Realme GT 2 Launch: 150 ಡಿಗ್ರಿ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ!

By Suvarna News  |  First Published Dec 18, 2021, 10:40 AM IST

Realme GT 2 ಡಿಸೆಂಬರ್‌ 20 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ.  ಕಂಪನಿಯ ಇಂಡಿಯಾ ವೆಬ್‌ಸೈಟ್‌ನಲ್ಲೂ ಕೂಡ ಇದನ್ನು ಸೇರಿಸಲಾಗಿದ್ದು ಭಾರತದಲ್ಲಿ ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.


Tech Desk: ರಿಯಲ್‌ಮಿ ತನ್ನ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್, Realme GT 2 Pro ಅನ್ನು ಡಿಸೆಂಬರ್ 20 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. Realme GT 2 Pro ಜೊತೆಗೆ, ರಿಯಲ್‌ಮಿ,  Vanilla Realme GT 2 ಅನ್ನು ಪರಿಚಯಿಸುವ ನಿರೀಕ್ಷೆಯಿದೆ. Realme GT 2  ಮೊದಲು ಚೀನಾದಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ Realme ಭಾರತದಲ್ಲಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ ಚೀನಾ ಬಿಡುಗಡೆ ನಂತರ ಶೀಘ್ರದಲ್ಲೇ ಭಾರತದಲ್ಲಿನ ಬಿಡುಗಡೆ ಸಾಧ್ಯತೆ ಇದೆ.  Realme GT 2 ಅನ್ನು ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡುವ ಸೂಚನೆ ಇದು ಎಂದು ಟೆಕ್‌ ವಿಶ್ಲೇಷಕರು ಹೇಳಿದ್ದಾರೆ.

Realme GT 2 Specifications 

Tap to resize

Latest Videos

undefined

ಇತ್ತೀಚಿನ ಟೀಸರ್‌ಗಳಲ್ಲಿ, Realme GT 2 ಸರಣಿಯು ಕಾಗದದಂತಹ ವಿನ್ಯಾಸವನ್ನು (paper-like) ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಅದರೊಂದಿಗೆ, Realme GT 2 Pro 150-ಡಿಗ್ರಿ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. Realme GT 2 Pro ನಲ್ಲಿ ಹೊಸದಾಗಿ ಬಿಡುಗಡೆಯಾದ Snapdragon 8 Gen 1 ಪ್ರೊಸೆಸರ್‌ ಇರಲಿದೆ.

Realme GT 2 Pro ನ ಇತರ ವಿವರಗಳನ್ನು ಈ ಹಿಂದಿನ ಲೀಕ್‌ಗಳಲ್ಲಿ ಬಹಿರಂಗಪಡಿಸಲಾಗಿದೆ. ಲೀಕ್ ಪ್ರಕಾರ, Realme GT 2 Pro, 2015 ರ Nexus 6P ಯಂತೆಯೇ ವಿನ್ಯಾಸವನ್ನು ಹೊಂದಿರುತ್ತದೆ. Realme GT 2 Pro 120Hz ರಿಫ್ರೆಶ್ ದರದೊಂದಿಗೆ 6.8-ಇಂಚಿನ WQHD+ OLED ಡಿಸ್ಪ್ಲೇಯನ್ನು ಹೊಂದಿದೆ. ಮೊದಲೇ ಸೂಚಿಸಿದಂತೆ, Realme GT 2 Pro ಸ್ನಾಪ್‌ಡ್ರಾಗನ್ 8 Gen 1 ಚಿಪ್‌ಸೆಟ್‌ನೊಂದಿಗೆ ಬರಲಿದೆ.

Realme GT 2 Pro Storage:

ಈ ಮಾದರಿಯಲ್ಲಿ 30 ಪ್ರತಿಶತದಷ್ಟು ಸುಧಾರಿತ CPU ಕಾರ್ಯಕ್ಷಮತೆ ಮತ್ತು 20 ಪ್ರತಿಶತದವರೆಗೆ ಸುಧಾರಿತ ದಕ್ಷತೆಯ (efficiency) ಜತೆಗೆ ಬರಲಿದೆ ಎಂದು ಕ್ವಾಲ್ಕಾಮ್ (Qualcom) ಹೇಳಿದೆ . Realme GT 2 Pro ಅನ್ನು 12GB RAM ಮತ್ತು 256GB ಯ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ನೀಡುವ ಸಾಧ್ಯತೆಯಿದೆ.

Realme GT 2 Pro Camera:

ಕ್ಯಾಮೆರಾ ವಿಭಾಗದಲ್ಲಿ, 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಸೇರಿದಂತೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ (Tripple Camera) ವ್ಯವಸ್ಥೆಯನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಶೂಟರ್ ಇರಬಹುದು.

Realme GT 2 Pro Battery:

RMX3300 ಮಾದರಿ ಸಂಖ್ಯೆಯೊಂದಿಗೆ Realme GT 2 Pro ಇತ್ತೀಚೆಗೆ ಚೀನಾದ 3C ಯಲ್ಲಿ ಗುರುತಿಸಲ್ಪಟ್ಟಿದೆ. ಹಾಗಾಗಿ ಸ್ಮಾರ್ಟ್ಫೋನ್ 65W ಚಾರ್ಜಿಂಗ್ ಪಡೆಯುತ್ತದೆ ಎಂದು ಇದು ಸೂಚಿಸುತ್ತದೆ. ಅದನ್ನು ಹೊರತುಪಡಿಸಿ, Realme GT 2 Pro 5000mAh ಬ್ಯಾಟರಿಯನ್ನು ಹೊಂದಿದ್ದು Android 12 ರನ್ ಮಾಡಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ:

1) 2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್?

2) Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ?

3) iphone 14 Features Leaked: 48MP ವೈಡ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ ಹೊಸ ಐಫೋನ್?

click me!