ವಾಟ್ಸ್‌ಆಪ್‌ನಲ್ಲಿ ತೀರಾ ಅಗತ್ಯವಾಗಿ ಬೇಕಾಗಿದ್ದ ಒಂದು ಫೀಚರ್‌ಅನ್ನು ಮೆಟಾ ನೀಡಿದೆ. ಈಗ ನೀವು ಡಿಲೀಟ್ ಮಾಡಿರುವಂಥ ಮೆಸೇಜ್‌ಗಳನ್ನೂ ಕೂಡ Undo ಮಾಡುವ ಅವಕಾಶವನ್ನು ವಾಟ್ಸ್‌ಅಪ್ ಪರಿಚಯಿಸಿದೆ.
ಬೆಂಗಳೂರು (ಮೇ.23): ಜಗತ್ತಿನ ಅತ್ಯಂತ ಪ್ರಸಿದ್ಧ ಮೆಸೇಜಿಂಗ್ ಫ್ಲಾಟ್‌ಫಾರ್ಮ್ ವಾಟ್ಸ್‌ಅಪ್ ತೀರಾ ಅಗತ್ಯವಾದ ಅಪ್‌ಡೇಟ್‌ಅನ್ನು ತನ್ನ ಬಳಕೆದಾರರಿಗೆ ನೀಡಿದೆ. ವಾಟ್ಸ್‌ಅಪ್‌ಅನ್ನು ಮೆಟಾ ಖರೀದಿ ಮಾಡಿದ ಬಳಿಕ ಸಾಕಷ್ಟು ಬದಲಾವಣೆಗಳು ಕಾಣುತ್ತಿವೆ. ಹೊಸ ಹೊಸ ಫೀಚರ್‌ಗಳೊಂದಿಗೆ ಈಗಾಗಲೇ ಇರುವ ಆಯ್ಕೆಗಳಿಗೆ ಕೆಲವೊಂದು ಅಗತ್ಯ ಅಪ್‌ಡೇಟ್‌ಗಳನ್ನು ನೀಡುವ ಕೆಲಸ ಮಾಡುತ್ತಿದೆ. ಈ ವಿಚಾರವನ್ನು ವಾಟ್ಸ್‌ಅಪ್ ತನ್ನ ಮೆಸೇಜಿಂಗ್ ವೇದಿಕೆಯಲ್ಲಿಯೇ ಸಂದೇಶ ಅಥವಾ ಅಟೋ ಸ್ಟೇಟಸ್ ಅಪ್‌ಡೇಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತದೆ. ಈಗಾಗಲೇ ಕೆಲವೊಂದು ಮಾದರಿಯ ಆಂಡ್ರಾಯ್ಡ್ ಹಾಗೂ ಐಓಎಸ್‌ಗಳಿಗೆ ಪರಿಚಯಿಸಿದ್ದ ಅತ್ಯವಾದ ಅಪ್‌ಡೇಟ್‌ಅನ್ನು ಈಗ ವಾಟ್ಸ್‌ಅಪ್ ತನ್ನೆಲ್ಲಾ ವಾಟ್ಸ್‌ಅಪ್ ಬಳಕೆದಾರರಿಗೆ ಪರಿಚಯಿಸಿದೆ. ಹೌದು ಹಾಗೇನಾದರೂ, ಮಿಸ್ಸ್ ಆಗಿ 'ಡಿಲೀಟ್ ಫಾರ್ ಮೀ' ಒತ್ತಿದ್ರೂ ಈಗ Undo ಮಾಡ್ಬಹುದು. ಅಂಥದ್ದೊಂದು ಅಪ್‌ಡೇಟ್‌ಅನ್ನು ವಾಟ್ಸ್‌ಅಪ್ ನೀಡಿದೆ.
ಇದು ಹೇಗೆ ಸಹಾಯವಾಗಲಿದೆ ಗೊತ್ತಾ?: ವಾಟ್ಸ್ಅಪ್‌ನ ಈ ಅಪ್‌ಡೇಟ್ ಹೇಗೆ ಸಹಾಯವಾಗಲಿದೆ ಅನ್ನೋದನ್ನು ಉದಾಹರಣೆ ಮೂಲಕ ನೋಡೋಣ. ನಿಮ್ಮ ಆತ್ಮೀಯ ಸ್ನೇಹಿತರು, ಕುಟುಂಬದವರು ಅಥವಾ ಆಫೀಸ್‌ನ ಉನ್ನತ ಅಧಿಕಾರಿಗಳಿರುವ ಗ್ರೂಪ್‌ಗೆ ನೀವು ಯಾವೋದೋ ಅಗತ್ಯವಲ್ಲದ ಮೆಸೇಜ್‌ಅನ್ನು ಕಳಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆ ಮೆಸೇಜ್ ಗ್ರೂಪ್‌ಗೆ ಸೆಂಡ್ ಆಗಿ ರೈಟ್ ಟಿಕ್ ಬಂದ ಬಳಿಕ ನಿಮಗೆ, 'ಓಹ್, ಇದು ಇಲ್ಲಿ ಕಳಿಸಬೇಕಾದ ಮೆಸೇಜ್ ಅಲ್ಲ' ಅನ್ನೋದು ಗಮನಕ್ಕೆ ತರುತ್ತದೆ. ತರಾತುರಿಯಲ್ಲಿ ನೀವು ಮೆಸೇಜ್‌ಅನ್ನು ಡಿಲೀಟ್ ಮಾಡೋಕೆ ಮುಂದಾಗ್ತೀರ. ಗಡಿಬಿಡಿಯಲ್ಲಿ 'ಡಿಲೀಟ್ ಫಾರ್ ಎವ್ರಿವನ್' (Delete For Everyone) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡೋ ಬದಲು, 'ಡಿಲೀಟ್ ಫಾರ್ ಮೀ' (Delete For Me) ಎಂದು ಕ್ಲಿಕ್ ಮಾಡ್ತೀರಿ. ಆಗ ನೀವು ಕಳಿಸಿದ ಮೆಸೇಜ್ ನಿಮಗೆ ಮಾತ್ರವೇ ಡಿಲೀಟ್ ಆಗುತ್ತದೆಯೇ ಹೊರತು ಗ್ರೂಪ್‌ನ ಉಳಿದ ಸದಸ್ಯರಿಗೆ ನೀವು ಕಳಿಸಿದ ಅಗತ್ಯವಲ್ಲದ ಮೆಸೇಜ್ ವಿಸಿಬಲ್ ಆಗಿರುತ್ತದೆ. ಆ ಬಳಿಕ ಈ ಮೆಸೇಜ್‌ಅನ್ನು ಗ್ರೂಪ್‌ನಿಂದ ಡಿಲೀಟ್ ಮಾಡೋ ಅಧಿಕಾರಿ ಗ್ರೂಪ್‌ನ ಅಡ್ಮಿನ್‌ಗೆ ಮಾತ್ರವೇ ಇರ್ತಿತ್ತು.
