ಜಿಯೋದಿಂದ ಅತಿ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ - ಪ್ರತಿದಿನ ಸಿಗುತ್ತೆ 1 GB ಡೇಟಾ ಜೊತೆ ಮತ್ತಷ್ಟು ಮಗದಷ್ಟು  ಆಫರ್‌ಗಳು 

By Mahmad Rafik  |  First Published Jul 29, 2024, 5:36 PM IST

ಇಂದು ನಾವು ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುವ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ. ಈ ಪ್ಲಾನ್‌ನಡಿ ಪ್ರತಿದಿನ 1 ಜಿಬಿ ಡೇಟಾ ಜೊತೆಗೆ ಹಲವು ಆಫರ್‌ಗಳು ನಿಮ್ಮದಾಗಲಿವೆ.


ರಿಲಯನ್ಸ್ ಜಿಯೋ ಸೇರಿದಂತೆ ಬೇರೆ ಟೆಲಿಕಾಂ ಕಂಪನಿಗಳು ಈ ತಿಂಗಳ ಆರಂಭದಲ್ಲಿಯೇ ತಮ್ಮ ಟ್ಯಾರಫ್ ಪ್ಲಾನ್‌ಗಳಲ್ಲಿ ಬದಲಾವಣೆಯನ್ನು ತಂದಿದ್ದವು. ಟ್ಯಾರಿಫ್ ಪ್ಲಾನ್ ಹೆಚ್ಚಾದ ಹಿನ್ನೆಲೆ  ಬಳಕೆದಾರರು ಅತಿ ಕಡಿಮೆ ಬೆಲೆಯ ಉತ್ತಮ ಪ್ಲಾನ್ ಹುಡುಕಾಟದಲ್ಲಿದ್ದಾರೆ. ಇದೀಗ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಪೋರ್ಟಫೋಲಿಯೋದಲ್ಲಿ 22 ದಿನಗಳಿಂದ 365 ದಿನದ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಸೇರ್ಪಡೆಗೊಳಿಸುತ್ತಿದೆ. ಇಂದು ನಾವು ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುವ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ. ಈ ಪ್ಲಾನ್‌ನಡಿ ಪ್ರತಿದಿನ 1 ಜಿಬಿ ಡೇಟಾ ಜೊತೆಗೆ ಹಲವು ಆಫರ್‌ಗಳು ನಿಮ್ಮದಾಗಲಿವೆ.

22 ದಿನದ ಕಡಿಮೆ ಬೆಲೆಯ ಪ್ಲಾನ್ 

Latest Videos

undefined

ಜಿಯೋ 22 ದಿನ ವ್ಯಾಲಿಡಿಟಿಯ ಕಡಿಮೆ ದರದ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಬೆಲೆ 209 ರೂಪಾಯಿ ಆಗಿದೆ. ಇದು ಜಿಯೋ ನೀಡುತ್ತಿರುವ ಕಡಿಮೆ ದರದ ಪ್ಲಾನ್ ಆಗಿದೆ. 209 ರೂಪಾಯಿ ರೀಚಾರ್ಜ್ ಮಾಡಿಸಿದ್ರೆ 22 ದಿನಗಳವರೆಗೆ ಪ್ರತಿದಿನ 1 ಜಿಬಿ ಡೇಟಾ, 100 ಎಸ್‌ಎಂಎಸ್‌ ಸಿಗಲಿವೆ. ಇದರ ಜೊತೆಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಸಿಗಲಿದೆ. 

ಬಡವರ ಬದುಕಿಗೆ ಮತ್ತೊಂದು ಹೊರೆ; ಹಾಲು, ಪೆಟ್ರೋಲ್‌ ಆಯ್ತು.. ಮೊಬೈಲ್‌ ರಿಚಾರ್ಜ್‌ ಕೂಡ ಈಗ ದುಬಾರಿ!

ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ನಂತರ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಫ್ರೀ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. ಜಿಯೋ ಸಿನಿಮಾದಲ್ಲಿ 10 ಸಾವಿರಕ್ಕೂ ಅಧಿಕ ಸಿನಿಮಾಗಳಿದ್ದು, ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ ಹಾಗೂ ಕ್ರೀಡೆಗಳ ಲೈವ್ ಪಂದ್ಯ ವೀಕ್ಷಿಸಬಹುದಾಗಿದೆ. ಈ ಮೊದಲು ಪ್ಲಾನ್ ವ್ಯಾಲಿಡಿಟಿ 28 ದಿನ ಇತ್ತು. ಬೆಲೆ 249 ರೂಪಾಯಿ ಆಗಿತ್ತು. ಇದೀಗ ಬೆಲೆ ಮತ್ತು ವ್ಯಾಲಿಡಿಟಿ ಎರಡೂ ಇಳಿಕೆಯಾಗಿದೆ. 

98 ದಿನ ವ್ಯಾಲಿಡಿಟಿಯ ಮತ್ತೊಂದು ಪ್ಲಾನ್

ರಿಲಯನ್ಸ್ ಜಿಯೋ 98 ದಿನ ವ್ಯಾಲಿಡಿಟಿಯ ಮತ್ತೊಂದು ವಿಶೇಷ ಪ್ಲಾನ್ ಹೊಂದಿದೆ. 999 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಈ ಪ್ಲಾನ್ ಆಕ್ಟಿವ್ ಆಗುತ್ತದೆ. ಪ್ರತಿದಿನ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಹಾಗೂ 100 ಎಸ್‌ಎಂಎಸ್ ಸಿಗಲಿವೆ. 4ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ 98 ದಿನಗಳಲ್ಲಿ 196 ಜಿಬಿ ಡೇಟಾ ಸಿಗುತ್ತದೆ. ರಿಲಯನ್ಸ್ ಜಿಯೋ ಈ ರಿಚಾರ್ಜ್‌ ಪ್ಲಾನ್‌ ಜಿಯೋ ಫ್ಯಾಮಿಲಿ ಆಪ್‌ ನಿಂದ ಲಭ್ಯವಾಗಲಿದೆ.

ಟೆಲಿಕಾಂಗಳ ದರ ಹೆಚ್ಚಳ ವಿರೋಧಿಸಿ ನೆಟ್ಟಿಗರ ಅಭಿಯಾನ, ಲಕ್ಷಕ್ಕೂ ಅಧಿಕ ಮಂದಿ BSNLಗೆ ಸಿಮ್ ಪೋರ್ಟ್!

click me!