ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE ಬಿಡುಗಡೆ: ಒನ್ UI 9 ಮತ್ತು ಬಲಿಷ್ಠ AI ವೈಶಿಷ್ಟ್ಯಗಳೊಂದಿಗೆ ಮಾರ್ಕೆಟ್‌ಗೆ ಲಗ್ಗೆ

Published : Aug 28, 2026, 12:43 PM IST
Samsung Galaxy

ಸಾರಾಂಶ

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S26 FE ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಇದು One UI 9 ಕಾರ್ಯಾಚರಣಾ ವ್ಯವಸ್ಥೆ ಹೊಂದಿರುವ ಮೊದಲ ಫೋನ್ ಆಗಿದ್ದು, ಸುಧಾರಿತ ಗ್ಯಾಲಕ್ಸಿ AI ಸಾಮರ್ಥ್ಯಗಳು ಮತ್ತು ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಫೋನ್ 7 ವರ್ಷಗಳ OS ಅಪ್‌ಡೇಟ್‌ಗಳ ಭರವಸೆಯೊಂದಿಗೆ ಬರುತ್ತದೆ.

ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಜನಪ್ರಿಯ 'ಗ್ಯಾಲಕ್ಸಿ S26' ಸರಣಿಯ ನೂತನ ಆವೃತ್ತಿಯಾದ 'ಗ್ಯಾಲಕ್ಸಿ S26 FE' (Fan Edition) ಸ್ಮಾರ್ಟ್‌ಫೋನ್ ಅನ್ನು ಜಾಗತಿಕ ಮಾರುಕಟ್ಟೆಗೆ ಅಧಿಕೃತವಾಗಿ ಪರಿಚಯಿಸಿದೆ. ಈ ಫೋನ್ ಅತ್ಯಾಧುನಿಕ One UI 9 ಕಾರ್ಯಾಚರಣಾ ವ್ಯವಸ್ಥೆಯ (OS) ಯೊಂದಿಗೆ ಬಿಡುಗಡೆಯಾದ ಪ್ರಥಮ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನೂತನ ಫೋನ್ ನಲ್ಲಿ ಬಳಕೆದಾರರ ದೈನಂದಿನ ಚಿತ್ರೀಕರಣ, ಕ್ರಿಯೇಟಿವಿಟಿ ಹಾಗೂ ಡಿಜಿಟಲ್ ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಸಂಸ್ಥೆಯು ಇದರಲ್ಲಿ ಸುಧಾರಿತ ಕ್ಯಾಮೆರಾ ತಂತ್ರಜ್ಞಾನ ಮತ್ತು ಹೆಚ್ಚು ಕೃತಕ ಬುದ್ಧಿಮತ್ತೆಯ (Galaxy AI) ಸಾಮರ್ಥ್ಯಗಳನ್ನು ಅಳವಡಿಸಿದೆ.

ಬೆಲೆ ಮತ್ತು ಲಭ್ಯತೆಯ ವಿವರಗಳು

ಜಾಗತಿಕ ಬೆಲೆ: ಗ್ಯಾಲಕ್ಸಿ S26 FE ನ ಆರಂಭಿಕ ಆವೃತ್ತಿಯಾದ 8GB RAM + 128GB ಸಂಗ್ರಹಣಾ ಸಾಮರ್ಥ್ಯದ ಮಾಡೆಲ್ ಬೆಲೆ ಜಾಗತಿಕವಾಗಿ $699.99 ರಿಂದ ಪ್ರಾರಂಭವಾಗುತ್ತದೆ. ಈ ಫೋನ್‌ನ ಭಾರತೀಯ ಬೆಲೆಯನ್ನು ಸಂಸ್ಥೆ ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದಾಗ್ಯೂ, ಮೂಲ ಗ್ಯಾಲಕ್ಸಿ S26 ನ 12GB + 256GB ಆವೃತ್ತಿಯ ಬೆಲೆ ಭಾರತದಲ್ಲಿ ರೂ. 79,999 ರಿಂದ ಆರಂಭವಾಗುತ್ತದೆ. ಈ ಹೊಸ ಸ್ಮಾರ್ಟ್‌ಫೋನ್ ಆಯ್ಕೆಮಾಡಿದ ಜಾಗತಿಕ ಮಾರುಕಟ್ಟೆಗಳಲ್ಲಿ ಬ್ಲೂಬೆರ್ರಿ, ಗ್ರ್ಯಾಫೈಟ್ ಮತ್ತು ಪಿಸ್ತಾ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿದೆ.