ಆದರೆ, ಈಗ ವಾಟ್ಸ್‌ಅಪ್ ಇದರಲ್ಲಿಯೇ ಬದಲಾವಣೆ ತಂದಿದೆ. ಹಾಗೇನಾದೂ ಇಂಥ ಮೆಸೇಜ್ ಕಳಿಸಿದ ಬಳಿಕ ನೀವು ಅಚಾನಕ್ ಆಗಿ ಡಿಲೀಟ್ ಫಾರ್ ಮೀ ಅನ್ನು ಒತ್ತಿದ್ದರೆ, ಅದನ್ನು ನೀವೀಗ Undo ಮಾಡಬಹುದು. ಅಂದರೆ, ವಾಪಾಸ್ ಈ ಮೆಸೇಜ್‌ಗಳನ್ನು'ಡಿಲೀಟ್' ಆಯ್ಕೆಯನ್ನು ಬದಲಾವಣೆ ಮಾಡಬಹುದು. ಆಗ ಡಿಲೀಟ್ ಫಾರ್ ಮೀ ಬದಲು ಡಿಲೀಟ್ ಫಾರ್ ಎವ್ರಿವನ್ ಕ್ಲಿಕ್ ಮಾಡಿದ್ರೆ ಯಾರಿಗೂ ನೀವು ಕಳಿಸಿದ ಮೆಸೇಜ್ ಡಬಲ್ ಬ್ಲೂ ಟಿಕ್ ಆಗೋವರೆಗೂ ತಿಳಿಯೋದೇ ಇಲ್ಲ. ಇದರಿಂದ ನೀವು ಗ್ರೂಪ್‌ನಲ್ಲಿ ಮುಜುಗರ ಆಗೋದನ್ನು ಈಗ ತಡೆಯಬಹುದು.
ಆದ್ರೆ ನಿಮಗೆ ನೆನಪಿರಲಿ, ಡಿಲೀಟ್ ಫಾರ್ ಮೀ ಎಂದು ಕ್ಲಿಕ್ ಮಾಡಿದ ಬಳಿಕ ಇದನ್ನ Undo ಮಾಡೋಕೆ ಇರೋದು ಜಸ್ಟ್ 5 ಸೆಕೆಂಡ್‌ಗಳು ಮಾತ್ರ. ಈ 5 ಸೆಕೆಂಡ್‌ನಲ್ಲಿಯೇ ನೀವು Undo ಮಾಡಿ ಡಿಲೀಟ್ ಫಾರ್ ಎವ್ರಿವನ್ ಎಂದು ಬದಲಾಯಿಸಬೇಕಿರುತ್ತದೆ.
ಲಗೇಜ್ ಬ್ಯಾಗ್‌ನಲ್ಲಿ ಬಚ್ಚಿಟ್ಟು ವಿದೇಶಗಳಿಗೆ ಅಕ್ರಮವಾಗಿ ಸಿಮ್‌ಕಾರ್ಡ್ ಸಾಗಿಸಲು ಯತ್ನ; ಆರೋಪಿ ಬಂಧನ
'ಎಲ್ಲರಿಗೂ ಡಿಲೀಟ್ ಮಾಡಬೇಕಾಗಿದ್ದ ಮೆಸೇಜ್‌ಅನ್ನು ನನಗೆ ಮಾತ್ರ ಡಿಲೀಟ್ ಮಾಡಿಕೊಂಡಿದ್ದೇನೆ ಎಂದು ನಿಮಗೆ ಅನಿಸಿದೆಯೇ? ಹಾಗಿದ್ರೆ ಈಗ ನೀವು ಅದನ್ನೀಗ ಅಂಡೂ ಕೂಡ ಮಾಡಬಹುದು. ಮೆಸೇಜ್ ಡಿಲೀಟ್ ಮಾಡೋದು ಇಷ್ಟು ಉತ್ತಮವಾಗಿ ಯಾವತ್ತೂ ಇದ್ದಿರಲಿಲ್ಲ' ಎಂದು ವಾಟ್ಸ್‌ಅಪ್ ತನ್ನ ಹೊಸ ಫೀಚರ್‌ಅನ್ನು ವಿಡಿಯೋ ಮೂಲಕ ತಿಳಿಸಿದೆ.
WhatsApp ಬಳಕೆದಾರರಿಗೆ ಗುಡ್ ನ್ಯೂಸ್, ಸ್ಟೇಟಸ್ ವಿಡಿಯೋ ನೀತಿಯಲ್ಲಿ ಬದಲಾವಣೆ!