
ಭಾರತೀಯ ಗ್ರಾಹಕರ ನೆಚ್ಚಿನ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಫಿಲಿಪ್ಸ್ (Philips) ಇದೀಗ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದೆ. ಅತ್ಯಾಧುನಿಕ 5G ತಂತ್ರಜ್ಞಾನದೊಂದಿಗೆ 'ಫಿಲಿಪ್ಸ್ S7221' (Philips S7221 5G) ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈಗಾಗಲೇ ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ (Amazon India) ಈ ಫೋನಿನ ಮೈಕ್ರೋಸೈಟ್ ಲೈವ್ ಆಗಿದ್ದು, ಭಾರತದಲ್ಲಿ ಅಮೆಜಾನ್ ಮೂಲಕವೇ ಈ ಫೋನ್ ಮಾರಾಟವಾಗಲಿದೆ ಎಂಬುದು ದೃಢಪಟ್ಟಿದೆ.
ಫಿಲಿಪ್ಸ್ S7221 ಸ್ಮಾರ್ಟ್‌ಫೋನ್ 6.67 ಇಂಚಿನ HD+ ಫ್ಲಾಟ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆಗೆ ಅತ್ಯುತ್ತಮ ಅನುಭವ ನೀಡಲು 120Hz ರಿಫ್ರೆಶ್ ರೇಟ್ ಹಾಗೂ ಪಂಚ್-ಹೋಲ್ (Punch-hole) ಸೆಲ್ಫಿ ಕಟೌಟ್ ವಿನ್ಯಾಸವನ್ನು ನೀಡಲಾಗಿದೆ.
ಫೋಟೋಗ್ರಫಿ ಪ್ರಿಯರಿಗಾಗಿ ಈ ಫೋನ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಸೆಟಪ್ ನೀಡಲಾಗಿದೆ.
ಹಿಂಬದಿ ಕ್ಯಾಮೆರಾ: 64 ಮೆಗಾಪಿಕ್ಸೆಲ್ AI ಸಾಮರ್ಥ್ಯದ ಮುಖ್ಯ ಕ್ಯಾಮೆರಾ ಹೊಂದಿದ್ದು, ಚೌಕಾಕಾರದ (Square module) ಕ್ಯಾಮೆರಾ ಸೆಟಪ್ ಹಾಗೂ ವೃತ್ತಾಕಾರದ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ.
ಮುಂಭಾಗದ ಕ್ಯಾಮೆರಾ: ಸೆಲ್ಫಿ ಹಾಗೂ ಹೈ-ಕ್ವಾಲಿಟಿ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ ನೀಡಲಾಗಿದೆ.
ಈ ಫೋನಿನ ಪ್ರಮುಖ ಹೈಲೈಟ್‌ಗಳಲ್ಲಿ ಇದರ ಬ್ಯಾಟರಿಯೂ ಒಂದು. ದೀರ್ಘಕಾಲದ ಬ್ಯಾಕಪ್‌ಗಾಗಿ ಬರೋಬ್ಬರಿ 5,700mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ, ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ನೀಡಲು ಈ ಡಿವೈಸ್‌ಗೆ IP64 ರೇಟಿಂಗ್ ಸುರಕ್ಷತೆ ನೀಡಲಾಗಿದೆ. ಆಡಿಯೋ ವಿಭಾಗದಲ್ಲಿ ಫಿಲಿಪ್ಸ್ ಯಾವಾಗಲೂ ಮುಂದು. ಈ ಫೋನ್‌ನಲ್ಲಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಕಂಪನಿಯ ವಿಶೇಷ 'ಅಲ್ಟ್ರಾ ಮ್ಯಾಕ್ಸ್ ಆಡಿಯೋ' (Ultra Max Audio) ಫೀಚರ್ ಇರಲಿದೆ. ಇದು ಸಿನಿಮಾ, ಹಾಡು ಮತ್ತು ಗೇಮಿಂಗ್ ವೇಳೆ ಅತ್ಯುತ್ತಮ ಸರೌಂಡ್ ಸೌಂಡ್ ಅನುಭವ ನೀಡಲಿದೆ.
ಈ ಸ್ಮಾರ್ಟ್‌ಫೋನ್ ಎರಡು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ:
6GB RAM + 128GB Storage
8GB RAM + 256GB Storage
ವಿನ್ಯಾಸದ ವಿಚಾರದಲ್ಲಿ ಫ್ಲಾಟ್ ಫ್ರೇಮ್, ಕರ್ವ್ಡ್ ಬ್ಯಾಕ್ ಪ್ಯಾನೆಲ್ ಹೊಂದಿದ್ದು, ಕಪ್ಪು (Black), ಸಿಲ್ವರ್ (Silver) ಮತ್ತು ಬಿಳಿ (White) ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಫಿಲಿಪ್ಸ್ ಕಂಪನಿಯು ಈ ಫೋನಿನ ಪ್ರೊಸೆಸರ್ ವಿವರ ಮತ್ತು ಅಧಿಕೃತ ಬೆಲೆಯನ್ನು ಇನ್ನಷ್ಟೇ ಗುಪ್ತವಾಗಿಟ್ಟಿದೆ. ಅಮೆಜಾನ್‌ನಲ್ಲಿ 'Coming Soon' ಬ್ಯಾನರ್ ಪ್ರಕಟವಾಗಿರುವುದರಿಂದ, ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲಿ ಇದರ ಬೆಲೆ ಮತ್ತು ಮೊದಲ ಸೇಲ್ (Sale Date) ದಿನಾಂಕ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ. ಬಜೆಟ್ ಮತ್ತು ಮಿಡ್-ರೇಂಜ್ ಬೆಲೆಯಲ್ಲಿ ಈ ಫೋನ್ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.