ಆಕರ್ಷಕ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M55 5G, M15 5G ಫೋನ್ ಲಾಂಚ್!

By Suvarna NewsFirst Published Apr 9, 2024, 1:44 PM IST
Highlights

ಸ್ಯಾಮ್‌ಸಂಗ್ ಗ್ಯಾಲಕ್ಸಿ M55 5G ಹಾಗೂ ಗ್ಯಾಲಕ್ಸಿ M15 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಕೈಗೆಟುಕುವ ಬೆಲೆ ಜೊತೆಗೆ ಆಕರ್ಷಕ ಡಿಸ್ಕೌಂಟ್ ಆಫರ್ ಮೂಲಕ ಈ ಫೋನ್ ಬಿಡುಗಡೆಯಾಗಿದೆ.

ಬೆಂಗಳೂರು(ಏ.09) ಸ್ಯಾಮ್‌ಸಂಗ್  ಪ್ರಮುಖ ಫೀಚರ್ ಗಳನ್ನು ಹೊಂದಿರುವ ಗ್ಯಾಲಕ್ಸಿ M55 5G ಹಾಗೂ ಗ್ಯಾಲಕ್ಸಿ M15 5G  ಎರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಅಪಾರ ಜನಪ್ರಿಯತೆ ಗಳಿಸಿರುವ ಗ್ಯಾಲಕ್ಸಿ M ಸಿರೀಸ್‌ನ ಹೊಸ ಸೇರ್ಪಡೆಗಳಾದ ಈ ಸ್ಮಾರ್ಟ್ ಫೋನ್ ಗಳು ಬಳಕೆದಾರರಿಗೆ ಸೂಪರ್ ಅಮೋಲ್ಡ್ ಪ್ಲಸ್ ಡಿಸ್ ಪ್ಲೇ, ದೈತ್ಯಶಕ್ತಿಯ ಬ್ಯಾಟರಿ ಮತ್ತು ಶಕ್ತಿಯುತ ಪ್ರೊಸೆಸರ್ ಗಳನ್ನು ನೀಡಲಿದೆ. 

8 ಜಿಬಿ +128 ಜಿಬಿ: ರೂ.26999
8 ಜಿಬಿ +256 ಜಿಬಿ: ರೂ.29999
12 ಜಿಬಿ +256 ಜಿಬಿ: ರೂ.32999
4 ಜಿಬಿ +128 ಜಿಬಿ: ರೂ.12999
6 ಜಿಬಿ +128 ಜಿಬಿ: ರೂ. 14499

ನೀರಿಗೆ ಬಿದ್ದರೂ, ಕೈಜಾರಿ ನೆಲಕ್ಕಪಳಿಸಿದರೂ ಏನೂ ಆಗಲ್ಲ ಈ ಫೋನ್, ಸ್ಯಾಮ್‌ಸಂಗ್ A55,A35 ಲಾಂಚ್!

ಆಕರ್ಷಕ ಬೆಲೆಯಲ್ಲಿ ಹೊಸ ಫೋನ್ ಲಭ್ಯವಿದೆ. ಜೊತೆಗೆ ಎಲ್ಲಾ ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ.2000 ತ್ವರಿತ ರಿಯಾಯಿತಿ, ರಿಟೇಲ್ ಅಂಗಡಿಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ 2000 ತ್ವರಿತ ರಿಯಾಯಿತಿ ಅಥವಾ ಎಕ್ಸ್ ಚೇಂಜ್ ಮೇಲೆ ರೂ 2000 ರಿಯಾಯಿತಿ ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ 1000 ತ್ವರಿತ ರಿಯಾಯಿತಿ ಅಥವಾ ಎಕ್ಸ್ ಚೇಂಜ್ ಮೇಲೆ ರೂ 1000 ರಿಯಾಯಿತಿ ಘೋಷಿಸಲಾಗಿದೆ. 

