ಹಾಟ್‌ 10 ಪ್ಲೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಇನ್ಫಿನಿಕ್ಸ್‌!

By Suvarna News  |  First Published Apr 24, 2021, 2:46 PM IST

ಕೈಗೆಟುಕುವ ದರ, ಹಲವು ಆಫರ್, 6000 ಎಂಎಎಚ್‌ ಬ್ಯಾಟರಿ, 4ಜಿಬಿ RAM ಸೇರಿದಂತೆ ಹಲವು ವಿಶೇತೆಗಳ ಇನ್ಫಿನಿಕ್ಸ್ ಫೋನ್ ಬಿಡುಗಡೆಯಾಗಿದೆ. ನೂತನ ಫೋನ್ ಬೆಲೆ, ಫೀಚರ್ಸ್ ಹಾಗೂ ಲಭ್ಯತೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಬೆಂಗಳೂರು(ಏ.24): ಪ್ರಿಮಿಯಂ ಮೊಬೈಲ್‌ಗೆ ಹೆಸರುವಾಸಿಯಾದ ಇನ್ಫಿನಿಕ್ಸ್‌ ಮೊಬೈಲ್‌ ಸಂಸ್ಥೆಯು ಹೊಸ ಹಾಟ್‌ 10 ಪ್ಲೇ ಮೊಬೈಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಏಪ್ರಿಲ್‌ 26 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದ್ದು 8,499 ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ.

ಹಾಟ್‌ 10 ಸ್ಮಾರ್ಟ್‌ಫೋನ್‌ ಬಿಡುಗಡೆಗೊಳಿಸಿದ ಇನ್ಫಿನಿಕ್ಸ್‌...

ಈ ಹೊಚ್ಚ ಹೊಸ ಮೊಬೈಲ್‌ ಖರೀದಿಸಿದರೆ 349 ರೂಪಾಯಿಗಳ ಜಿಯೋ ಪ್ರಿಪೇಯ್ಡ್‌ ರಿಚಾರ್ಜ್‌ ಕೂಡ ಡಿಸಿಕೊಡಲಾಗುವುದರ ಜತೆಗೆ 4,000 ರೂಪಾಯಿ ಬೆಲೆಯ ಪ್ರಯೋಜನಗಳನ್ನು ಸಹ ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. 6.82 ಇಂಚಿನ ಎಚ್‌ಡಿ ದೊಡ್ಡ ಡಿಸ್‌ಪ್ಲೇ ಹೊಂದಿದ್ದು  ಸ್ಕ್ರೀನ್‌ ಟು ಬಾಡಿ ರೇಶಿಯೊ 90.66 ಇದೆ. ಒಳ್ಳೆಯ ವಿಡಿಯೋ ಅನುಭವಕ್ಕಾಗಿ ಡಿಟಿಎಸ್‌ ಸರೌಂಡಿಂಗ್‌ ಸೌಂಡ್‌ ವೈಶಿಷ್ಟ್ಯ ಕೂಡ ಹೊಂದಿದೆ.

Tap to resize

Latest Videos

undefined

6000 ಎಂಎಎಚ್‌ ಬ್ಯಾಟರಿಯನ್ನು ಹೊಂದಿದ್ದು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 55 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಇರುತ್ತದೆ. ಪವರ್‌ ಮ್ಯಾರಥಾನ್‌ ವೈಶಿಷ್ಟ್ಯವನ್ನು ಹೊಂದಿದ್ದು ಶೇಕಡ 25 ರಷ್ಟು ಹೆಚ್ಚು ಬ್ಯಾಟರಿ ಲೈಫ್‌ ಅನ್ನು ಹೆಚ್ಚಿಸುತ್ತದೆ.4 ಜಿಬಿ ರ್ಯಾಂ ಮತ್ತು 64 ಜಿಬಿ ಇಂಟರ್ನಲ್‌ ಮೊಮೊರಿಯನ್ನು ಹೊಂದಿದೆ. ಅಲ್ಟ್ರಾ ಪವರ್‌ ಹೆಲಿಯೋ ಜಿ35 ಒಕ್ಟಾ-ಕೋರ್‌ ಪ್ರೋಸೆಸರ್‌ ಹೊಂದಿದೆ. ಕೃತಕ ಬುದ್ದಿವಂತಿಕೆ ಹೊಂದಿದ್ದ 13 ಎಂಪಿಯ ಎರಡು ಹಿಂಬದಿ ಕ್ಯಾಮರವನ್ನು ಹೊಂದಿದೆ.

ಇನ್ಫಿನಿಕ್ಸ್ ತನ್ನ ಹಾಟ್ ಸರಣಿಯ ಮೂಲಕ ತನ್ನ ಬಳಕೆದಾರರಿಗೆ #ALotExtra ವೈಶಿಷ್ಟ್ಯಗಳನ್ನು ನೀಡುವಲ್ಲಿ ಯಾವಾಗಲೂ ನಂಬಿಕೆ ಇಟ್ಟಿದೆ. ಪ್ರತಿ ಬಾರಿ ನಾವು ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದಾಗ, ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಹಲವಾರು ಎಫ್‌ಐಎಸ್ಟಿ (ಫಸ್ಟ್ ಇನ್ ಸೆಗ್ಮೆಂಟ್ ಟೆಕ್ನಾಲಜಿ) ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮವಾಗಿಸುತ್ತೇವೆ, ಅದು ಯುವ ಪ್ರೇಕ್ಷಕರಿಗೆ ಬ್ಯಾಂಕ್ ಅನ್ನು ಮುರಿಯದೆ ಆಕರ್ಷಕವಾಗಿ ಮತ್ತು ವಿಶಿಷ್ಟವಾದ ಮೊಬೈಲ್ ಅನುಭವವನ್ನು ನೀಡುತ್ತದೆ. ವಾಸ್ತವವಾಗಿ ಹಾಟ್ ಸರಣಿಯ ಎಲ್ಲಾ ಸಾಧನಗಳನ್ನು ಆಕರ್ಷಕವಾಗಿ ಮತ್ತು ಹೆಚ್ಚು ಬೇಡಿಕೆಯನ್ನಾಗಿ ಮಾಡುವ ಪ್ರಾಥಮಿಕ ಕಾರಣವಾಗಿದೆ” ಎಂದು ಇನ್ಫಿನಿಕ್ಸ್ ಇಂಡಿಯಾದ ಸಿಇಒ ಅನೀಶ್ ಕಪೂರ್ ಹೇಳಿದರು. 

click me!