ಅತಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ 108MP ಕ್ಯಾಮೆರಾ, 6600mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್

By Mahmad Rafik  |  First Published Nov 6, 2024, 12:18 PM IST

ರಿಲಯನ್ಸ್ ಜಿಯೋ ಕೈಗೆಟುಕುವ ಬೆಲೆಯ 5G ಸ್ಮಾರ್ಟ್‌ಫೋನ್ 'ಜಿಯೋ ಭಾರತ್' ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.


ಮುಂಬೈ: ದೇಶದ ಆಗರ್ಭ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಜಿಯೋ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಿದೆ. ಇದೀಗ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಜಿಯೋ ಭಾರತ್ ಪರಿಚಯಿಸಲು ರಿಲಯನ್ಸ್ ಮುಂದಾಗಿದೆ. ಕೈಗೆಟುಕುವ ಬೆಲೆ ಜೊತೆಗೆ ಹಲವು ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ತಲುಪಿಸುವ ಉದ್ದೇಶವನ್ನು ರಿಲಯನ್ಸ್ ಜಿಯೋ ಹೊಂದಿದೆ. ಜಿಯೋದಿಂದ 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸುದ್ದಿಗಳು ಪ್ರಕಟವಾಗುತ್ತಿದ್ದು, ಅಧಿಕೃತ ಹೇಳಿಕೆಯೊಂದು ಬಾಕಿ ಇದೆ. ಬಜೆಟ್ ಫ್ರೆಂಡ್ಲಿಯಾಗಿರುವ ಈ ಸ್ಮಾರ್ಟ್‌ಫೋನ್ ಗೇಮ್ ಚೇಂಜರ್ ಆಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಜಿಯೋ ಭಾರತ್ 5G ಸ್ಮಾರ್ಟ್‌ಫೋನ್ 5.3 ಇಂಚಿನ ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿರುತ್ತೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ 90Hz ರಿಫ್ರೆಶ್ ರೇಟ್‌ನೊಂದಿಗೆ HD+  720×1920 pixels ರೆಸಲ್ಯೂಶನ್ ಹೊಂದಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಯಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6200 ಪ್ರೊಸೆಸರ್‌ನಿಂದ ಆಪರೇಟ್ ಆಗುತ್ತದೆ. ದಿನನಿತ್ಯದ ಇಂಟರ್‌ನೆಟ್ ಬಳಕೆಗಾಗಿ 5G ನೆಟ್‌ವರ್ಕ್ ಬಳಕೆಯಾಗುತ್ತದೆ. 5G ನೆಟ್‌ವರ್ಕ್ ಜೊತೆ ಸ್ಮಾರ್ಟ್‌ಪೋನ್ ಸಮರ್ಪಕ ಮತ್ತು ಕಾರ್ಯಕ್ಷಮತೆಯಿಂದ ಕೆಲಸ ಮಾಡುತ್ತದೆ. 

Tap to resize

Latest Videos

undefined

ಜಿಯೋ ಭಾರತ್ 5ಜಿ ಸ್ಮಾರ್ಟ್‌ಫೋನ್ ಮತ್ತೊಂದು ವೈಶಿಷ್ಟ್ಯ ಏನೆಂದ್ರೆ ಇದು ಮ್ಯಾಸಿವ್ 6,600mAh ಸಾಮರ್ಥ್ಯವುಳ್ಳ ಬ್ಯಾಟರಿಯನ್ನು ಹೊಂದಿದೆ. 45-ವ್ಯಾಟ್‌ ಫಾಸ್ಟ್‌ ಚಾರ್ಜರ್‌ನೊಂದಿಗೆ ಕೇವಲ 50 ನಿಮಿಷಗಳಲ್ಲಿ ,600mAh ಸಾಮರ್ಥ್ಯದ ಬ್ಯಾಟರಿ ಫುಲ್ ಆಗುತ್ತದೆ. ಅತಿವೇಗವಾಗಿ ಚಾರ್ಜಿಂಗ್ ಹೊಂದುವ ಸಾಮರ್ಥ್ಯವನ್ನು ಜಿಯೋ ಭಾರತ್ 5ಜಿ ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು ಕ್ಯಾಮೆರಾ ವಿಭಾಗ ನೋಡೋದಾದ್ರೆ ಒಳ್ಳೆಯ ದೃಶ್ಯಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಒಳಗೊಂಡಿದೆ ಪ್ರೈಮರಿ ಕ್ಯಾಮೆರಾ 108MP ಸೆನ್ಸಾರ್, 12MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5MP ಪೋರ್ಟ್ರೇಟ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಪ್ರಿಯರಿಗಾಗಿ ಮುಂಭಾಗ 13MP ಕ್ಯಾಮೆರಾ ಹೊಂದಿದೆ.

ಇದನ್ನೂ ಓದಿ: ಎಷ್ಟು ದಿನಕ್ಕೊಮ್ಮೆ ಸ್ಮಾರ್ಟ್‌ಫೋನ್ Restart ಮಾಡಬೇಕು? ಗೊತ್ತಿಲ್ಲದೇ ಏನೇನೋ ಮಾಡೋಕೆ ಹೋಗ್ಬೇಡಿ

Storage and RAM Options
6GB RAM ಜೊತೆ 64GB ಸ್ಟೋರೇಜ್ (base variant)
6GB RAM ಜೊತೆ 128GB ಸ್ಟೋರೇಜ್ (mid variant)
8GB RAM ಜೊತೆ 256GB ಸ್ಟೋರೇಜ್ (top variant)
ಹೊಸ ಜಿಯೋ ಭಾರತ್ 5ಜಿ ಸ್ಮಾರ್ಟ್‌ಫೋನ್ ಮೂರು ಬಗೆಯ ಸ್ಟೋರೇಜ್ ಸಾಮರ್ಥ್ಯದ ಫೋನ್ ಬಿಡುಗಡೆ ಮಾಡಲಿದೆ. ಬಳಕೆದಾರರು ತಮ್ಮ ಆರ್ಥಿಕ ಸ್ಥಿತಿಗನುಗುಣವಾಗಿ ನಿಮ್ಮಿಷ್ಟದ ಸ್ಮಾರ್ಟ್‌ಫೋನ್ ಆಯ್ಕೆ ಮಾಡಿಕೊಂಡು ಖರೀದಿಸಬಹುದಾಗಿದೆ. 

ನಿರೀಕ್ಷಿತ ಬೆಲೆ
ಜಿಯೋ ಭಾರತ್ 5ಜಿ ಯ ಅತ್ಯಂತ ಆಕರ್ಷಕ ಅಂಶವೆಂದರೆ ನಿರೀಕ್ಷಿತ ಬೆಲೆ 4,999 ರೂಪಾಯಿಯಿಂದ 5,999 ರೂ.ವರೆಗೆ ಹೊಸ ಫೋನ್‌ಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ವರ್ಷ ಅಂದ್ರೆ 2025ರ ಜನವರಿ ಅಥವಾ ಫೆಬ್ರವರಿಯಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳು ಪ್ರಕಟವಾಗಿವೆ. 

ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್: ಏನಿದರ ವಿಶೇಷ? ಬೆಲೆ ಎಷ್ಟು?

click me!