ರಿಯಲ್‌ಮಿ 8 ಪ್ರೋ ಸ್ಮಾರ್ಟ್‌ಫೋನ್‌ ಮಾ.25ಕ್ಕೆ ಬಿಡುಗಡೆ?

By Suvarna News  |  First Published Mar 11, 2021, 3:47 PM IST

ರಿಯಲ್‌ಮಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಟ್ವಿಟರ್‌ನಲ್ಲಿ ಶೇರ್ ಮಾಡಿಕೊಳ್ಳಲಾದ ವಿಡಿಯೋ ಟೀಸರ್‌ನಲ್ಲಿ ಈ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಬಿಟ್ಟು ಕೊಡಲಾಗಿದೆ. ಹಾಗೆಯೇ ಕೆಲವು ಮಾಹಿತಿಗಳ ಪ್ರಕಾರ ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ 25ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
 


ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವ ಚೀನಾ ಮೂಲದ ರಿಯಲ್‌ಮಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಬಗ್ಗೆ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಲಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ಬಹುಶಃ ಈ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ 8 ಪ್ರೋ ಆಗಿರಬಹುದು ಎಂದು ಹೇಳಲಾಗುತ್ತಿದೆ.

BoAt Flash Watch ಬಿಡುಗಡೆ: 6,990 ರೂ. ಬೆಲೆ ವಾಚ್ 2,499 ರೂ.ಗೆ ಮಾರಾಟ!

Tap to resize

Latest Videos

undefined

ಈ ಫೋನ್‌ನಲ್ಲಿ ಅಂಡರ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇರುವ ಸಾಧ್ಯತೆ ಇದೆ. ಈ ಟೀಸರ್‌ನಲ್ಲಿ ಗೊತ್ತಾಗಿರುವ ಮಾಹಿತಿ ಪ್ರಕಾರ ಈ ಹೊಸ ಸ್ಮಾರ್ಟ್‌ಫೋನ್ ಮಾರ್ಚ್ 25ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಈ ಸೀರಿಸ್‌ನಲ್ಲಿ ಮೂರು ಮಾಡೆಲ್‌ಗಳು ಇರುವ ಸಾಧ್ಯತೆ ಇದೆ. ರಿಯಲ್‌ಮಿ 8 4ಜಿ, ರಿಯಲ್‌ಮಿ 8 ಪ್ರೋ ಜಿ ಮತ್ತು ರಿಯಲ್‌ಮಿ 8 ಪ್ರೋ 5ಜಿ ಸ್ಮಾರ್ಟ್‌ ಫೋನ್‌ಗಳು ಇರಲಿವೆ.

ರಿಯಲ್‌ಮಿ ಇಂಡಿಯಾ ಮುಖ್ಯಸ್ಥ ಮಾಧವ್ ಸೇಠ್ ಅವರು ಈ ರಿಯಲ್ 8 ಪ್ರೋ ಸ್ಮಾರ್ಟ್‌ಫೋನ್‌ಗ ಸಂಬಂಧಿಸಿದ ಟೀಸರ್‌ನ್ನೊಳಗೊಂಡ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಮಾರ್ಟ್‌ಫೋನ್‌ನ ಎಲ್ಲ ಆಂಗಲ್‌ಗಳನ್ನು ತೋರಿಸಲಾಗಿದೆ. ಡೇಟ್ ಟು ಲೀಪ್ ಬ್ರಾಂಡಿಂಗ್‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌ನ ಬ್ಯಾಕ್‌ ಪ್ಯಾನೆಲ್, ಸ್ಕ್ವೇರ್ ಆಕಾರದ ಮಾಡೆಲ್‌ನಲ್ಲಿ ನಾಲ್ಕು ಕ್ಯಾಮೆರಾಗಳ ಸೆಟ್‌ ಇದೆ.

