2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್?

By Suvarna News  |  First Published Dec 17, 2021, 5:50 PM IST

* 2021ಕ್ಕೆ ವಿದಾಯ ಹೇಳಿ 2022ಕ್ಕೆ ಸ್ವಾಗತ ಕೋರಲು ದಿನಗಣನೆ ಆರಂಭ
* ಹೊಸ ವರ್ಷದಲ್ಲಿ ಹೊಸ ಸ್ಮಾರ್ಟ್‌ಫೋನುಗಳು ಬಿಡುಗಡೆಗೆ ಸಜ್ಜು
* ಅತ್ಯಾಧುನಿಕ ತಂತ್ರಜ್ಞಾನ ಹೊಸ ಫೀಚರ್‌ಗಳೊಂದಿಗೆ ಬರಲಿವೆ ಸ್ಮಾರ್ಟ್‌ಫೋನ್ಸ್
 


ಇನ್ನು ಹದಿನೈದು ದಿನಗಳು ಕಳೆದರೂ ನಾವೆಲ್ಲರೂ ಹೊಸ ವರ್ಷ 2022ರಲ್ಲಿರುತ್ತೇವೆ. ಈಗಾಗಲೇ ಹೊಸ ವರ್ಷ (New Year) ವನ್ನು ಸ್ವಾಗತಿಸಲು ಎಲ್ಲಡೆ ಸಿದ್ಧತೆ ಜೋರಾಗುತ್ತಿದೆ. ಹಾಗೆಯೇ 2021ಕ್ಕೆ ವಿದಾಯ ಹೇಳುವ ದಿನಗಣನೆಯೂ ಆರಂಭವಾಗಿದೆ. ಅದೇ ರೀತಿ, ಹೊಸ ವರ್ಷದಲ್ಲಿ ಯಾವೆಲ್ಲ ಸ್ಮಾರ್ಟ್‌ಫೋನ್‌ (Smartphones)ಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ವರ್ಷಾಂತ್ಯದಲ್ಲಿ ಇದ್ದೇ ಇರುತ್ತದೆ. ಹೊಸ  ತಂತ್ರಜ್ಞಾನ, ಹೊಸ ಫೋನ್‌ಗಳು ಈ ಹೊಸ ವರ್ಷದಲ್ಲಿ ಬಿಡುಗಡೆಯನ್ನು ಕಾಣಲು ಸಜ್ಜಾಗಿವೆ ಎಂದು ಹೇಳಬಹುದು. ಎಂದಿನಂತೆ ಒನ್ ಪ್ಲಸ್ (OnePlus), ಆಪಲ್ (Apple), ಸ್ಯಾಮ್ಸಂಗ್ (Samsung) ಮತ್ತು ಶಿಯೋಮಿ (Xiaomi) ಕಂಪನಿಯ  ಸ್ಮಾರ್ಟ್‌ಫೋನುಗಳನ್ನು ಹೊಸ ವರ್ಷದಲ್ಲಿ ನಿರೀಕ್ಷಿಸಬಹುದಾಗಿದೆ. ಈಗಾಗಲೇ ಈ ಕಂಪನಿಯ ಫೋನುಗಳ ಬಗ್ಗೆ  ಸಾಕಷ್ಟು ಕುತೂಹಲ ಬಳಕೆದಾರರಲ್ಲೂ ಮೂಡಿದೆ. ಬನ್ನಿ ಹಾಗಿದ್ದರೆ, ಹೊಸ ವರ್ಷ 2022ರಲ್ಲಿ ಯಾವೆಲ್ಲ ಫೋನುಗಳ ಬಿಡುಗಡೆಯಾಗಲಿವೆ ಎಂಬುದನ್ನು ನೋಡೋಣ.

ಒನ್‌ಪ್ಲಸ್ 10: ಚೀನಾ ಮೂಲದ ಒನ್‌ಪ್ಲಸ್ ಹೊಸ ವರ್ಷದಲ್ಲಿ ಒನ್‌ಪ್ಲಸ್ 10 ಸೀರೀಸ್ ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡಲಿದೆ. ಇವುಗಳ ಜತೆಗೆ ಬಜೆಟ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ನಾರ್ಡ್ 1 ಸಿಇ (OnePlus Nord 2 CE) ಕೂಡ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಈಗಾಗಲೇ ಒನ್‌ಪ್ಲಸ್ 10 (OnePlus 10) ಸೀರೀಸ್ ಫೋನುಗಳ ಬಗೆಗಿನ ಮಾಹಿತಿಯು ಸಾಕಷ್ಟು ಸೋರಿಕೆಯಾಗಿ ಕುತೂಹಲ ಮೂಡಿಸಿದೆ. ಈ ಸೀರೀಸ್‌ನಲ್ಲಿ ಕಂಪನಿ ಒನ್ ಪ್ಲಸ್ 10 ಮತ್ತು ಒನ್‌ಪ್ಲಸ್ ಪ್ರೋ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಮೊದಲಿಗೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ ಈ ಫೋನುಗಳು. ಆದರೆ, ದಿನಾಂಕ ಮಾತ್ರ ಖಾತ್ರಿ ಇಲ್ಲ.

