ನೀರಿಗೆ ಬಿದ್ದರೂ, ಕೈಜಾರಿ ನೆಲಕ್ಕಪಳಿಸಿದರೂ ಏನೂ ಆಗಲ್ಲ ಈ ಫೋನ್, ಸ್ಯಾಮ್‌ಸಂಗ್ A55,A35 ಲಾಂಚ್!

By Suvarna NewsFirst Published Mar 22, 2024, 7:59 PM IST
Highlights

ಸ್ಯಾಮ್‌ಸಂಗ್ ಅತ್ಯಾಧುನಿಕ ತಂತ್ರಜ್ಞಾನದ A55,A35 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ನೀರಿಗೆ ಬಿದ್ದರೂ, ಕೈ ಜಾರಿ ನೆಲಕ್ಕೆ ಅಪ್ಪಳಿಸಿದರೂ ಯಾವುದೇ ಸಮಸ್ಯೆ ಇಲ್ಲ. ಫೋನ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಎಐ ಕ್ಯಾಮೆರಾ, ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತಗಳ ಫೋನ್ ಬಿಡುಗಡೆಯಾಗಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

ಬೆಂಗಳೂರು(ಮಾ.22) ಮೊಬೈಲ್ ನಮ್ಮ ಅವಿಭಾಜ್ಯ ಅಂಗ. ಬಹುತೇಕ ಸಮಯ ನಮ್ಮಲ್ಲಿ ಮೊಬೈಲ್ ಇದ್ದೇ ಇರುತ್ತೆ. ಬಳಸುವಾಗ, ತುರಾತುರಿಯಲ್ಲಿ ಮೊಬೈಲ್ ಕೈಜಾರಿ ಬೀಳುವುದು, ನೀರಿಗೆ ಬೀಳುವು ಸಂಭವ ಹೆಚ್ಚು. ಇಷ್ಟೇ ಅಲ್ಲ ಹೀಗೆ ಬಿದ್ದ ಮೊಬೈಲ್ ಮತ್ತೆ ಕಾರ್ಯನಿರ್ವಹಿಸುವುದ ಸಾಧ್ಯತೆಯಿಲ್ಲ. ಇನ್ಮುಂದೆ ಈ ಸಮಸ್ಯೆ ಇಲ್ಲ. ಕಾರಣ ಸ್ಯಾಮ್‌ಸಂಗ್ ಇದೀಗ 30 ನಿಮಿಷ ನೀರಿನೊಳಗೆ ಬಿದ್ದರೂ, ಅಥವಾ ಕೈಜಾರಿ ನೆಲಕ್ಕೆ ಬಿದ್ದರೂ ಯಾವುದೇ ಸಮಸ್ಯೆಯಾಗದ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಹಾಗೂ A35 ಮೊಬೈಲ್ ಫೋನ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನಲ್ಲಿ  A55,A35 ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್, ಅತ್ಯಾಧುನಿಕ ಫೀಚರ್ಸ್ ಹಾಗೂ ಅಪ್‌ಡೇಟೆಡ್ ಸುರಕ್ಷತೆ ಅಡ್ವಾನ್ಸ್ ಟೆಕ್ನಾಲಜಿ ಕುರಿತು ಮಾಹಿತಿ ನೀಡಿದೆ. ಹೊಸ ಎ ಸೀರಿಸ್ ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ, ಎಐ ಫೀಚರ್ ಕ್ಯಾಮೆರಾ, ಟ್ಯಾಂಪರ್-ರೆಸಿಸ್ಟೆಂಟ್ ಸೆಕ್ಯೂರಿಟಿ, ಸ್ಯಾಮ್‌ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ. ಲಾಂಚ್ ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ನೀರಿನೊಳಗೆ ಹಾಕಿ ಫೋನ್ ಪರೀಕ್ಷಿಸಲಾಯಿತು. ಇಷ್ಟೇ ಅಲ್ಲ ಎತ್ತರದಿಂದ ನೆಲಕ್ಕೆ ಬೀಳಿಸಿ ಫೋನ್ ಪರೀಕ್ಷೆ ಮಾಡಲಾಗಿತ್ತು. ಈ ಎರಡೂ ಪರೀಕ್ಷೆಯಲ್ಲಿ ಫೋನ್‌ಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. 

