
ಬೆಂಗಳೂರು: ಇಂದಿನ ಡಿಜಿಟಲ್ ದುನಿಯಾದಲ್ಲಿ ಬಹುತೇಕರ ಬಳಿಯೂ ಎರಡಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿರುತ್ತಾರೆ. ಆದರೆ ಒಬ್ಬರು ಎಷ್ಟು ಸಿಮ್ ಕಾರ್ಡ್ ಹೊಂದಿರಬೇಕು ಎಂಬುವುದು ಗೊತ್ತಿರಲ್ಲ. ಕೆಲವರು ಎರಡಕ್ಕಿಂತ ಅಧಿಕ ಸಿಮ್ ಕಾರ್ಡ್ ಖರೀದಿಸಿ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುತ್ತಾರೆ. 2023 ರ ದೂರಸಂಪರ್ಕ ಕಾಯ್ದೆ (Telecommunications Act of 2023) ಒಬ್ಬ ವ್ಯಕ್ತಿಯು ಗರಿಷ್ಠ ಎಷ್ಟು ಸಿಮ್ ಕಾರ್ಡ್ ಹೊಂದಬೇಕು ಎಂಬುದನ್ನು ತಿಳಿಸುತ್ತದೆ. ಸಿಮ್ ಸಂಬಂಧ ಕಟ್ಟುನಿಟ್ಟಾದ ನಿಯಮಗಳು ಮತ್ತು ಉಲ್ಲಂಘನೆ ಬಗ್ಗೆ ದೂರಸಂಪರ್ಕ ಕಾಯ್ದೆ ತಿಳಿಸುತ್ತದೆ. ನಿಯಮ ಉಲ್ಲಂಘನೆಗೆ ಶಿಕ್ಷೆ ಅಥವಾ ದಂಡಕ್ಕೆ ಗುರಿಯಾಗಬಹುದು. ಕೆಲವು ಪ್ರಕರಣಗಳಲ್ಲಿ ಎರಡೂ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ಗರಿಷ್ಠ ಎಷ್ಟು ಸಿಮ್ ಕಾರ್ಡ್ ಹೊಂದಬಹುದು?
ಬಳಕೆದಾರ ವಾಸಿಸುವ ಸ್ತಳದ ಆಧಾರದ ಮೇಲೆ ಗರಿಷ್ಠ ಸಿಮ್ ಹೊಂದುವುದನ್ನು ನಿರ್ಧರಿಸಲಾಗುತ್ತದೆ. ಭಾರತದ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಖಾರ್ಡ್ ಖರೀದಿಸಬಹುದಾಗಿದೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಸೂಕ್ಷ್ಮ ಪ್ರದೇಶಗಳಲ್ಲಿ ಈ ಮಿತಿಯನ್ನು ಆರಕ್ಕೆ ಇಳಿಸಲಾಗಿದೆ. ಸಿಮ್ ದುರ್ಬಳಕೆಯನ್ನು ನಿಯಂತ್ರಿಸಲು ಈ ನಿಯಮ ತರಲಾಗಿದೆ.
ನಿಯಮ ಉಲ್ಲಂಘನೆಗೆ ಏನು ಶಿಕ್ಷೆ?
ಓರ್ವ ಬಳಕೆದಾರ ನಿಗದಿತ ಮಿತಿ ಹೆಚ್ಚು ಸಿಮ್ ಹೊಂದುವ ಮೂಲಕ ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡದ್ದರೆ 50 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಮತ್ತೆ ತಪ್ಪು ಮರುಕಳಿಸಿದ್ರೆ ದಂಡದ ಮೊತ್ತ ಏರಿಕೆಯಾಗುತ್ತಾ ಹೋಗುತ್ತವೆ. ದೂರಸಂಪರ್ಕ ಕಾಯ್ದೆಯ ಪ್ರಕಾರ, 2 ಲಕ್ಷದವರೆಗೂ ದಂಡಕ್ಕೆ ತುತ್ತಾಗಬೇಕಾಗುತ್ತದೆ. 2023ರ ಹೊಸ ದೂರಸಂಪರ್ಕ ಕಾಯ್ದೆ, ಸಿಮ್ ಕಾರ್ಡ್ ಖರೀದಿಸುವ ವೇಳೆ ಮಾರಾಟಗಾರ ಹಲವು ಕಠಿಣ ನಿಯಮಗಳನ್ನು ಪಾಲನೆ ಮಾಡಬೇಕು. ಅದೇ ರೀತಿ ಖರೀದಿದಾರ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ನಿಯಮ ಉಲ್ಲಂಘನೆಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಲಕ್ಷ ರೂ ಅಥವಾ ಎರಡೂ ವಿಧಿಸಬಹುದು.
