ಭಾರತದ ಬಹುದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ರಿಲಯನ್ಸ್‌ನ ಜಿಯೋ 5ಜಿ ಸ್ಮಾರ್ಟ್‌ಫೋನ್ ಹಾಗೂ ಕೈಗೆಟಕುವ ಜಿಯೋಬುಕ್ ಎಂಬ ಲ್ಯಾಪ್‌ಗಳನ್ನು ರಿಲಯನ್ಸ್ ಇಂಡಸ್ಟ್ರಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯ ವೇಳೆ ಬಿಡುಗಡೆ ಮಾಡಲಿದೆ ಎನ್ನುತ್ತಿವೆ ವರದಿಗಳು. ಈ ಎರಡು ಸಾಧನಗಳ ಬಗ್ಗೆ ಬಹಳ ದಿನಗಳಿಂದಲೂ ಮಾತುಗಳು ಕೇಳಿ ಬರುತ್ತಿವೆ ಮತ್ತು ಅವು ಈಗ ಬಿಡುಗಡೆ ಹಂತಕ್ಕೆ ಬಂದು ನಿಂತಿವೆ ಎನ್ನಬಹುದು.
ಟೆಲಿಕಾಂ ವಲಯದಲ್ಲಿ ದರ ಸಮರದ ಮೂಲಕವೇ ಕ್ರಾಂತಿ ಮಾಡಿರುವ ರಿಲಯನ್ಸ್‌ನ ಜಿಯೋ, 5ಜಿ ಸ್ಮಾರ್ಟ್ ಫೋನ್ ಹಾಗೂ ಜಿಯೋ ಬುಕ್ ಎಂಬ ಅಗ್ಗದ ಲ್ಯಾಪ್‌ಟ್ಯಾಪ್ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಸುಮಾರು ದಿನಗಳಿಂದಲೂ ಇದೆ. ಬಳಕೆದಾರರು ಕೂಡ ಈ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಭಾರತಕ್ಕೆ ಲಗ್ಗೆ ಇಟ್ಟ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52, ಎ72 ಸ್ಮಾರ್ಟ್‌ಫೋನ್
undefined
ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ, ರಿಲಯನ್ಸ್ ಜಿಯೋ ಶೀಘ್ರವೇ ತನ್ನ 5ಜಿ ಬೆಂಬಲಿತ ಸ್ಮಾರ್ಟ್‌ಫೋನ್ ಹಾಗೂ ಜಿಯೋ ಬುಕ್ ಲ್ಯಾಪ್ ಟ್ಯಾಪ್ ಅನ್ನು ಬಿಡುಗಡೆ ಮಾಡಲಿದೆ. ಈ ಎರಡು ಸಾಧನಗಳನ್ನು ಕಂಪನಿಯು ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ 2021 ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಟೆಲಿಕಾಂ ಟಾಕ್ ಸೇರಿ ಹಲವು ಸುದ್ದಿ ತಾಣಗಳು ವರದಿ ಮಾಡಿವೆ.
ಈಗಾಗಲೇ ಜಿಯೋ ಮೂಲಕ ಕಂಪನಿ ಟೆಲಿಕಾಂ ಸೇವೆ ಪೂರೈಕೆಯಲ್ಲಿ ತನ್ನದೇ ಜಾಲವನ್ನು ವಿಸ್ತರಿಸಿಕೊಂಡಿದೆ ಮತ್ತು ಈ ಕ್ಷೇತ್ರದ ಬೃಹತ್ ಕಂಪನಿಯಾಗಿದೆ. ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ಈ ಹಿಂದೆಯೂ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದ ಜಿಯೋ, ಇದೀಗ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದರ ಜೊತೆಗೆ, ಲ್ಯಾಪ್‌ಟ್ಯಾಪ್ ಸೆಗ್ಮೆಂಟ್‌ಗೂ ಕಾಲಿಡಲು ಯೋಚಿಸುತ್ತಿರುವ ಕಂಪನಿ, ಇಲ್ಲಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಗ್ಗದ ಜಿಯೋ ಬುಕ್ ಬಿಡುಗಡೆ ಮಾಡಲು ಮುಂದಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಕೆಲಸ ಕಾರ್ಯಗಳು ಮನೆಯಿಂದಲೇ ನಡೆಯುತ್ತಿರುವುದು ಈ ಹಿಂದೆಂದಿಗಿಂತಲೂ ಈಗ ಲ್ಯಾಪ್‌ಟ್ಯಾಪ್‌ಗಳ ಬೇಡಿಕೆ ಹೆಚ್ಚಾಗಿದೆ.
ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ತುಂಬಾ ಕಡಿಮೆ!
ಜಿಯೋ ಬಿಡುಗಡೆ ಮಾಡಲಿರುವ 5ಜಿ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಗೂಗಲ್ ಜತೆಗೂಡಿ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ತೀರಾ ಹತ್ತಿರದಿಂದ ಬಲ್ಲವರು ಪ್ರಕಾರ, ಕಂಪನಿಯು 2021ರ ಎರಡನೇ ತ್ರೈಮಾಸಿಕದಲ್ಲಿ 5ಜಿ ಬೆಂಬಲಿತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ.