ಗ್ಯಾಲಕ್ಸಿ S26 FE ನ ಪ್ರಮುಖ ವೈಶಿಷ್ಟ್ಯಗಳು

1. ಸುಧಾರಿತ ಕ್ಯಾಮೆರಾ ತಂತ್ರಜ್ಞಾನ:

ಫೋನ್‌ನಲ್ಲಿ ತ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ವೀಡಿಯೊ ಹಾಗೂ ಛಾಯಾಗ್ರಹಣಕ್ಕಾಗಿ ಅತ್ಯಾಧುನಿಕ ಇಮೇಜ್-ಪ್ರೊಸೆಸಿಂಗ್ ಸೌಲಭ್ಯಗಳಿವೆ.

ಮೈ ಫ್ಯಾನ್‌ಕ್ಯಾಮ್ (My FanCam): ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್‌ಗಳಲ್ಲಿದ್ದ ಈ ವಿಶಿಷ್ಟ ವೈಶಿಷ್ಟ್ಯವನ್ನು ಈಗ S26 FE ಗೆ ತರಲಾಗಿದೆ. ಇದು ವೀಡಿಯೊ ರೆಕಾರ್ಡಿಂಗ್ ವೇಳೆ ವಸ್ತುವನ್ನು (Subject) ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡಿ ಫೋಕಸ್‌ನಲ್ಲಿಡುತ್ತದೆ, ಜೊತೆಗೆ ನೈಜ ಸಮಯದಲ್ಲಿ ಸೋಶಿಯಲ್ ಮೀಡಿಯಾಗೆ ಸೂಕ್ತವಾಗುವಂತೆ ವೀಡಿಯೊ ಮರುಹೊಂದಿಸುತ್ತದೆ.

3x ಆಪ್ಟಿಕಲ್ ಜೂಮ್ & ನೈಟೋಗ್ರಫಿ: ದೂರದ ದೃಶ್ಯಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಲು 3x ಆಪ್ಟಿಕಲ್ ಜೂಮ್ ಲೆನ್ಸ್ ಹಾಗೂ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಫೋಟೋ ನೀಡಲು 'ನೈಟೋಗ್ರಫಿ' (Nightography) ತಂತ್ರಜ್ಞಾನ ನೀಡಲಾಗಿದೆ.

12MP ಫ್ರಂಟ್ ಕ್ಯಾಮೆರಾ: ಸಮೂಹ ಸೆಲ್ಫಿಗಳಿಗಾಗಿ ಅಗಲವಾದ ಫ್ರೇಮ್ ಒದಗಿಸುವ 12-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇಲ್ಲಿದೆ.

ಸ್ಟೆಬಿಲೈಸೇಶನ್: 'ಹರಿಜಾಂಟಲ್ ಲಾಕ್' ನೊಂದಿಗೆ ಸೂಪರ್ ಸ್ಟೆಡಿ ಸಿಸ್ಟಮ್ ಇದ್ದು, ವೇಗವಾಗಿ ಚಲಿಸುವಾಗಲೂ ವೀಡಿಯೊಗಳು ಅಲುಗಾಡದಂತೆ ಸ್ಪಷ್ಟವಾಗಿ ಮೂಡಿಬರುತ್ತವೆ.

2. ಕೃತಕ ಬುದ್ಧಿಮತ್ತೆ (Galaxy AI) ಮತ್ತು ಒನ್ UI 9:

ನ್ಯಾಚುರಲ್ ಲ್ಯಾಂಗ್ವೇಜ್ ಫೋಟೋ ಅಸಿಸ್ಟ್ ಅಂದರೆ ಸರಳ ಭಾಷಾ ಪದಗಳನ್ನು ನೀಡುವ ಮೂಲಕ ಫೋಟೋಗಳನ್ನು ಹಂತ-ಹಂತವಾಗಿ ಎಡಿಟ್ ಅಥವಾ ಮಾರ್ಪಾಡು ಮಾಡಬಹುದು.