2 ವರ್ಷ ವಾರೆಂಟಿ, 50MP ಕ್ಯಾಮೆರಾ:ಸ್ಯಾಮ್‌ಸಂಗ್ ಗೆಲಾಕ್ಸಿ XCover7 ಫೋನ್ ಲಾಂಚ್!

ಹೊಚ್ಚ ಹೊಸ ಫೋನ್ ಬೆಲೆ
ಗ್ಯಾಲಕ್ಸಿ ಎ55 5ಜಿ    
8GB+128GB    ರೂ. 36999
8GB+256GB    ರೂ. 39999
12GB+256GB    ರೂ. 42999

ಗ್ಯಾಲಕ್ಸಿ ಎ35 5ಜಿ    
8GB+128GB    ರೂ. 27999
8GB+256GB    ರೂ. 30999

ವಿನ್ಯಾಸ ಮತ್ತು ಬಾಳಿಕೆ: ಮೊದಲ ಬಾರಿಗೆ, ಗ್ಯಾಲಕ್ಸಿ ಎ55 5ಜಿ ಲೋಹದ ಚೌಕಟ್ಟನ್ನು ಹೊಂದಿದೆ ಮತ್ತು ಗ್ಯಾಲಕ್ಸಿ ಎ35 5ಜಿ ಪ್ರೀಮಿಯಂ ಗ್ಲಾಸ್ ಅನ್ನು ಮರಳಿ ಪಡೆದಿದೆ. ಈ ಫೋನ್‌ಗಳು ಆಸಮ್ ಲಿಲಾಕ್, ಆಸಮ್ ಐಸ್ ಬ್ಲೂ ಮತ್ತು ಆಸಮ್ ನೇವಿ ಎಂಬ ಮೂರು ಟ್ರೆಂಡಿ ಬಣ್ಣಗಳಲ್ಲಿ ಲಭ್ಯವಿದೆ. ಇದು ಐಪಿ67 ರೇಟಿಂಗ್ ಗಳಿಸಿದ್ದು, 1 ಮೀಟರ್ ಶುದ್ಧ ನೀರಿನಲ್ಲಿ 30 ನಿಮಿಷಗಳವರೆಗೆ ಇರಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಧೂಳು ಮತ್ತು ಮರಳು ನಿರೋಧಕ ಗುಣ ಇರುವ ಫೋನ್ ಗಳಾಗಿವೆ.

6.6-ಇಂಚಿನ ಎಫ್‌ಎಚ್‌ಡಿ+ ಸೂಪರ್ ಅಮೋಲ್ಡ್ ಡಿಸ್ಪ್ಲೇ ಮತ್ತು ಕಡಿಮೆಗೊಳಿಸಿದ ಬೆಜೆಲ್‌ಗಳ ಜೊತೆಗೆ 120ಹರ್ಟ್ಜ್ ರಿಫ್ರೆಶ್ ದರ ಹೊಂದಿದ್ದು, ಅತ್ಯಂತ ಸೂಕ್ಷ್ಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಸ್ಮಾರ್ಟ್‌ಫೋನ್‌ಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆಯೊಂದಿಗೆ ಬಾಳಿಕೆ ಬರುವಂತಹ ವಿಶೇಷತೆ ಹೊಂದಿವೆ.

