15 ಸಾವಿರಗಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್; 5000 ರೂಪಾಯಿಗೂ ಅಧಿಕ ಡಿಸ್ಕೌಂಟ್

By Mahmad Rafik  |  First Published Nov 9, 2024, 4:28 PM IST

₹15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ. ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಂತಹ ವೈಶಿಷ್ಟ್ಯಗಳನ್ನು ಹೋಲಿಸಲಾಗುತ್ತದೆ.


ನವದೆಹಲಿ: ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಅವುಗಳ ಕಾರ್ಯನಿರ್ವಹಣೆ ನಿಧಾನವಾಗುತ್ತದೆ. ಕೆಲವೊಮ್ಮೆ ಆಪ್‌ಗಳು ಸರಿಯಾಗಿ ಕೆಲಸ ಮಾಡದೇ ಹ್ಯಾಂಗ್ ಆಗಿ ಮೊಬೈಲ್ ಆಫ್ ಆಗುತ್ತದೆ. ಇದರಿಂದ ಬಳಕೆದಾರರಿಗೆ ಕಿರಿಕಿರಿಯುಂಟು ಆಗುತ್ತದೆ. ನೀವು ಸ್ಮಾರ್ಟ್‌ಫೋನ್ ಖರೀದಿಸಿ 5 ರಿಂದ 6 ವರ್ಷ ಕಳೆದಿದ್ದರೆ, ಅಪ್‌ಡೇಟೆಡ್ ವರ್ಷನ್ ಮೊಬೈಲ್ ಖರೀದಿಸೋದು ಉತ್ತಮ. ನೀವು ಕಡಿಮೆ ಬೆಲೆಯಲ್ಲಿ ಮತ್ತು ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ಇಂದು ನಾವು ನಿಮಗೆ ಅಮೆಜಾನ್‌ನಲ್ಲಿ ಲಭ್ಯವಿರುವ 15 ಸಾವಿರ ರೂ. ಕಡಿಮೆ ಬೆಲೆಯಲ್ಲಿ ಸಿಗುವ ಮತ್ತು 5,000 ರೂ.ಗೂ ಅಧಿಕ ಡಿಸ್ಕೌಂಟ್ ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್ ಮಾಹಿತಿ ನೀಡುತ್ತಿದ್ದೇವೆ.

ಸ್ಮಾರ್ಟ್‌ಫೋನ್ ಖರೀದಿ ಸಂದರ್ಭದಲ್ಲಿ ಸಾಮಾನ್ಯವಾಗಿ ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಸಾಮಾರ್ಥ್ಯ, ಉನ್ನತ-ಮಟ್ಟದ ವೈಶಿಷ್ಟ್ಯ, ಕೃತಕ ಬುದ್ಧಿಮತ್ತೆ, ಸ್ಟೋರೇಜ್ ಗಮನಿಸಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಎಲ್ಲಾ ಆನ್‌ಲೈನ್ ಪ್ಲಾಟ್‌ಫಾರಂಗಳಲ್ಲಿ ವಿಶೇಷ ರಿಯಾಯ್ತಿ ಘೋಷಣೆ ಮಾಡಲಾಗಿತ್ತು. ಇದರಲ್ಲಿ ಇಂದಿಗೂ ಕೆಲ ಆಫರ್‌ಗಳು ಮುಂದುವರಿದಿವೆ. ಅಮೆಜಾನ್‌ನಲ್ಲಿರೋ 15,000 ರೂ.ಗಿಂತಲೂ ಕಡಿಮೆ ಬೆಲೆಯ 5 ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ. 
 