ಜೆಮಿನಿ ಓಮ್ನಿ ಟೂಲ್ (Gemini Omni) ಅಂದರೆ ಗ್ಯಾಲರಿಯಲ್ಲಿರುವ ಫೋಟೋಗಳು ಮತ್ತು ವೀಡಿಯೊ ತುಣುಕುಗಳನ್ನು ಸುಲಭವಾಗಿ ಒಂದೊಳ್ಳೆ ವೃತ್ತಿಪರ ವೀಡಿಯೊ ಆಗಿ ಪರಿವರ್ತಿಸಲು ಇದು ನೆರವಾಗುತ್ತದೆ.

ಬ್ರೀಫಿಂಗ್ ಮತ್ತು ನೌ ನಡ್ಜ್ ಅಂದರೆ S25 ಸರಣಿಯಲ್ಲಿದ್ದ ಬ್ರೀಫಿಂಗ್ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಬಳಕೆದಾರರು ಸಣ್ಣ ಆಜ್ಞೆಗಳ ಮೂಲಕ ತಮಗೆ ಬೇಕಾದ ಮಾಹಿತಿ ಕಾರ್ಡ್‌ಗಳನ್ನು ರಚಿಸಿಕೊಳ್ಳಬಹುದು. ಇದರೊಂದಿಗೆ 'ಸರ್ಕಲ್ ಟು ಸರ್ಚ್' ಮತ್ತು ಭವಿಷ್ಯಸೂಚಕ AI ಸಾಮರ್ಥ್ಯಗಳು ಸೇರಿವೆ.

ಸ್ಪೆಸಿಫಿಕೇಶನ್‌ಗಳು

ಡಿಸ್ಪ್ಲೇ: 6.7-ಇಂಚಿನ AMOLED ಡಿಸ್ಪ್ಲೇ ಹೊಂದಿದ್ದು, ಸ್ಮೂತ್ ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆಗೆ ಅನುಕೂಲವಾಗುವಂತೆ 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ.

ಪ್ರೊಸೆಸರ್: ಬಲಿಷ್ಠ Exynos 2500 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ ಹಾಗೂ ಚಾರ್ಜಿಂಗ್: 4,900mAh ಸಾಮರ್ಥ್ಯದ ಬ್ಯಾಟರಿ ಇದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಸ್ಯಾಮ್‌ಸಂಗ್ ಈ ಫೋನ್‌ಗೆ ಬರೋಬ್ಬರಿ 7 ವರ್ಷಗಳ Android OS ಅಪ್‌ಗ್ರೇಡ್‌ಗಳು ಮತ್ತು 7 ವರ್ಷಗಳ ಭದ್ರತಾ ನವೀಕರಣಗಳನ್ನು (Security Patches) ಭರವಸೆ ನೀಡಿದೆ. ಫೋನ್ ಖರೀದಿಸುವ ಬಳಕೆದಾರರಿಗೆ 5 TB ಕ್ಲೌಡ್ ಸ್ಟೋರೇಜ್ ಮತ್ತು ವಿಸ್ತೃತ AI ಸೌಲಭ್ಯಗಳನ್ನೊಳಗೊಂಡ Google AI Pro Bundle ನ 6 ತಿಂಗಳ ಉಚಿತ ಟ್ರಯಲ್ ದೊರೆಯಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Lava Bold N4 Lite: ದೇಸಿ ಕಂಪನಿ ಧಮಾಕಾ : 8 ಸಾವಿರಕ್ಕೆ ಸಿಗ್ತಿರೋ ಫೋನ್, ಹಾಳಾದ್ರೆ ಮನೆಗೆ ಬಂದು ರಿಪೇರಿ !
ಭಾರತಕ್ಕೆ ಫಿಲಿಪ್ಸ್ ಮೊಬೈಲ್ ಗ್ರ್ಯಾಂಡ್ ಎಂಟ್ರಿ! ಕ್ಯಾಮೆರಾ ಪ್ರಿಯರಿಗಾಗಿ 'Philips S7221 5G' ಬಿಡುಗಡೆ