ಕ್ಯಾಮೆರಾ ಆವಿಷ್ಕಾರಗಳು: ಈ ಹೊಸ ಎ ಸರಣಿಯ ಸ್ಮಾರ್ಟ್‌ಫೋನ್‌ಗಳು ಬಳಕೆದಾರರು ಅತ್ಯುನ್ನತ ಕಂಟೆಂಟ್ ಗಳನ್ನು ಸಿದ್ಧಗೊಳಿಸಲು ನವೀನ ಎಐ- ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತವೆ. ಫೋಟೋ ರೀಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಎಂಬ ಈ ವೈಶಿಷ್ಟ್ಯಗಳು ಲಭ್ಯವಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಗಳು 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿದ್ದು, ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್ಪಿ)ಮೂಲಕ ಉನ್ನತೀಕರಿಸಲ್ಪಟ್ಟ ನೈಟೋಗ್ರಫಿ ಹೆಗ್ಗಳಿಕೆ ಪಡೆದಿದೆ. ಆ ಮೂಲಕ ಎ ಸರಣಿಯಲ್ಲಿ ನೀವು ಹಿಂದೆಂದೂ ನೋಡಿರದ ಕಡಿಮೆ-ಬೆಳಕಿನ ಚಿತ್ರಗಳನ್ನು ತೆಗೆಯಬಹುದಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌ 24 ಸೀರಿಸ್‌ ಫೋನ್‌ ತಗೊಳ್ಭೇಕಾ? 10 ನಿಮಿಷದೊಳಗೆ ನಿಮ್ಮ ಮನೆಗೇ ಬರುತ್ತೆ ನೋಡಿ..!

ಅಪೂರ್ವ ಭದ್ರತೆ: ಸ್ಯಾಮ್‌ಸಂಗ್ ನಾಕ್ಸ್ ವಾಲ್ಟ್ ಸೆಕ್ಯುರಿಟಿ ವೈಶಿಷ್ಟ್ಯವನ್ನು ಮೊದಲ ಬಾರಿಗೆ ಎ-ಸೀರೀಸ್‌ನಲ್ಲಿ ನೀಡಲಾಗಿದ್ದು, ಗ್ರಾಹಕರಿಗೆ ಅಪೂರ್ವವಾದ ಭದ್ರತೆಯನ್ನು ಒದಗಿಸುತ್ತದೆ. ಹಾರ್ಡ್‌ವೇರ್ ಆಧಾರಿತ ಭದ್ರತಾ ವ್ಯವಸ್ಥೆಯು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ. ಪಿನ್ ಕೋಡ್‌ಗಳು, ಪಾಸ್‌ವರ್ಡ್‌ಗಳು ಮತ್ತು ಪ್ಯಾಟರ್ನ್‌ಗಳಂತಹ ಲಾಕ್ ಸ್ಕ್ರೀನ್ ಕ್ರೆಡೆನ್ಷಿಯಲ್ ಗಳು ಒಳಗೊಂಡಂತೆ ಸಾಧನಗಳಲ್ಲಿನ ಅತ್ಯಂತ ಮಹತ್ವದ ಡೇಟಾಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಅತ್ಯುತ್ತಮ ಕಾರ್ಯಕ್ಷಮತೆ: 4ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಹೊಚ್ಚ ಹೊಸ ಎಕ್ಸಿನೋಸ್ 1480 ಪ್ರೊಸೆಸರ್ ಗ್ಯಾಲಕ್ಸಿ ಎ55 5ಜಿಗೆ ಅಪಾರವಾದ ಶಕ್ತಿ ನೀಡುತ್ತದೆ. ಗ್ಯಾಲಕ್ಸಿ ಎ35 5ಜಿ ಅನ್ನು 5ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಎಕ್ಸಿನೋಸ್ 1380 ಪ್ರೊಸೆಸರ್‌ಗೆ ಅಪ್‌ಗ್ರೇಡ್ ಮಾಡಲಾಗಿದೆ. ಈ ಅತ್ಯುನ್ನತ ಫೋನ್‌ಗಳು ಹಲವಾರು ಎನ್ಪಿಯು, ಜಿಪಿಯು ಮತ್ತು ಸಿಪಿಯು ಅಪ್‌ಗ್ರೇಡ್‌ಗಳೊಂದಿಗೆ 70%+ ದೊಡ್ಡ ಕೂಲಿಂಗ್ ಚೇಂಬರ್‌ನೊಂದಿಗೆ ಬರುತ್ತವೆ. ಅದು ನೀವು ಆಟವಾಡುತ್ತಿರುವಾಗಲೀ, ಅಥವಾ ಮಲ್ಟಿ ಟಾಸ್ಕಿಂಗ್ ಮಾಡುತ್ತಿರುವಾಗಲೀ ಅತ್ಯುತ್ತಮವಾಗಿ ಕಾರ್ಯನಿರ್ಹವಿಸುವಂತೆ ಮಾಡುತ್ತದೆ. 

click me!