Tap to resize

Latest Videos

undefined

Apple iPhones: ಆಪಲ್‌ನ ಶೇ.60 ಸಾಧನಗಳಲ್ಲೀಗ iOS 15 

ಐಫೋನ್ 14: ಹೊಸ ವರ್ಷದಲ್ಲಿ ಆಪಲ್ ತನ್ನ ಐಫೋನ್ 14 ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಈಗಾಗಲೇ ಗೊತ್ತಿದೆ. ಬಹುಶಃ ಮುಂಬರುವ ಸೆಪ್ಟೆಂಬರ್‌ನಲ್ಲಿ ಆಪಲ್ ಕಂಪನಿಯು ಈ ಐಫೋನ್ 14 ಸೀರೀಸ್ ಫೋನುಗಳನ್ನು ಲಾಂಚ್ ಮಾಡಬಹುದು. ಬಹುಶಃ ಐಫೋನ್ 14 (iPhone 14), ಐಫೋನ್ 14 ಪ್ರೋ (iPhone 14 Pro), ಐಫೋನ್ 14 ಪ್ರೋ ಮ್ಯಾಕ್ಸ್ (iPhone 14 Pro Max). ಈ ಫೋನುಗಳ ಬಗ್ಗೆ ಸದ್ಯಕ್ಕೆ ಅಷ್ಟೇನೂ ಮಾಹಿತಿಯಂತೂ ಸೋರಿಕೆಯಾಗಿಲ್ಲ. ಮೂಲಗಳ ಪ್ರಕಾರ ಕಂಪನಿಯು ಮಿನಿ ಮಾಡೆಲ್‌ಗಳನ್ನು ಸ್ತಗಿತಗೊಳಿಸಲಿದೆ. 

ಶಿಯೋಮಿ 12: ಚೀನಾ ಮೂಲದ ಮತ್ತೊಂದು ಪ್ರಮುಖ ಕಂಪನಿಯಾಗಿರುವ ಶಿಯೋಮಿ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶಿಯೋಮಿ 12 (Xiaomi 12), ಶೋಯಮಿ 12 ಪ್ರೋ (Xiaomi 12 Pro) ಮತ್ತು ಶಿಯೋಮಿ 12 ಅಲ್ಟ್ರಾ (Xiaomi 12 Ultra) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಫೋನುಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಈ ಪೈಕಿ ಹೆಚ್ಚು ಕುತೂಹಲಕಾರಿಯಾಗಿರುವುದು ಈ ಎಲ್ಲ ಫೋನುಗಳಲ್ಲಿ ಕಂಪನಿಯು ಕ್ವಾಲಕಾಮ್ ಇತ್ತೀಚಿನ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ಗಳು ಇರಲಿವೆ ಎಂಬುದು. 

Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ? 

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22: ಸ್ಯಾಮ್ಸಂಗ್ ಕಂಪನಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 (Samsung Galaxy S22)  ಸ್ಮಾರ್ಟ್‌ಫೋನ್ ಬಿಡುಗಡೆಯೊಂದಿಗೆ ಆರಂಭಿಸುವ ಸಾಧ್ಯತೆ ಇದೆ. ಯಾಕೆಂದರೆ, ಈ ಫೋನು ಜನವರಿಯಲ್ಲಿ ಲಾಂಚ್ ಆಗಬಹುದು. ಒಟ್ಟಾರೆ ಮೂರು ಮಾಡೆಲ್‌ಗಳನ್ನು ಕಂಪನಿಯು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 (Samsung Galaxy S22), ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಪ್ಲಸ್ ( Samsung Galaxy S22+) ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ (Samsung Galaxy S22 Ultra) ಫೋನುಗಳು ಲಾಂಚ್ ಆಗಲಿವೆ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಫೋನುಗಳ ಬಗ್ಗೆ ಹೆಚ್ಚಿನ ಮಾಹಿತಿಗಳೂ ಲಭ್ಯವಿಲ್ಲ ಎನ್ನಬಹುದು. 

click me!