ಸೋಶಿಯಲ್ ಮೀಡಿಯಾ ಬ್ಯಾನ್, ವ್ಯಾಟ್ಸಾಪ್, ಫೇಸ್‌ಬುಕ್ ಸೇರಿ ಎಲ್ಲಾ SM ಪಾಕ್‌ನಲ್ಲಿ 6 ದಿನ ನಿಷೇಧ!
ಸಿಮ್ ಕಾರ್ಡ್ ದುರುಪಯೋಗ ಪತ್ತೆ ಮಾಡೋದು ಹೇಗೆ?
ಟೆಲಿಕಾಂ ಆಪರೇಟರ್‌ಗಳ ಮೂಲಕ ತಮ್ಮ ಹೆಸರಿನಲ್ಲಿ/ ಗುರುತಿನ ದಾಖಲೆಯಡಿ ಎಷ್ಟು ಸಿಮ್ ಕಾರ್ಡ್ ಇದೆ ಎಂಬುದನ್ನ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಹೆಸರಿನಲ್ಲಿ ಬೇರೆಯಾದ್ರೂ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರಾ ಎಂಬುದನ್ನು ತ್ವರಿತವಾಗಿ ತಿಳಿದುಕೊಳ್ಳಲು ಸಾಧ್ಯ. ಟೆಲಿಕಾಂ ಆಪರೇಟರ್ ಗಳನ್ನು ಸಂಪರ್ಕಿಸುವ ಮೂಲಕ ಸಿಮ್ ಬಳಕೆ ಬಗ್ಗೆ ತಿಳಿದುಕೊಳ್ಳಲು ದೂರಸಂಪರ್ಕ ಇಲಾಖೆಯ ಪೋರ್ಟಲ್ ಸಹಾಯ ಮಾಡುತ್ತದೆ.
ಸಿಮ್ ಬಳಕೆಯ ಪರಿಶೀಲನೆ ಮಾಡೋದು ಹೇಗೆ?
ಒಂದು ವೇಳೆ ನಿಮ್ಮ ಬಳಿ ನಿಗಿದಿತಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಹೊಂದಿದ್ದರೆ ದೂರ ಸಂಪರ್ಕ ಇಲಾಖೆ ಬಳಕೆದಾರಿಗೆ 2021ರಿಂದ ಕೆಲವು ಆಯ್ಕೆಗಳನ್ನು ನೀಡುತ್ತದೆ. ಕಾರ್ಡ್ ಸರೆಂಡರ ಮಾಡೋದು, ಸಂಪರ್ಕ ಕಡಿತಗೊಳಿಸೋದು ಮತ್ತು ವರ್ಗಾವಣೆಯ ಆಯ್ಕೆಯನ್ನು (surrender, transfer, or disconnect the excess connections) ನೀಡಲಾಗುತ್ತದೆ. ಇದು ನಿಯಮ ಪಾಲನೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸಿಮ್ ಕಾರ್ಡ್‌ಗಳ ಮರು ಪರಿಶೀಲನೆ ಅಂತ ಕರೆಯಲಾಗುತ್ತದೆ. ಬಳಕೆಯಾಗದ ಸಿಮ್ ಬಗ್ಗೆಯೂ ದೂರ ಸಂಪರ್ಕ ಇಲಾಖೆ ಮಾಹಿತಿ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿರುತ್ತದೆ.
ಕೋಟ್ಯಂತರ ಭಾರತೀಯರ ಮೊಬೈಲ್‌ಗಳಿಗೆ ಹ್ಯಾಕಿಂಗ್ ಭೀತಿ! ಕೇಂದ್ರ ಸರ್ಕಾರ ಕೊಟ್ಟ ಎಚ್ಚರಿಕೆ ಏನು?
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ?
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಎಂಬುದನ್ನು ತಿಳದುಕೊಳ್ಳಲು ದೂರ ಸಂಪರ್ಕ ಇಲಾಖೆ ಸಾಥಿ ಎಂಬ ಪೋರ್ಟಲ್ ಆರಂಭಿಸಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂಬುದನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದು. ಹೇಗೆ ಚೆಕ್ ಮಾಡೋದನ್ನು ಅನ್ನೋದರ ಮಾಹಿತಿ ಇಲ್ಲಿದೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.