ಇನ್ಫಿನಿಕ್ಸ್ ಪಾಪ್-ಅಪ್ ಸೆಲ್ಫಿ ಕ್ಯಾಮರಾ S5 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ!

Suvarna News   | Asianet News
Published : Mar 12, 2020, 09:31 PM IST
ಇನ್ಫಿನಿಕ್ಸ್ ಪಾಪ್-ಅಪ್ ಸೆಲ್ಫಿ ಕ್ಯಾಮರಾ S5 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ!

ಸಾರಾಂಶ

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿ ದಿನ ಹೊಸ ಹೊಸ ಫೋನ್‌ಗಳು ಬಿಡುಗಡೆಯಾಗುತ್ತಿದೆ. ಆಧುನಿಕ ಫೀಚರ್ಸ್, ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷಗಳನ್ನು ಒಳಗೊಂಡಿರುವ ನೂತನ ಫೋನ್‌ಗಳು ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗುತ್ತಿದೆ. ಇದೀಗ ಇನ್ಫಿನಿಕ್ಸ್ ನೂತನ ಮೊಬೈಲ್ ಬಿಡುಗಡೆ ಮಾಡಿದೆ. 

ಬೆಂಗಳೂರು(ಮಾ.12): ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರಾಂಡ್ ಇನ್ಫಿನಿಕ್ಸ್ ಸಂಸ್ಥೆಯು ಕೇವಲ ರೂ 9,999 ಕ್ಕೆ ಪಾಪ್-ಅಪ್ ಸೆಲ್ಫಿ ಕ್ಯಾಮರಾ ಒಳಗೊಂಡಿರುವ ಎಸ್5 ಪ್ರೊ (S5 Pಡಿo) ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಉತ್ತಮ ಗುಣಮಟ್ಟದ ಪೋಟೊಗಾಗಿ ಕೃತಕ ಬುದ್ದಿವಂತಿಕೆ ಆಧಾರಿತ 16 ಎಂಪಿ ಸೆಲ್ಫಿ ಕ್ಯಾಮರಾ ಕೂಡ ಅಳವಡಿಸಲಾಗಿದೆ. 

ಬಂದಿದೆ ವಿನೂತನ ಆ್ಯಪ್‌; ಸ್ಮಾರ್ಟ್‌ಫೋನಲ್ಲೇ ಬ್ಯಾಂಕ್, ಇನ್ಶೂರೆನ್ಸ್, ಸಾಲ!

ಕಟ್ಟಿಂಗ್ ಎಡ್ಜ್ ಟೆಕ್ನಾಲಜಿ ವೈಶಿಷ್ಟ್ಯಗಳಾದ 3ಡಿ ಗ್ಲಾಸ್ ಫಿನೀಶ್ ಡಿಸೈನ್, ವೈಫೈ ಶೇರಿಂಗ್, ಹೈಡ್ ಆ್ಯಪ್ಸ್, ಸ್ಮಾರ್ಟ್ ಪ್ಯಾನಲ್, ಡಿಜಿಟಲ್ ವೆಲ್ ಬೀಯಿಂಗ್ ಮತ್ತು 48 ಎಂಪಿ ಮೂರು ಹಿಂಬದಿ ಕ್ಯಾಮರಾ ಹೊಂದಿದೆ ಹಾಗೂ 4+64 RAM+ROM ಒಳಗೊಂಡಿದೆ. 

ಮಾರ್ಚ್ 13 ರ ನಂತರ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಈ ಎಸ್5 ಪ್ರೊ ಮೊಬೈಲ್ ಲಭ್ಯ. 6.53 ಇಂಚಿನ ಫುಲ್ ವಿವ್ ಎಫ್ಎಚ್ಡಿ+ ಡಿಸ್ಪ್ಲೆಹೊಂದಿದ್ದು ಡಿಟಿಎಚ್ ಎಚ್ಟಿ ಸೌಂಡ್ ಕ್ವಾಲಿಟಿಯನ್ನು ಈ ಸ್ಮಾರ್ಟ್ ಫೋನ್ ನೀಡುತ್ತದೆ. 

ಸೆಲ್ಫಿ ಪ್ರಿಯರಿಗಾಗಿ ಕೃತಕ ಬುದ್ದಿವಂತಿಕೆ ಪೋರ್ಟ್ರೆಟ್ ಮತ್ತು 3ಡಿ ಫೇಸ್ ಬ್ಯೂಟಿ ಮೋಡ್ ಅನ್ನು ಈ ಮೊಬೈಲ್ ನಲ್ಲಿ ಒದಗಿಸಲಾಗಿದೆ. ಪಾಪ್-ಅಪ್ ಕ್ಯಾಮರಾದ ಲೈಫ್ 1,50,000 ಸಾರಿ. ಅಂದರೆ ದಿನಕ್ಕೆ 50 ಸಲ ಸೆಲ್ಫಿ ಪಾಪ್-ಅಪ್ ಕ್ಯಾಮರಾ ಬಳಸಿದರೆ ಸುಮಾರು 8 ವರ್ಷಗಳ ಕಾಲ ಬಳಕೆ ಮಾಡಬಹುದು ಎಂದರ್ಥ. ಡಸ್ಟ್ ಮತ್ತು ಸ್ಪ್ಯಾಷ್ ಪ್ರೊಟಕ್ಷನ್ ಕೂಡ ಇದು ಹೊಂದಿದೆ. 

4GB DDR4 RAM and a 64 GB ಸ್ಟೋರೆಜ್ ಕ್ಯಾಪಸಿಟಿ ಮತ್ತು 4000 mAh ಬ್ಯಾಟರಿ ಹೊಂದಿದೆ. ಪರಿಣಾಮ 11 ಗಂಟೆಗಳ ಕಾಲ ಸತತ ವಿಡಿಯೋ, 28 ಮ್ಯೂಸಿಕ್ ಮತ್ತು 8 ಗಂಟೆಗಳ ಕಾಲ ಗೇಮ್ ಆಡಬಹುದು. ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಲಾಕರ್ ಸೌಲಭ್ಯ ಕೂಡ ಇದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್