ವಿಡಿಯೋದಲ್ಲಿ ತೋರಿಸಲಾಗಿರುವ ಸ್ಮಾರ್ಟ್‌ಫೋನ್‌ನ ಫ್ರಂಟ್‌ನಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇರುವುದನ್ನು ಕಾಣಬಹುದು.  ಸ್ಕ್ರೀನ್ ಮೇಲ್ತುದಿಯ ಎಡಭಾಗದಲ್ಲಿ ಸೆಲ್ಫಿ  ಕ್ಯಾಮೆರಾ ಇರುವ ಕಟೌಟ್‌ ಕಾಣಬಹುದು. ರಿಯಲ್‌ಮಿ 8 ಪ್ರೋ ಸ್ಮಾರ್ಟ್‌ಫೋನ್‌ನ ಬಲ ಬದಿಯ ತುದಿಯಲ್ಲಿ ವ್ಯಾಲ್ಯೂಮ್ ರಾಕರ್ಸ್ ಹಾಗೂ ಪವರ್ ಬಟನ್‌ಗಳಿರುವುದನ್ನು ಕಾಣಬಹುದು. ಈಗ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ರಿಯಲ್‌ಮಿ 8 ಪ್ರೋ ಬ್ಲೂ ಬಣ್ಣದಲ್ಲಿದೆ. ಆದರೆ ಇನ್ನೂ ಹಲವು ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ

ಈ ರಿಯಲ್‌ಮಿ 8 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆಯನ್ನು ಟೀಸರ್ ಬಿಟ್ಟುಕೊಟ್ಟಿದೆ. ಆದರೆ, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೊತ್ತಾಗಬೇಕಿದೆ.

ಇದೇ ವೇಳೆ, ರಿಯಲ್‌ಮಿ ಕಂಪನಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಟಿಪ್ಸಟರ್‌ರೊಬ್ಬರು ಲೀಕ್ ಮಾಡಿರುವ ಮಾಹಿತಿ ಪ್ರಕಾರ, ರಿಯಲ್‌ಮಿ ಕಂಪನಿ ತನ್ನ ಈ ರಿಯಲ್‌ಮಿ ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಮಾರ್ಚ್ 25ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.  ಮುಂದಿನ ಏಳೆಂಟು ದಿನಗಳಲ್ಲಿ ಕಂಪನಿ ಈ ರಿಯಲ್ ಮಿ ಸೀರೀಸ್ ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ ಸುದ್ದಿತಾಣಗಳು ವರದಿ ಮಾಡಿವೆ. ಈ ಟಿಪ್ಸಟರ್ ಅವರು ಸೋರಿಕೆ ಮಾಡಿರುವ ಮಾಹಿತಿ ಪ್ರಕಾರ, ಈ ರಿಯಲ್‌ಮಿ ಸೀರೀಸ್‌ನಲ್ಲಿ ರಿಯಲ್‌ಮಿ 8 4ಜಿ, ರಿಯಲ್‌ಮಿ 8 ಪ್ರೋ 4ಜಿ ಮತ್ತು ರಿಯಲ್‌ಮಿ 8 ಪ್ರೋ 5ಜಿ ಸ್ಮಾರ್ಟ್‌ಗಳು ಇರಲಿವೆ.

ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇವು ಬಜೆಟ್‌  ಫೋನ್‌ಗಳು ಆಗಿರಲಿವೆಯಾ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಆಗಿರಲಿವೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.

LGಯಿಂದ ಹೊಸ ಟಿವಿ ಮಾರುಕಟ್ಟೆಗೆ: ವೀಕ್ಷಣೆ ಜೊತೆ ಗೇಮಿಂಗ್ ಮಜಾ

ರಿಯಲ್‌ಮಿ 8 ಪ್ರೋ ಸ್ಮಾರ್ಟ್ ಫೋನ್‌ ಬಗ್ಗೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಇದು 6.4 ಇಂಚ್ ಸೂಪರ್ ಅಮೋಎಲ್‌ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಮೀಡಿಯಾಟೆಕ್ ಹೆಲಿಯೋ ಜಿ95 ಪ್ರೊಸೆಸರ್ ಇರಲಿದೆ. ಈ ಸ್ಮಾರ್ಟ್‌ಫೋನ್ 5,000 ಎಂಎಚ್ ಬ್ಯಾಟರಿ ಇರಲಿದ್ದು, ಇದು 30 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.

 

click me!