ಕೊರೋನಾ ಕಾಡಿದ್ರೂ ಆನ್‌ಲೈನ್‌ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರೀ ಏರಿಕೆ

By Suvarna News  |  First Published Mar 29, 2021, 3:33 PM IST

ಕೊರೊನಾ ಸೋಂಕು ಪರಿಸ್ಥಿತಿಯು ಬಹುತೇಕ ಎಲ್ಲ ವ್ಯಾಪಾರ ವಹಿವಾಟು ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ, ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರಾಟದ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ. ಯಾಕೆಂದರೆ, 2020ರಲ್ಲಿ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇ.45ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.


ಭಾರತದಲ್ಲಿ ಇ ಕಾಮರ್ಸ್‌ಗೆ ಈಗ ಏರುಗತಿಯ ಕಾಲ. ಭಾರತೀಯರು ಈಗ ಹೆಚ್ಚಾಗಿ ತಮ್ಮ ಶಾಪಿಂಗ್ ಅನ್ನು ಈ ಆನ್‌ಲೈನ್ ತಾಣಗಳ ಮೂಲಕವೇ ಮಾಡುತ್ತಿದ್ದಾರೆಂಬುದು ಗೊತ್ತಿರುವ ಸಂಗತಿಯಾಗಿದೆ. ಕಳೆದ ವರ್ಷ ಈ ಇ-ಕಾಮರ್ಸ್ ತಾಣಗಳ ಮೂಲಕ, ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರ್ಕೆಟ್ ದಾಖಲೆಯಲ್ಲಿ ವಹಿವಾಟು ನಡೆಸಿದೆ.

ಹೌದು, ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, ಭಾರತದ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರ್ಕೆಟ್, 2020ರಲ್ಲಿ ಶೇ.45ರಷ್ಟು ಪಾಲು ಮೂಲಕ ಈವರೆಗಿನ ಅತಿ ಹೆಚ್ಚು ಎಂಬ ದಾಖಲೆ ಬರೆದಿದೆ. ಎಂದಿನಂತೆ ಇದರಲ್ಲಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣ ಮುಂಚೂಣಿಯಲ್ಲಿದೆ.  ಕೊರೊನಾ ಸೋಂಕುಪೀಡಿತ ವರ್ಷವಾಗಿದ್ದ 2020ರಲ್ಲಿ ಶೇ.7ರಷ್ಟು ಬೆಳವಣಿಗೆ ಮೂಲಕ ದಾಖಲೆ ಬರೆದಿರುವುದು ಸಾಧನೆಯೇ ಸರಿ.

Tap to resize

Latest Videos

undefined

ಶೀಘ್ರವೇ ಸಖತ್ ಕ್ಯಾಮೆರಾ ಇರುವ ಎಂಐ 11 ಸೀರೀಸ್ ಸ್ಮಾರ್ಟ್‌ಫೋನ್‌ ಬಿಡುಗಡೆ

ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರತೀಯ ಮೂಲದ ಫ್ಲಿಪ್‌ಕಾರ್ಟ್ ಅಗ್ರಸ್ಥಾನದಲ್ಲಿ. 2020ರಲ್ಲಿ ಫ್ಲಿಪ್‌ಕಾರ್ಟ್ ಶೇ.48ರಷ್ಟು ತನ್ನ ಪಾಲಿನ ಮೂಲಕ ಮೊದಲನೆಯ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಅಮೆರಿಕ ಮೂಲದ ಅಮೆಜಾನ್ ಇದ್ದು, ಅದು ಶೇ.44ರಷ್ಟು ಪಾಲು ಹೊಂದಿದೆ. ವಿಶೇಷ ಎಂದರೆ, 2020ರಲ್ಲಿ ಆನ್‌ಲೈನ್ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಸಂಬಂಧಿಸಿದಂತೆ ಅಮೆಜಾನ್ ಶೇ.34ರಷ್ಟು ಬೆಳವಣಿಗೆ ದಾಖಲಿಸಿದ್ದು, ಅತಿ ವೇಗವಾಗಿ ಬೆಳೆಯುತ್ತಿರುವ ಆನ್‌ಲೈನ್ ವೇದಿಕೆಯಾಗಿ ಗುರುತಿಸಿಕೊಂಡಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ತನ್ನ ವರದಿಯಲ್ಲಿ ಶುಕ್ರವಾರ ತಿಳಿಸಿದೆ. 

