ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಪಾಲು ಹೊಂದಿರುವ ಸ್ಯಾಮ್ಸಂಗ್ ಕಂಪನಿ ಮತ್ತೆರೆಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ವೇಳೆ 5ಜಿ ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದರೂ ಸದ್ಯಕ್ಕೆ ಅವು ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಈ ಎರಡೂ ಫೋನ್‌ಗಳು ವಿಶಿಷ್ಟವಾದ ವೈಶಿಷ್ಟ್ಯಗಳನ್ನು ಹೊಂದಿದ್ದು ಗಮನ ಸೆಳೆಯುತ್ತಿವೆ.
ಭಾರತದ ಮಾರುಕಟ್ಟೆಗೆ ಸ್ಯಾಮ್ಸಂಗ್ ಕಂಪನಿ, ಸ್ಯಾಮ್ಸಂಗ್ ಗ್ಯಾಲಕ್ಸಿ ಎ52 ಮತ್ತು ಎ72 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದರ ಜೊತೆಗೆ 5ಜಿ ಮಾಡೆಲ್‌ಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಆದರೆ, ಈ 5ಜಿ ವರ್ಷನ್ ಸ್ಮಾರ್ಟ್‌ಫೋನ್‌ಗಳು ಸದ್ಯಕ್ಕೆ ಭಾರತದಲ್ಲಿ ದೊರೆಯುವುದಿಲ್ಲ. ಯಾಕೆಂದರೆ, ಇನ್ನೂ ನಮ್ಮಲ್ಲಿ 5ಜಿ ತಂತ್ರಜ್ಞಾನಕ್ಕೆ ಬೇಕಾಗಿರುವ ಮೂಲಕಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ ಎನ್ನಬಹುದು. ಆದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ಎ72 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎ52 ಮಾರಾಟಕ್ಕೆ ಲಭ್ಯವಿರಲಿವೆ.
ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ತುಂಬಾ ಕಡಿಮೆ!
undefined
ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಈ ವಾರದ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಿತ್ತು. ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಹೇಳಬಹುದು.
6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52 ಸ್ಮಾರ್ಟ್‌ಫೋನ್ ಭಾರತದ್ಲಲಿ 26,499 ರೂಪಾಯಿ ಇದ್ದರೆ, 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 27,999 ರೂಪಾಯಿ ಇದೆ.
ಇದೇ ವೇಳೆ, 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಎ72 ಬೆಲೆ 34,999 ರೂಪಾಯಿಯಾದರೆ, 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ವೆರಿಯೆಂಟ್‌ನ ಬೆಲೆ 37,999 ರೂಪಾಯಿ ಆಗಿರಲಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿವೆ. ಕಪ್ಪು, ನೀಲಿ, ಬಿಳಿ ಮತ್ತು ನೇರಳೆ ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗಲಿದೆ.
ಲಾಂಚ್ ಆಫರ್ ಆಗಿ ಕಂಪನಿ, ಗ್ಯಾಲಕ್ಸಿ ಎ52 ಖರೀದಿ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಸ್, ಡೆಬಿಟ್ ಕಾರ್ಡ್ಸ್ ಮತ್ತು ಇಎಂಐ ಮೇಲೆ 2000 ರೂ. ಕ್ಯಾಶ್‌ಬ್ಯಾಕ್ ನೀಡಲಿದೆ. ಇದೇ ವೇಳೆ, ಎ72 ಸ್ಮಾರ್ಟ್ ಖರೀದಿಸುವ 3000 ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಹಾಗೆಯೇ, ಗ್ಯಾಲಕ್ಸಿ ಎ72 ಮತ್ತು ಎ52 ಸ್ಮಾರ್ಟ್‌ಪೋನ್‌ಗಳನ್ನು ಝೆಸ್ಟ್ ಮನಿ ಮೂಲಕ ಇಎಂಐ ಮೇಲೆ ಖರೀದಿಸಿದರೆ ಕ್ರಮವಾಗಿ 2000 ರೂ. ಹಾಗೂ 1500 ರೂ.ವರೆಗೂ ಲಾಭ ಪಡೆದುಕೊಳ್ಳಬಹುದು.
ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ಸ್ಮಾರ್ಟ್ ಟಿವಿಗಳು
ಸ್ಯಾಮ್ಸಂಗ್ ಗ್ಯಾಲಕ್ಸಿ ಎ52 ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚ್ ಅಮೋಎಲ್ಇಡಿ ಡಿಸ್‌ಪ್ಲೇ ಇದ್ದು, ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 720ಜಿ ಪ್ರೊಸೆರ್ ಆಧರಿತವಾಗಿದೆ. ಇದಕ್ಕೆ 6 ಜಿಬಿ ಅಥವಾ 8 ಜಿಬಿ ರ್ಯಾಮ್ ಸಪೋರ್ಟ್ ಮಾಡಲಿದೆ.
ಈ ಫೋನ್‌ನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಎರಡನೆಯದು 12 ಮೆಗಾ ಪಿಕ್ಸೆಲ್ ಮತ್ತು ಉಳಿದೆರಡು ಕ್ಯಾಮೆರಾಗಳು 5 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಫೋನ್ ಮುಂಬಾಗದಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಹಾಗಾಗಿ ಅದ್ಭುತ ಸೆಲ್ಫಿಗಳನ್ನು ಸೆರೆ ಹಿಡಿಯಬಹುದು. ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52 ಫೋನ್ 4500ಎಂಎಎಲ್ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 15 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.
ಇನ್ನು ಗ್ಯಾಲಕ್ಸಿ ಎ72 ಸ್ಮಾರ್ಟ್‌ಫೋನ್ 6.7ಲ ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಗ್ಯಾಲಕ್ಸಿ ಎ52 ರೀತಿಯಲ್ಲೇ ಎ72 ಸ್ಮಾರ್ಟ್‌ಫೋನ್ ಕೂಡ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 720ಜಿ ಪ್ರೊಸೆಸರ್ ಒಳಗೊಂಡಿದ್ದು, ಇದಕ್ಕೆ 8 ಜಿಬಿ ರ್ಯಾಮ್ ಸಪೋರ್ಟ್ ಮಾಡುತ್ತದೆ. ಈ ಫೋನ್‌ನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳ ಸೆಟ್ ಅಪ್ ಇದ್ದು, ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಡೆಪ್ತ್ ಸೆನ್ಸರ್ ಆಗಿ 5 ಮೆಗಾ ಪಿಕ್ಸೆಲ್ ಮತ್ತು ಟೆಲೆಫೋಟೋಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಮುಂಬದಿಯಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದು, ಈ ಸ್ಮಾರ್ಟ್‌ಫೋನ್‌ನಿಂದಲೂ ನೀವು ಒಳ್ಳೆಯ ಸೆಲ್ಫಿಗಳನ್ನು ಸೆರೆ ಹಿಡಿಯಬಹುದು.
ಚುನಾವಣೆ, ಆರ್ಥಿಕ ಮಾಹಿತಿ ನೀಡುವ BolSubol ಆಪ್ ಬಿಡುಗಡೆ
ಗ್ಯಾಲಕ್ಸಿ ಎ72 ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ 15 ವ್ಯಾಟ್ ವೇಗದ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 5000 ಎಂಎಎಚ್ ಸಾಮರ್ಥ್ಯ ಬ್ಯಾಟರಿ ಬರುತ್ತದೆ.