ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3, ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಫೋನ್ ಅನಾವರಣ

By Suvarna NewsFirst Published Aug 12, 2021, 11:40 AM IST
Highlights

ಮೊನ್ನೆಯಷ್ಟೇ ನಡೆದ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಸ್ಯಾಮ್ಸಂಗ್‌ನ ಬಹು ನಿರೀಕ್ಷೆಯ ಗ್ಯಾಲಕ್ಸಿ ಜೆಡ್ ಫೋಲ್ಡ್ 3 ಮತ್ತು ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಸ್ಮಾರ್ಟ್‌ಫೋನುಗಳನ್ನು ಅನಾವರಣ ಮಾಡಿದೆ. ಈ ಎರಡು ಫೋನ್‌ಗಳ ಬಗ್ಗೆ ಗ್ರಾಹಕರಲ್ಲಿ ಭಾರೀ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಈ ಫೋನುಗಳು ಹಲವು ದೃಷ್ಟಿಗಳಿಂದಲೂ ವಿಶಿಷ್ಟವಾಗಿವೆ.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸ್ಯಾಮ್ಸಂಗ್ ಜೆಡ್ ಫೋಲ್ಡ್ 3 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಸ್ಮಾರ್ಟ್‌ಫೋನ್‌ಗಳು ಅನಾವರಣಗೊಂಡಿವೆ. ಮೊನ್ನೆಯಷ್ಟೇ ನಡೆದ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಸ್ಯಾಮ್ಸಂಗ್ ಕಂಪನಿಯು ಈ ಹೊಸ ಫೋನುಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಅತ್ಯಾಧುನಿಕ ಫೀಚರ್‌ಗಳಳ್ಳು ಈ  ಸ್ಮಾರ್ಟ್‌ಫೋನ್‌ಗಳು ಬಹಳಷ್ಟು ಸಾಧ್ಯತೆಗಳನ್ನು ಹೊಂದಿವೆ.

ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ ಜೆಡ್ ಫೋಲ್ಡ್ 2 ಮುಂದಿನ ಆವೃತ್ತಿಯಾಗಿ ಗ್ಯಾಲಕ್ಸಿ ಜೆಡ್ ಫೋಲ್ಡ್ 3 ಲಾಂಚ್ ಮಾಡಿದ್ದರೆ, ಗ್ಯಾಲಕ್ಸಿ ಜೆಡ್ ಫ್ಲಿಪ್ ಮತ್ತು ಗ್ಯಾಲಕ್ಸಿ ಫ್ಲಿಪ್ ಜೆಡ್ 5ಜಿ ಬದಲಿಗೆ ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಲೇಯರ್ ರಚನೆಯನ್ನು ಮರುವಿನ್ಯಾಸಗೊಳಿಸುವುದರ ಮೂಲಕ ಮತ್ತು ಹೊಸ ರಕ್ಷಣಾತ್ಮಕ ಫಿಲ್ಮ್ ಅನ್ನು ಬಳಸುವ ಮೂಲಕ ಹೊಸ ಮಾದರಿಗಳಲ್ಲಿ ಲಭ್ಯವಿರುವ ತನ್ನ ಹೊಂದಿಕೊಳ್ಳುವ ಪ್ರದರ್ಶಕಗಳ ಬಾಳಿಕೆಯನ್ನು ಹಿಂದಿನ ಫೋಲ್ಡಬಲ್‌ಗಳ ಫೋನ್‌ಗಳಿಗಿಂತಲೂ ಸುಮಾರು 80 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. 

ನೋಕಿಯಾ ಸಿ20 ಪ್ಲಸ್ ಲಾಂಚ್, ಒಮ್ಮೆ ಚಾರ್ಜ್ ಮಾಡಿದ್ರೆ 2 ದಿನ ಬರುತ್ತೆ!

ಅತ್ಯಾಧುನಿಕ ಫೋನ್‌ಗಳಾಗಿರುವುದರಿಂದ ಇವುಗಳ ಬೆಲೆಯೂ ದುಬಾರಿಯೇ ಆಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3 ಸ್ಮಾರ್ಟ್‌ಫೋನ್ ಬೆಲೆ ಅಂದಾಜು 1,33,600 ರೂ. ಇರಲಿದೆ. ಜೊತೆಗೆ ಈ ಫೋನ್ 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹಾಗೂ 12 ಜಿಬಿ ರ್ಯಾಮ್ ಮತ್ತು 512 ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ದೊರೆಯಲಿದೆ. 

ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ ಸ್ಮಾರ್ಟ್‌ಫೋನ್ ಬೆಲೆಯು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 74 ಸಾವಿರ ರೂಪಾಯಿ ಇರಲಿದೆ. ಕ್ರೀಮ್, ಗ್ರೀನ್, ಗ್ರೇ, ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಈ ಫೋನ್ ಸಿಗಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ ಫೋನ್ ನಿಮಗೆ ಆಗಸ್ಟ್ 27ರಿಂದ ಮಾರಾಟಕ್ಕೆಸಿಗಲಿದೆ. ಸದ್ಯಕ್ಕೆ ಈ ಫೋನ್, ಅಮೆರಿಕ, ಯರೋಪ್, ದಕ್ಷಿಣ ಕೋರಿಯಾ ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಿರಲಿದೆ. ಭಾರತೀಯ ಮಾರುಕಟ್ಟೆಗೆ ಯಾವಾಗ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಟ್ 3 ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನ್ ಒನ್ ಯುಐನೊಂದಿಗೆ ಆಂಡ್ರಾಯ್ಡ್ 11 ಓಎಸ್‌ನಲ್ಲಿ ರನ್ ಆಗುತ್ತದೆ. ಈ ಫೋನ್ 7.6 ಇಂಚ್ ಪ್ರೈಮರಿ QXGA+ ಡೈನಾಮಿಕ್ ಅಮೋಎಲ್ಇಡಿ 2X ಇನ್ಫಿನಿಟಿ ಪ್ರದರ್ಶಕವನ್ನು ಒಳಗೊಂಡಿದೆ.

ಸದ್ದಿಲ್ಲದೇ ಲಾಂಚ್ ಆದ ವಿವೋ ವೈ12ಜಿ ಸ್ಮಾರ್ಟ್‌ಫೋನ್

ಈ ಫೋನ್ 5ಎನ್ಎಂ ಅಕ್ಟಾ ಕೋರ್ ಎಸ್ಒಎಸ್ ಒಳಗೊಂಡಿದೆ. ಹಾಗಿದ್ದೂ ಕಂಪನಿಯು ಎಸ್ಒಎಸ್‌ನ ನಿರ್ದಿಷ್ಟವಾದ ಹೆಸರನ್ನು ಕಂಪನಿ ಇನ್ನು ಬಹಿರಂಗಪಡಿಸಿಲ್ಲ. ಹಾಗಿದ್ದೂ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಫೋನ್‌ನ ಸ್ಟ್ಯಾಂಡರ್ಡ್ ರ್ಯಾಮ್ 12 ಜಿಬಿ ಇರಲಿದೆ ಎಂಬ ಮಾಹಿತಿ ಇದೆ. ಸಾಕಷ್ಟು ಫೀಚರ್‌ಗಳನ್ನು ಇದು ಒಳಗೊಂಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3 ಫೋನ್‌ನಲ್ಲಿ ನೀವು ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಕಾಣಬಹುದು. ಈ ಹಿಂದಿನ ಆವೃತ್ತಿಯ ಫೋನ್‌ನಲ್ಲಿರವಂತೆಯೇ ಕ್ಯಾಮೆರಾ ಸೆಟ್‌ ಅನ್ನು ಇಲ್ಲೂ ಕಾಣಬಹುದು. ಕ್ಯಾಮೆರಾ ಸೆಟಪ್ 12 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಅನ್ನು ಎಫ್/1.8 ವೈಡ್ ಆಂಗಲ್ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್), 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಮತ್ತು 12 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಡ್ಯುಯಲ್ ಒಐಎಸ್ ಬೆಂಬಲವನ್ನು ಒಳಗೊಂಡಿದೆ.

ಫೋನ್  ಕವರ್ ಮೇಲೆ ನಿಮಗೆ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗೆ 10 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. ಹೆಚ್ಚುವರಿಯಾಗಿ ಕಂಪನಿಯು ಫೋಲ್ಟಿಂಗ್ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಅಂಡರ್ ಡಿಸ್‌ಪ್ಲೇ ಕ್ಯಾಮೆರಾವನ್ನು ಅಳವಡಿಸಿದೆ. 

ಗೂಗಲ್ ಪಿಕ್ಸೆಲ್ 6, ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ

ಇನ್ನುಳಿದಂತೆ ನೀವು ಸ್ಯಾಮ್ಸಂಗ್‌ ಫೋನುಗಳಲ್ಲಿ ಕಾಣಬಹುದಾದ ಎಲ್ಲ ಅತ್ಯಾಧುನಿಕ ಫೀಚರ್‌ಗಳನ್ನು ಈ ಫೋನುಗಳಲ್ಲಿ ಕಾಣಬಹುದು. ಸ್ಯಾಮ್ಸಂಗ್ ತನ್ನ ವಿಶಿಷ್ಟ ಫೀಚರ್ ಹಾಗೂ ಪರಿಣಾಮಕಾರಿ ಪ್ರದರ್ಶನದಿಂದ ಗ್ರಾಹಕರನ್ನು ಸೆಳೆಯಲು ಕಾರಣವಾಗಿದೆ. ಅದೇ ನೀತಿಯನ್ನು ಈ ಫೋನುಗಳಲ್ಲಿ ಕಂಪನಿ ಮುಂದುವರಿಸಿದೆ.

click me!