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಿಂಹಪಾಲು ಪಡೆದಿರುವ ಚೀನಾ ಮೂಲದ ಶಿಯೋಮಿ ಈ ಆನ್ಲೈನ್ ಸ್ಮಾರ್ಟ್‌ಫೋನ್ ವಹಿವಾಟಿನಲ್ಲೂ ಅಗ್ರ ಸ್ಥಾನದಲ್ಲಿದೆ. ರೆಡ್‌ಮಿ ಮತ್ತು ಪೋಕೋ ಬ್ರ್ಯಾಂಡ್‌ಗಳು ನೆರವಿನಿಂದ ಶಿಯೋಮಿ ಶೇ.40ರಷ್ಟು ಪಾಲನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಸ್ಯಾಮ್ಸಂಗ್ ಬ್ರ್ಯಾಂಡ್ ಶೇ.19ರಷ್ಟು ಪಾಲಿನೊಂದಿಗೆ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ಯಾಲಕ್ಸಿ ಎಂ ಸೀರೀಸ್ ಮೂಲಕ ಸ್ಯಾಮ್ಸಂಗ್ ಹೆಚ್ಚಿನ ಗ್ರಾಹಕರನ್ನು ತಲುಪಲು ಯಶಸ್ವಿಯಾಗಿದೆ.  ಅಮೆಜಾನ್‌ ಮೂಲಕ ಮಾರಾಟದ ಸ್ಮಾರ್ಟ್‌ಫೋನ್‌ಗಳ ಪೈಕಿ ಸ್ಯಾಮ್ಸಂಗ್ ಮೂರನೇ ಒಂದು ಭಾಗವನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ, ರಿಯಲ್‌ಮಿ ಕೂಡ ಈ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಶೇ.19ರಷ್ಟು ಪಾಲನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?

ಇದೇ ವೇಳೆ, 2020ರ ವರ್ಷದಲ್ಲಿ ರಿಯಲ್‌ಮಿ ಬ್ರ್ಯಾಂಡ್ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ತಾಣದಲ್ಲಿ ಮೊದಲನೇ ಸ್ಥಾನದಲ್ಲಿದೆ. ಒಂದು ವರ್ಷದಲ್ಲಿ ಶೇ.27ರಷ್ಟು ಬೆಳವಣಿಗೆಯನ್ನು ಈ ರಿಯಲ್‌ಮಿ ದಾಖಲಿಸಿದೆ ಎನ್ನುತ್ತಿದೆ ವರದಿ. ರಿಯಲ್‌ಮಿ, ಶಿಯೋಮಿ, ಸ್ಯಾಮ್ಸಂಗ್ ಬ್ರ್ಯಾಡ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ವಿವೋ, ತನ್ನ ವೈ9ಐ, ವೈ20 ಮತ್ತು ವಿ20 ಸೀರೀಸ್‌ಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.

ಭಾರತ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಟ್ಟಾರೆಯಾಗಿ ಐದನೆಯ ಸ್ಥಾನದಲ್ಲಿರುವ ಒನ್‌ಪ್ಲಸ್, ಪ್ರೀಮಿಯಂ ಸ್ಮಾರ್ಟ್‌ಫೋನ್ ಆನ್ ಲೈನ್ ಮಾರಾಟದಲ್ಲಿ, ಅಮೆಜಾನ್ ವೇದಿಕೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿ ಹೇಳಿದೆ. ಪ್ರಮುಖ ಟಾಪ್ 5 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಒಟ್ಟಾರೆ ಶೇ.82ರಷ್ಟು ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕ್ಟಟೆಯ ಪಾಲನ್ನು ಹೊಂದಿವೆ. 

1,19,000 ರೂ. ಬೆಲೆಯ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್ ಬಿಡುಗಡೆ

ಫ್ಲಿಪ್‌ಕಾರ್ಟ್ ಇ-ತಾಣದಲ್ಲಿ ರಿಯಲ್‌ಮಿ ಮತ್ತು ಪೋಕೋ ಟಾಪ್ ಬ್ರ್ಯಾಂಡ್‌ಗಳಾಗಿದ್ದು, ಶೇ.30ರಷ್ಟು ಪಾಲನ್ನು ಹೊಂದಿವೆ. ಅದೇ ರೀತಿ, ಅದೇ ರೀತಿ, ಪ್ರೀಮಿಯಂ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕೂಡ ಶೇ.22ರಷ್ಟು ಬೆಳವಣಿಗೆಯನ್ನು 2020ರಲ್ಲಿ ದಾಖಲಿಸಿದೆ. ಆಪಲ್, ಒನ್‌ಪ್ಲಸ್, ಸ್ಯಾಮ್ಸಂಗ್ ಬ್ರ್ಯಾಂಡ್‌ಗಳು ಈ ಸೆಗ್ಮೆಂಟ್‌ನಲ್ಲಿ ಹೆಚ್ಚಿನ ಪಾಲು ಹೊಂದಿದ್ದು, ಇದೇ ಕಂಪನಿಗಳು  ಶೇ.90ರಷ್ಟು ಮಾರಾಟ ಮಾಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

click me!