ಅತ್ಯಪೂರ್ವ ವಿನ್ಯಾಸ
ಗ್ಯಾಲಕ್ಸಿ ಎಂ55 5ಜಿ ಮತ್ತು ಗ್ಯಾಲಕ್ಸಿ ಎಂ15 5ಜಿ ಅತ್ಯಪೂರ್ವ ಗ್ಯಾಲಕ್ಸಿ ಸಿಗ್ನೇಚರ್ ವಿನ್ಯಾಸವನ್ನು ಹೊಂದಿದೆ. ಸೊಗಸಾಗಿ ಕಾಣುತ್ತಿದ್ದು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗ್ಯಾಲಕ್ಸಿ ಎಂ55 5ಜಿ ತುಂಬಾ ನಯವಾಗಿದೆ ಮತ್ತು ಹಗುರವಾದ ತೂಕವನ್ನು ಹೊಂದಿದೆ. ಇದು ಕೇವಲ 7.8ಎಂಎಂ ಅಗಲವನ್ನು ಹೊಂದಿದೆ. ಹಾಗಾಗಿ ಬಳಸಲು ತುಂಬಾ ಸುಲಭವಾಗಿದೆ. ಗ್ಯಾಲಕ್ಸಿ ಎಂ55 5ಜಿ ತಿಳಿ ಹಸಿರು ಮತ್ತು ಡೆನಿಮ್ ಬ್ಲಾಕ್ ಎಂಬ ಎರಡು ಆಹ್ಲಾದಕರ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ಎಂ15 5ಜಿ ಸೆಲೆಸ್ಟಿಯಲ್ ಬ್ಲೂ, ಸ್ಟೋನ್ ಗ್ರೇ ಮತ್ತು ಬ್ಲೂ ಟೋಪಾಜ್ ಸೇರಿದಂತೆ ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಕಾರ್ಯಕ್ಷಮತೆ
ಗ್ಯಾಲಕ್ಸಿ ಎಂ55 5ಜಿ 4ಎನ್ಎಂ-ಆಧಾರಿತ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 7 ಜೆನ್1 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಅದು ಭಾರಿ ವೇಗವಾಗಿ ಮತ್ತು ಶಕ್ತಿ-ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನಿಮಗೆ ಮಲ್ಟಿ-ಟಾಸ್ಕಿಂಗ್ ಅಂದ್ರೆ ಬಹು ಕೆಲಸವಗಳನ್ನು ಸುಗಮವಾಗಿ ಮಾಡಲು ಅನುವು ಮಾಡಿಕೊಡುತ್ತದೆ. ಪ್ರೊಸೆಸರ್ ಉತ್ತಮ-ಗುಣಮಟ್ಟದ ಆಡಿಯೋ, ದೃಶ್ಯಗಳು ಮತ್ತು ಹೆಚ್ಚಿನ ವೇಗವನ್ನು ಒದಗಿಸುವ ಮೂಲಕ ಅತ್ಯಪೂರ್ವ ಮೊಬೈಲ್ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. 5ಜಿಯ ಆಸಾಧಾರಣ ವೇಗ ಮತ್ತು ಕನೆಕ್ಟಿವಿಟಿ ಮೂಲಕ ಬಳಕೆದಾರರು ಎಲ್ಲಿಗೆ ಹೋದರೂ ಸಂಪರ್ಕದಲ್ಲಿರಲು, ವೇಗವಾಗಿ ಡೌನ್‌ಲೋಡ್‌ ಮಾಡಲು, ಸುಗಮ ಸ್ಟ್ರೀಮಿಂಗ್ ಮಾಡಲು ಮತ್ತು ನಿರರ್ಗಳವಾಗಿ ಬ್ರೌಸಿಂಗ್ ಅನ್ನು ಮಾಡಲು ಸಾಧ್ಯವಾಗುತ್ತದೆ. ಗ್ಯಾಲಕ್ಸಿ ಎಂ15 5ಜಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ನಿಂದ ಚಾಲಿತವಾಗಿದೆ, ಅದು ನಿಮ್ಮ ಅಗತ್ಯ ಕಾರ್ಯಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.

ಬ್ಯಾಟರಿ
ಗ್ಯಾಲಕ್ಸಿ ಎಂ55 5ಜಿ ಫೋನ್ 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ದೀರ್ಘ ಕಾಲದ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವೀಕ್ಷಣೆ ಮಾಡಲು ನೆರವಾಗುತ್ತದೆ. ಗ್ಯಾಲಕ್ಸಿ ಎಂ55 5ಜಿ 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಆ ಮೂಲಕ ಕಡಿಮೆ ಸಮಯದಲ್ಲಿ ಬಳಕೆದಾರರಿಗೆ ಹೆಚ್ಚಿನ ಚಾರ್ಜ್ ಅನ್ನು ನೀಡುತ್ತದೆ. ಗ್ಯಾಲಕ್ಸಿ ಎಂ15 5ಜಿ ಫೋನು ವಿಭಾಗ ಪ್ರಮುಖ 6000 ಎಂಎಎಚ್ ಬ್ಯಾಟರಿಯೊಂದಿಗೆ ಬರುತ್ತದೆ, ಅದು ಸ್ಮಾರ್ಟ್‌ಫೋನ್‌ಗೆ ಎರಡು ದಿನಗಳವರೆಗೆ ಚಾರ್ಜ್ ನೀಡಬಲ್ಲದು. ಅದು ಬಳಕೆದಾರರು ತಮ್ಮ ನೆಚ್ಚಿನ ಮನರಂಜನೆಯನ್ನು ಪಡೆಯಸು ಮತ್ತು ದಿನವಿಡೀ ಕನೆಕ್ಟೆಡ್ ಆಗಿ ಇರಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್4 ಬುಕಿಂಗ್ ಆರಂಭ, 8,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್!

