ್ಮಾರ್ಟ್‌ಫೋನ್ 6.55 ಇಂಚ್ ಫುಲ್ ಎಚ್ ಪ್ಲಸ್ ಅಮೋ ಎಲ್ಇಡಿ ಡಿಸ್‌ಪ್ಲೇ ಹೊಂದಿಬಹುದಾಗಿದೆ. ಫೋನಿನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರುವ ಸಾಧ್ಯತೆ ಇದೆ.  ಈ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಎರಡನೇ ಕ್ಯಾಮೆರಾ  8 ಮೆಗಾ ಪಿಕ್ಸೆಲ್ ಹಾಗೂ ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆ ಎಂಬುದು ಸೋರಿಕೆಯಾದ ಮಾಹಿತಿಯಿಂದ ತಿಳಿದು ಬಂದಿದೆ. ಫೋನ್‌ನ ಮುಂಬದಿಯಲ್ಲಿ 20 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗುತ್ತಿದೆ.  33 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 4,250 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿ ಇರಲಿದೆ.

ಭಾರತಕ್ಕೆ ಲಗ್ಗೆ ಇಟ್ಟ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52, ಎ72 ಸ್ಮಾರ್ಟ್‌ಫೋನ್

ಸ್ನ್ಯಾಪ್‌ಡ್ರಾಗನ್ 732ಜಿ ಪ್ರೊಸೆಸರ್ ಆಧರಿತ ಎಂಐ 11 ಲೈಟ್ ಸ್ಮಾರ್ಟ್‌ಫೋನ್ 4ಜಿ ವೆರಿಯೆಂಟ್ ಆಗಿರುವ ಸಾಧ್ಯತೆ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ನ 5ಜಿ ವೆರಿಯೆಂಟ್‌ ಸ್ನ್ಯಾಪ್‌ಡ್ರಾಗನ್ 765ಜಿ ಪ್ರೊಸೆರ್ ಆಧರಿತವಾಗಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಆ ಸ್ಮಾರ್ಟ್‌ಫೋನ್‌ ಎಂಐಯುಐ 12 ಜೊತೆಗೆ ಆಂಡ್ರಾಯ್ಡ್ 11 ಆಪರೇಟಿಂಗ್ ಸಾಫ್ಟ್‌ವೇರ್‌ದಿಂದ ರನ್ ಆಗಲಿದೆ.

ಎಂಐ 11 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿಶೇಷತೆಗಳು ಎಂಐ 11 ಮತ್ತು ಎಂಐ 11 ಪ್ರೊ ರೀತಿಯಲ್ಲೇ ಇರಲಿವೆ.

click me!