1.iQOO Z9x 5G
iQOO Z9x 5G ಸ್ಮಾರ್ಟ್‌ಫೋನ್ ಹಸಿರು ಬಣ್ಣದಲ್ಲಿ ಲಭ್ಯವಿದ್ದು,  6GB RAM ಮತ್ತು 128GB ಸ್ಟೋರೇಜ್ ಹೊಂದಿದೆ, 6 Gen 1 ಸ್ನಾಪ್‌ಡ್ರಾಗನ್ ಜೊತೆ 560k+ AnTuTu ಸ್ಕೋರ ಒಳಗೊಂಡಿದೆ. 7.99mm ಸ್ಲಿಮ್ ಡಿಸೈನ್ ಹೊಂದಿರುವ ಈ ಸ್ಮಾರ್ಟ್‌ಫೋನ್ 44W ಫಾಸ್ಟ್ ಚಾರ್ಜಿಂಗ್‌ ಜೊತೆಯಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆಪ್ಟಿಕಲ್ ಸೆನ್ಸಾರ್ ರೆಸ್ಯೂಲೆಷನ್ 64 ಎಂಪಿ, ಫ್ರಂಟ್ ಕ್ಯಾಮೆರಾ 2 ಎಂಪಿ ಹೊಂದಿದೆ. iQOO Z9x 5G ಸ್ಮಾರ್ಟ್‌ಫೋನ್ ಬೆಲೆ 18,999 ರೂಪಾಯಿ ಆಗಿದ್ದು, ಅಮೆಜಾನ್‌ನಲ್ಲಿ ಶೇ.26ರಷ್ಟು ಡಿಸ್ಕೌಂಟ್ ನೀಡಲಾಗಿದ್ದು, ಮಾರಾಟದ ಬೆಲೆ 13,999 ರೂ. ಆಗಿದೆ. 

Tap to resize

Latest Videos

undefined

2.realme NARZO 70x 5G
ಈ ಸ್ಮಾರ್ಟ್‌ಫೋನ್ ಆಕಾಶ ನೀಲಿ, ಗಾಢ ನೀಲಿ ಬಣ್ಣದಲ್ಲಿ ಲಭ್ಯವಿದೆ. 6GB RAM ಮತ್ತು 128GB ಸ್ಟೋರೇಜ್ ಹೊಂದಿದೆ. 120Hz ಅಲ್ಟ್ರಾ ಸ್ಮೂತ್ ಡಿಸ್‌ಪ್ಲೇ (Dimensity 6100+ 6nm 5G) ಹೊಂದಿದೆ. 50MP AI ಕ್ಯಾಮೆರಾ ಮತ್ತು 45W ಚಾರ್ಜಿಂಗ್ ಸ್ಪೀಡ್ ಹೊಂದಿದ್ದು,  5000mAh ಸಾಮಾರ್ಥ್ಯ ಹೊಂದಿದೆ. ಕೇವಲ 31 ನಿಮಿಷದಲ್ಲಿ ಶೇ.51ರಷ್ಟು ಜಾರ್ಜ್ ಆಗಲಿದೆ. ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 14 ಒಳಗೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 17,999 ರೂ. ಆಗಿದ್ದು, ಅಮೆಜಾನ್‌ನಲ್ಲಿ ಶೇ.25ರಷ್ಟು ರಿಯಾಯ್ತಿ ನೀಡಿದ್ದು, ಗ್ರಾಹಕರಿಗೆ 13,498 ರೂ.ಗೆ ಸಿಗಲಿದೆ.