ಡಿಸ್ ಪ್ಲೇ
ಗ್ಯಾಲಕ್ಸಿ ಎಂ55 5ಜಿ 120ಹರ್ಟ್ಜ್ ರಿಫ್ರೆಶ್ ದರದೊಂದಿಗೆ 6.7 "ಪೂರ್ಣ ಎಚ್ ಡಿ + ಸೂಪರ್ ಅಮೋಲ್ಡ್ ಪ್ಲಸ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಮೈಮರೆಸುವಂತಹ ವೀಕ್ಷಣೆಯ ಅನುಭವವನ್ನು ನೀಡುವ ಉತ್ತಮ ಗುಣಮಟ್ಟದ ಬಣ್ಣದ ಕಾಂಟ್ರಾಸ್ಟ್ ಅನ್ನು ನೀಡುತ್ತದೆ. ಗ್ಯಾಲಕ್ಸಿ ಎಂ55 5ಜಿ 1000 ನಿಟ್‌ಗಳ ಹೆಚ್ಚಿನ ಬ್ರೈಟ್‌ನೆಸ್ ಮೋಡ್ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನದೊಂದಿಗೆ ಬರುತ್ತದೆ, ಆ ಪ್ರಕಾರ ಬಳಕೆದಾರರು ಸೂರ್ಯನ ಗಾಢ ಬೆಳಕಿನಲ್ಲಿಯೂ ತಮ್ಮ ಡಿಸ್ ಪ್ಲೇಯನ್ನು ಸುಲಭವಾಗಿ ಬಳಸಬಹುದಾಗಿದೆ. ಗ್ಯಾಲಕ್ಸಿ ಎಂ15 5ಜಿ ವಿಭಾಗದ-ಅತ್ಯುತ್ತಮ 6.5” ಸೂಪರ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದ್ದು, ಇದು ಟೆಕ್ ಸ್ಯಾವಿ ಜೆನ್ ಝಡ್ ಮಿಲೇನಿಯರ್ ಗ್ರಾಹಕರಿಗೆ ಹೊರಾಂಗಣದಲ್ಲಿಯೂ ಸಾಮಾಜಿಕ ಮಾಧ್ಯಮ ಫೀಡ್‌ಗಳನ್ನು ಸ್ಕ್ರೋಲ್ ಮಾಡಲು ಅನುವು ಮಾಡಿಕೊಡುತ್ತದೆ.

ಕ್ಯಾಮೆರಾ
ಗ್ಯಾಲಕ್ಸಿ ಎಂ55 5ಜಿ ಹೆಚ್ಚಿನ ರೆಸಲ್ಯೂಶನ್ ಇರುವ ಮತ್ತು ಶೇಕ್-ಫ್ರೀ ವೀಡಿಯೊಗಳನ್ನು ಶೂಟ್ ಮಾಡಲು ಅನುವು ಮಾಡಿಕೊಡುವ 50ಎಂಪಿ (ಓಐಎಸ್) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಇದು ಕೈ ನಡುಕ ಅಥವಾ ಆಕಸ್ಮಿಕ ಅಲುಗಾಡುವಿಕೆಗಳಿಂದ ಬ್ಲರ್ ಆಗಬಹುದಾದ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಕ್ಯಾಮೆರಾ ಸೆಟಪ್ ವಿವರವಾದ, ತೀಕ್ಷ್ಣವಾದ ಸೆಲ್ಫಿ ತೆಗೆಯಲು ಅನುವು ಮಾಡಿಕೊಡುವ 50ಎಂಪಿ ಹೈ-ರೆಸಲ್ಯೂಶನ್ ಪ್ರಂಟ್ ಕ್ಯಾಮರಾ ಜೊತೆಗೆ 8ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಗ್ಯಾಲಕ್ಸಿ ಎಂ55 5ಜಿ ನೈಟೋಗ್ರಫಿ ಫೀಚರ್ ಹೊಂದಿದ್ದು, ಇದು ಕಡಿಮೆ-ಬೆಳಕಿನ ಶಾಟ್‌ಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಂ55 5ಜಿ ಯ ​​ಕ್ಯಾಮೆರಾವು ಎಐ- ವರ್ಧಿತ ಫೀಚರ್ ಗಳಾದ ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಹೊಂದಿದೆ. ಗ್ಯಾಲಕ್ಸಿ ಎಂ15 5ಜಿ ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ (ವಿಡಿಐಎಸ್) ಇರುವ 50ಎಂಪಿಯ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಕ್ಯಾಮೆರಾ ವೀಡಿಯೊಗಳಲ್ಲಿ ಅಸ್ಥಿರವಾದ ಚಲನೆಯಿಂದ ಉಂಟಾಗುವ ಮಸುಕು ಅಥವಾ ಅಸ್ಪಷ್ಟತೆಯನ್ನು ಕಡಿಮೆ ಮಾಡುತ್ತದೆ. ಗ್ಯಾಲಕ್ಸಿ ಎಂ15 5ಜಿ ಸ್ಪಷ್ಟವಾದ ಸೆಲ್ಫಿಗಳಿಗಾಗಿ 13ಎಂಪಿ ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ.
 

click me!