50 MP ಕ್ಯಾಮೆರಾ, 5000 mAh ಬ್ಯಾಟರಿಯುಳ್ಳ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆ

By Mahmad Rafik  |  First Published Nov 7, 2024, 4:01 PM IST

ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ ₹5,000 ರೂಪಾಯಿಗಳ ಭಾರಿ ಇಳಿಕೆ. 50 MP ಕ್ಯಾಮೆರಾ, 5000 mAh ಬ್ಯಾಟರಿ ಮತ್ತು ಇತರ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅಮೆಜಾನ್‌ನಲ್ಲಿ ಈಗಲೇ ಖರೀದಿಸಿ.


ನೀವು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿ ಬಗ್ಗೆ ಯೋಚಿಸುತ್ತಿದ್ದೀರಾ? ಇಂದು ನಾವು ಹೇಳುತ್ತಿರುವ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬರೋಬ್ಚರಿ 5 ಸಾವಿರ ರೂಪಾಯಿ ಇಳಿಕೆಯಾಗಿದೆ. ಸ್ಮಾರ್ಟ್‌ಫೋನ್ ಖರೀದಿಸೋರಿಗೆ ಇದು ಸಕಾಲವಾಗಿದ್ದು, ಆನ್‌ಲೈನ್ ಮುಖಾಂತರ ಖರೀದಿಸಬಹುದಾಗಿದೆ. ಇ-ಕಾಮರ್ಸ್ ವೆಬ್‌ಸೈಟ್ ಆಗಿರುವ ಅಮೆಜಾನ್‌ ನಲ್ಲಿ ಈ ಸ್ಮಾರ್ಟ್‌ಫೋನ್ ಮೇಲೆ 5,000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. 

ಅಮೆಜಾನ್ Moto G85 5G ಸ್ಮಾರ್ಟ್‌ಫೋನ್ ಮೇಲೆ 5,500 ರೂ.ವರೆಗೆ ಡಿಸ್ಕೌಂಟ್ ಕೊಡುತ್ತಿದೆ. 8GB RAM ಹೊಂದಿದ್ದು, 50 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. 5G ಸ್ಮಾರ್ಟ್‌ಫೋನ್ ಕ್ಯಾಮೆರಾ ಉತ್ತಮ ಕ್ವಾಲಿಟಿಯನ್ನು ಸಹ ಹೊಂದಿರುವ ಕಾರಣ ಬಳಕೆದಾರರಿಗೆ ಇಷ್ಟವಾಗುತ್ತಿದೆ. Moto G85 5G ಸ್ಮಾರ್ಟ್‌ಫೋನ್‌ನ ಮತ್ತಷ್ಟು ಫೀಚರ್ ಮಾಹಿತಿ ನೋಡೋಣ ಬನ್ನಿ. 

Tap to resize

Latest Videos

undefined

Display: ಹೊಸ 5ಜಿ ಸ್ಮಾರ್ಟ್‌ಫೋನ್ 2400*1800 ಪಿಕ್ಸೆಲ್ ರೆಸೆಲ್ಯೂಷನ್ ಹೆಚ್‌ + P-OLED ಡಿಸ್‌ಪ್ಲೇ ಬಳಕೆ ಮಾಡಲಾಗಿದೆ. 1B ಕಲರ್ಸ 120Hz ಬ್ರೈಟ್‌ನೆಸ್, 1600 nits (peak) ಹೊಂದಿದೆ. 6.67 ಇಂಚ್‌, 107.4 cm2 ಸೈಜ್‌  ಹೊಂದಿದೆ. 

RAM And Storage: ಮೋಟೋದ 5ಜಿ ಸ್ಮಾರ್ಟ್‌ಫೋನ್ 8GB RAM ಜೊತೆ 128 GB  ಇಂಟರ್‌ನಲ್ ಸ್ಟೋರೇಜ್ ಹೊಂದಿದೆ.

Processor: ಮೋಟೋ ಕಂಪನಿಯ ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 6s Gen 3 ಆಕ್ಟಾ ಕೋರ್ ಪ್ರೊಸೆಸರ್ ಒಳಗೊಂಡಿದೆ. ಇದು ಆಂಡ್ರಾಯ್ಡ್ v14 ಹಲೋ ಯುಐ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Camera: ಡ್ಯುಯಲ್ ಕ್ಯಾಮೆರಾ ಈ ಸ್ಮಾರ್ಟ್‌ಫೋನ್‌ನಲ್ಲಿದೆ. 50 ಮೆಗಾಪಿಕ್ಸೆಲ್ ವೈಡ್‌ ಆಂಗಲ್, 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಮತ್ತು ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್ ಹೊಂದಿದೆ.

Battery: ಮೋಟೋದ 5ಜಿ ಸ್ಮಾರ್ಟ್‌ಫೋನ್ 33W ಟರ್ಬೋ ಪವರ್ ಜೊತೆ 5000 mAh ಬ್ಯಾಟರಿಯನ್ನು ಹೊಂದಿದೆ.

ಇದನ್ನೂ ಓದಿ: ರೀಚಾರ್ಜ್ ಮಾಡದೇ ಎಷ್ಟು ದಿನಗಳವರೆಗೆ ಸಿಮ್ ಬಳಸಬಹುದು?

ಶೇ.21 + ಶೇ.7.5ರಷ್ಟು ಡಿಸ್ಕೌಂಟ್
ಈ ಪವರ್‌ಫುಲ್ ಸ್ಮಾರ್ಟ್‌ಫೋನ್ ಬೆಲೆ ಭಾರತದ ಮಾರುಕಟ್ಟೆಯಲ್ಲಿ 26,000 ರೂ. ಇದೆ. ಈ ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ ಶೇ.21ರಷ್ಟು ರಿಯಾಯ್ತಿಯನ್ನು ನೀಡಿದೆ. ರಿಯಾಯ್ತಿ ಬಳಿಕ ಸ್ಮಾರ್ಟ್‌ಫೋನ್ 20,495 ರೂ.ಗೆ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಒಟ್ಟು 5,500 ರೂಪಾಯಿ ಸ್ಮಾರ್ಟ್‌ಫೋನ್ ಮೇಲೆ ಡಿಸ್ಕೌಂಟ್ ನೀಡಿದ್ದು, ಗ್ರಾಹಕರು ಇಎಂಐ ರೂಪದಲ್ಲಿಯೂ ಖರೀದಿಸಬಹುದಾಗಿದೆ. EMI ಆಯ್ಕೆ ಮಾಡಿಕೊಂಡರೆ ಪ್ರತಿ ತಿಂಗಳು 994 ರೂಪಾಯಿಯ ಕಂತು ಪಾವತಿಸಬೇಕು. ಖರೀದಿಯ ಸಮಯದಲ್ಲಿ ಯೆಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ಶೇ.7.5ರಷ್ಟು ಡಿಸ್ಕೌಂಟ್ ನಂತರ ಪವರ್‌ಫುಲ್ ಸ್ಮಾರ್ಟ್‌ಪೋನ್ 19,150 ರೂಪಾಯಿಯಲ್ಲಿ ಸಿಗಲಿದೆ.

ಇದನ್ನೂ ಓದಿ: ಡ್ರೋನ್‌ಗಳಿಗೆ ಪೈಪೋಟಿ ನೀಡಲು ಬರ್ತಿದೆ ಫ್ಲೈಯಿಂಗ್ ಕ್ಯಾಮೆರಾವುಳ್ಳ ರೆಡ್‌ಮಿ 5G ಸ್ಮಾರ್ಟ್‌ಫೋನ್

click me!