3.Redmi 13C 5G
ರೆಡ್‌ಮಿಯ 13C 5G ಸ್ಮಾರ್ಟ್‌ಫೋನ್ 4GB RAM ಮತ್ತು 128GB ಸ್ಟೋರೇಜ್ ಹೊಂದಿದ್ದು, ಕಪ್ಪು ಬಣ್ಣದಲ್ಲಿ ಲಭ್ಯವಿದೆ. 90Hz ಡಿಸ್‌ಪ್ಲೆ ಹೊಂದಿರುವ ಈ ಸ್ಮಾರ್ಟ್‌ಫೋನ್ 1600x720 ಪಿಕ್ಸೆಲ್ ರೆಸ್ಯೂಲೇಷನ್, 6.74 ಇಂಚಿನ ಸ್ಕ್ರೀನ್ ಇದೆ. ಪ್ರೈಮರಿ ಕ್ಯಾಮೆರಾ 50MP, ಫ್ರಂಟ್ 5MP ಕ್ಯಾಮೆರಾ ಒಳಗೊಂಡಿದೆ. 5000mAh ಸಾಮಾರ್ಥ್ಯ ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. Redmi 13C 5G ಬೆಲೆ ಮಾರುಕಟ್ಟೆಯಲ್ಲಿ 13,999 ರೂ.ಗಳಾಗಿದ್ದು, ಅಮೆಜಾನ್ ಶೇ.34ರಷ್ಟು ಆಫರ್ ನೀಡಿದ್ದು, ಗ್ರಾಹಕರಿಗೆ 9,199 ರೂ.ಗೆ ಲಭ್ಯವಾಗಲಿದೆ. 

ಇದನ್ನೂ ಓದಿ:  ಡ್ರೋನ್‌ಗಳಿಗೆ ಪೈಪೋಟಿ ನೀಡಲು ಬರ್ತಿದೆ ಫ್ಲೈಯಿಂಗ್ ಕ್ಯಾಮೆರಾವುಳ್ಳ ರೆಡ್‌ಮಿ 5G ಸ್ಮಾರ್ಟ್‌ಫೋನ್

4.Motorola G45 5G 
ಮೊಟೊರಾಲದ G45 5G ಸ್ಮಾರ್ಟ್‌ಫೋನ್ ಆಕರ್ಷಕ ನೀಲಿ ಬಣ್ಣದಲ್ಲಿದ್ದು, 8GB RAM, 128GB ಸ್ಟೋರೇಜ್ ಒಳಗೊಂಡಿದೆ. ಪ್ರೈಮರಿ ಕ್ಯಾಮೆರಾ 50MP, ಫ್ರಂಟ್ ಕ್ಯಾಮೆರಾ 16MP ನೀಡಲಾಗಿದೆ. 5000mAh ಸಾಮಾರ್ಥ್ಯ ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ಮಾರುಕಟ್ಟೆಯಲ್ಲಿ 14,999 ರೂ.ಗೆ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ ಶೇ.8ರಷ್ಟು ರಿಯಾಯ್ತಿ ನೀಡಿದ್ದು, ಗ್ರಾಹಕರಿಗೆ 13,789 ರೂ.ಗೆ ಲಭ್ಯವಿದೆ.

5.iQOO Z9 Lite 5G
iQOO Z9 Lite 5G ಸ್ಮಾರ್ಟ್‌ಫೋನ್ ಕಂದು ಬಣ್ಣದಲ್ಲಿದೆ.  6GB RAM, 128GB ಸ್ಟೋರೇಜ್ ಜೊತೆ 50MP ಸೋನಿ AI ಕ್ಯಾಮೆರಾ ಒಳಗೊಂಡಿದೆ.  5000mAh ಸಾಮಾರ್ಥ್ಯ ಬ್ಯಾಟರಿ ಸಹ ಸೇರಿದೆ. ಮಾರುಕಟ್ಟೆಯಲ್ಲಿ 15,499 ರೂ. ಬೆಲೆಯನ್ನು ಹೊಂದಿದ್ದು, ಅಮೆಜಾನ್ ಶೇ.26ರಷ್ಟು ಡಿಸ್ಕೌಂಟ್ ನೀಡತ್ತಿದೆ. ಡಿಸ್ಕೌಂಟ್ ನಂತರ ಗ್ರಾಹಕರಿಗೆ 11,499 ರೂ.ಗೆ ಸಿಗಲಿದೆ.

ಇದನ್ನೂ ಓದಿ: 50 MP ಕ್ಯಾಮೆರಾ, 5000 mAh ಬ್ಯಾಟರಿಯುಳ್ಳ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆ

click me!