ಬಜೆಟ್‌ ಎಫೆಕ್ಟ್‌, ಎಲ್ಲಾ ಐಫೋನ್‌ಗಳ ಬೆಲೆ ಇಳಿಸಿದ ಆಪಲ್‌!

By Santosh Naik  |  First Published Jul 26, 2024, 8:01 PM IST

ಐಫೋನ್‌ನ ಮಾಡೆಲ್‌ಗಳಾದ 13, 14 ಮತ್ತು 15 ಕನಿಷ್ಠ 300 ರೂಪಾಯಿ ಅಗ್ಗವಾಗಿದ್ದು, iPhone ಎಸ್‌ಇ 2300 ಅಗ್ಗವಾಗಲಿದೆ.
 


ನವದೆಹಲಿ (ಜು.26): Apple ತನ್ನ ಸಂಪೂರ್ಣ ಪೋರ್ಟ್‌ಫೋಲಿಯೊ ಐಫೋನ್‌ಗಳ ಬೆಲೆಗಳನ್ನು 3-4% ರಷ್ಟು ಕಡಿತಗೊಳಿಸಿದೆ. ಹಾಗೇನಾದರೂ ಐಫೋನ್‌ ಪ್ರೋ ಅಥವಾ ಪ್ರೋ ಮ್ಯಾಕ್ಸ್‌ ಮಾಡೆಲ್‌ಅನ್ನು ಖರೀದಿ ಮಾಡುತ್ತಿದ್ದರೆ, ಇವುಗಳ ಬೆಲೆಯಲ್ಲಿ ಕ್ರಮವಾಗಿ 5100 ರಿಂದ 6000 ಸಾವಿರ ರೂಪಾಯಿ ಉಳಿಸಬಹುದಾಗಿದೆ. ಇನ್ನು  ಐಫೋನ್‌ನ ಮಾಡೆಲ್‌ಗಳಾದ 13, 14 ಮತ್ತು 15 ಕನಿಷ್ಠ 300 ರೂಪಾಯಿ ಅಗ್ಗವಾಗಿದ್ದು, iPhone ಎಸ್‌ಇ 2300 ಅಗ್ಗವಾಗಲಿದೆ ಎಂದು ಕಂಪನಿ ತಿಳಿಸಿದೆ. ಇದು ಮೊದಲ ಬಾರಿಗೆ ಆಪಲ್ ತನ್ನ ಪ್ರೊ ಮಾದರಿಗಳಿಗೆ ಬೆಲೆಗಳನ್ನು ಕಡಿಮೆ ಮಾಡಿದೆ. ಸಾಮಾನ್ಯವಾಗಿ ಹೊಸ ಪ್ರೋ ಮಾದರಿಯ ಫೋನ್‌ಗಳು ಮಾರುಕಟ್ಟೆಗೆ ಬಂದ ಬಳಿಕ ಈಗಾಗಲೇ ಇರುವ ಐಫೋನ್‌ ಪ್ರೋ ಮಾದರಿಯನ್ನು ನಿಲ್ಲಿಸುತ್ತದೆ.  ಹಳೆಯ ಪ್ರೊ ಮಾಡೆಲ್‌ಗಳ ದಾಸ್ತಾನು ಮಾತ್ರ ವಿತರಕರು ಮತ್ತು ಮರುಮಾರಾಟಗಾರರಿಂದ ಆಯ್ದ ರಿಯಾಯಿತಿಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಪ್ರೊ ಮಾದರಿಗಳ ಗರಿಷ್ಠ ರಿಟೇಲ್‌ ಬೆಲೆಯನ್ನು ಇಲ್ಲಿಯವರೆಗೆ ಕಂಪನಿ ಕಡಿಮೆ ಮಾಡಿರಲಿಲ್ಲ.

ಜುಲೈ 23 ರಂದು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಕೇಂದ್ರ ಬಜೆಟ್ 2024 ರಲ್ಲಿ ಮೊಬೈಲ್ ಫೋನ್‌ಗಳ ಮೂಲ ಕಸ್ಟಮ್ಸ್ ಸುಂಕವನ್ನು 20% ರಿಂದ 15% ಕ್ಕೆ ಇಳಿಸಿದ ನಂತರ ಆಪಲ್ ಈ ಬಾರಿ ಪ್ರೊ ಮಾಡೆಲ್‌ಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಮೊಬೈಲ್ ಫೋನ್‌ಗಳ ಹೊರತಾಗಿ, ಮೊಬೈಲ್ ಫೋನ್ ಚಾರ್ಜರ್‌ಗಳಿಗೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಾಗಿದೆ. 

ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಆಮದು ಮಾಡಿದ ಸ್ಮಾರ್ಟ್‌ಫೋನ್‌ಗಳು 18% ಜಿಎಸ್‌ಟಿ ಮತ್ತು 22% ಕಸ್ಟಮ್ಸ್ ಸುಂಕವನ್ನು ಆಕರ್ಷಿಸುತ್ತವೆ. ಹೆಚ್ಚುವರಿ ಶುಲ್ಕ, ಮೂಲ ಕಸ್ಟಮ್ಸ್ ಸುಂಕದ 10% ಉಳಿಯುತ್ತದೆ. ಬಜೆಟ್‌ನ ಪ್ರಕಾರ ಕಡಿತದ ನಂತರ, ಒಟ್ಟು ಕಸ್ಟಮ್ಸ್ ಸುಂಕವು 16.5% ಆಗಿರುತ್ತದೆ (15% ಮೂಲ ಮತ್ತು 1.5% ಹೆಚ್ಚುವರಿ ಶುಲ್ಕ). ಭಾರತದಲ್ಲಿ ತಯಾರಿಸಿದ ಫೋನ್‌ಗಳ ಸಂದರ್ಭದಲ್ಲಿ, ಕೇವಲ 18% ರಷ್ಟು GST ವಿಧಿಸಲಾಗುತ್ತದೆ.

Tap to resize

Latest Videos

undefined

ಚೆನ್ನೈ ಐಫೋನ್‌ ಫ್ಯಾಕ್ಟ್ರಿಯಲ್ಲಿ ಮದುವೆಯಾದವರಿಗೆ ಕೆಲಸವಿಲ್ಲ..!

ಆಪಲ್‌ ವಿಚಾರದಲ್ಲಿ, ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ 99% ಮೊಬೈಲ್ ಫೋನ್‌ಗಳನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ ಆದರೆ ಆಯ್ದ ಉನ್ನತ-ಮಟ್ಟದ ಮಾದರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ.

ಭಾರತದ ಮೀಮ್ಸ್‌ ಬಳಸಿ ಆ್ಯಪಲ್‌ಗೆ ಟಾಂಗ್‌ ಕೊಟ್ಟ ಟೆಸ್ಲಾದ ಎಲಾನ್‌ ಮಸ್ಕ್‌..!

click me!