ಈ ರಿಲಯನ್ಸ್ ಜಿಯೋ 5ಜಿ ಫೋನ್ ಹೇಗಿರಬೇಕೆಂದು ನಿರ್ಧರಿಸಲಾಗಿದೆ. ಹಾಗೆಯೇ ಆಪರೇಟಿಂಗ್ ಸಾಫ್ಟ್‌ವೇರ್ ಸಂಬಂಧ ಇನ್ನೂ ಒಂದಿಷ್ಟು ಚರ್ಚೆಗಳು ನಡೆಯುತ್ತಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಜಿಯೋ ಸೇವೆಯ ಸಂಯೋಜನೆಯನ್ನು ಒಳಗೊಂಡಿರುವ ಸಾಧ್ಯತೆ ಇದೆ. ಆಂಡ್ರಾಯ್ಡ್‌ನ ಕಸ್ಟಮೈಸ್ ವರ್ಷನ್ ಜಿಯೋ ಆಪರೇಟಿಂಗ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುತ್ತಿರುವುದಾಗಿ ಜಿಯೋ ಹೇಳಿಕೊಂಡಿದೆ ಎನ್ನಲಾಗಿದೆ. ಹಾಗಾಗಿ, ಪೂರ್ಣ ಪ್ರಮಾಣದ ಆಂಡ್ರಾಯ್ಡ್ ಒಎಸ್ ಇರುತ್ತದೆಯೋ ಅಥವಾ ಕಸ್ಟಮೈಸ್ ಆಂಡ್ರಾಯ್ಡ್ ಜಿಯೋ ಒಎಸ್ ಇರುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ, ಒಂದು ವೇಳೆ, ಜಿಯೋ ಏನಾದರೂ ಪೂರ್ಣ ಪ್ರಮಾಣದಲ್ಲಿ ಆಂಡ್ರಾಯ್ಡ್ ಒಎಸ್ ಬಳಸಲು ನಿರ್ಧರಿಸಿದರೆ ಬಹುಶಃ ಎಂಟ್ರಿ ಲೇವಲ್ ಫೋನ್‌ಗಳಲ್ಲಿ ಅದು ಆಂಡ್ರಾಯ್ಡ್ ಗೋ ಒಎಸ್ ಬಳಸಬಹುದು ಎಂದು ಹೇಳಲಾಗುತ್ತಿದೆ.
ಈಗಗಾಲೇ ಹೇಳಿರುವಂತೆ ಜಿಯೋ ಬುಕ್ ಲ್ಯಾಪ್‌ಟ್ಯಾಪ್ ಕೂಡ ಬಿಡುಗಡೆಯಾಗಲಿದೆ. ಈ ಲ್ಯಾಪ್‌ಟ್ಯಾಪ್ ಎಲ್ಲರಿಗೂ ಕೈಗೆಟುಕುವ ದರದಲ್ಲಿ ದೊರೆಯಲಿವೆ. ಎಂಟ್ರಿ ಲೇವಲ್ ಲ್ಯಾಪ್‌ಟ್ಯಾಪ್‌ನಲ್ಲಿ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಮತ್ತು 2 ಜಿಬಿ ರ್ಯಾಮ್ ಮತ್ತು 32 ಜಿಬಿ ಇಎಂಎಂಸಿ ಸ್ಟೋರೇಜ್ ಅನ್ನು ನಿರೀಕ್ಷಿಸಬಹುದಾಗಿದೆ. ಹಾಗೆಯೇ, ನೀವು ಇನ್ನೂ ಹೆಚ್ಚಿನ ರ್ಯಾಮ್ ಮತ್ತು ಸ್ಟೋರೇಜ್ ಅನ್ನು ಕಾನ್ಫಿಗರ್ ಮಾಡಿಕೊಳ್ಳಬಹುದಾಗಿದೆ.
ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ಸ್ಮಾರ್ಟ್ ಟಿವಿಗಳು
ಜಿಯೋ ಬುಕ್ ಲ್ಯಾಪ್‌ಟ್ಯಾಪ್ ಸಿದ್ಧಪಡಿಸಲು ಕಂಪನಿಯ ಚೀನಾ ಮೂಲದ ಬ್ಲೂಬ್ಯಾಂಕ್ ಕಮ್ಯುನಿಕೇಷನ್ ಟೆಕ್ನಾಲಜಿ ಕಂಪನಿಯೊಂದಿಗೆ ಕೈಜೋಡಿಸಿದೆ. 2020ರ ಸೆಪ್ಟೆಂಬರ್‌ನಿಂದಲೇ ಕಂಪನಿ ಜಿಯೋ ಬುಕ್ ಲ್ಯಾಪ್‌ಟ್ಯಾಪ್ ಅಭಿವೃದ್ಧಿಪಡಿಸುತ್ತಿದೆ ಎನ್ನಲಾಗುತ್ತಿದೆ.