ಮೋಟೋ ಸೀರೀಸ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದ ಮೋಟೋರೊಲಾ ಕಂಪನಿ ಬಳಿಕ ಅನೇಕ ಹೊಸ ನಮೂನೆಯ ಹಾಗೂ ಅತ್ಯಾಧುನಿಕ, ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಬಂದಿದೆ. ಮಾರ್ಚ್ 9ರಂದು ಮೋಟೋ ಜಿ 10 ಪವರ್ ಮತ್ತು ಮೋಟೋ ಜಿ 30 ಎಂಬ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.
ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಾ ಗ್ರಾಹಕರನ್ನು ಸಂತುಷ್ಟಗೊಳಿಸಲು ಮೋಟೋರೊಲಾ ಕಂಪನಿ ಯಶಸ್ವಿಯಾಗಿದೆ. ಇದೀಗ ಕಂಪನಿ ಮಾರ್ಚ್ 9ರಂದು ತನ್ನ ಮತ್ತೆರೆಡು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ
undefined
ಮೋಟೋ ಜಿ10 ಪವರ್ ಮತ್ತು ಮೋಟೋ ಜಿ 30 ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯು ಭಾರತದಲ್ಲಿ ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಮೋಟೋರೊಲಾ ಇಂಡಿಯಾ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಬಹಿರಂಗಗೊಳಿಸಲಾಗಿದೆ. ಇದೇ ಟ್ವೀಟ್‌ನಲ್ಲಿ ಫೋನ್‌ನ ಹಿಂಬದಿ ಮತ್ತು ಮುಂಬದಿಯನ್ನು ತೋರಿಸಲಾಗಿದೆ. ಹಾಗೆಯೇ ಥಿಂಕ್ ಶೀಲ್ಡ್ ಎಂಬ ಸೆಕ್ಯುರಿಟಿಗೆ ಸಂಬಂಧಿಸಿದ ಫೀಚರ್ ಅನ್ನು ಹೈಲೈಟ್ ಮಾಡಲಾಗಿದೆ. ಮೋಟೋರೊಲಾ ಕಂಪನಿಯ ಮೋಟೋ ಜಿ30 ಮತ್ತು ಮೋಟೋ ಜಿ10 ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ 11 ಒಎಸ್ ಇರಲಿದೆ.
ಲೆನೆವೋ ಕಂಪನಿ ಒಡೆತನದ ಮೋಟೋರೊಲಾ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಸರ್ ಬಿಡುಗಡೆ ಮಾಡಿದೆ. ಇದರ ಜೊತೆಗೆ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಕೂಡ, ಮೋಟೋ ಎರಡೂ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಮಾರಾಟಕ್ಕೆ ಲಭ್ಯವಾಗುವತೆ ಮೈಕ್ರೋಸೈಟ್ ರಚಿಸಿದೆ.
LGಯಿಂದ ಹೊಸ ಟಿವಿ ಮಾರುಕಟ್ಟೆಗೆ: ವೀಕ್ಷಣೆ ಜೊತೆ ಗೇಮಿಂಗ್ ಮಜಾ
ಮತ್ತೊಂದು ಸಂಗತಿ ಎಂದರೆ, ಮೋಟೋ ಜಿ10 ಜೊತೆಗೆ ಮೋಟೋ ಜಿ30 ಸ್ಮಾರ್ಟ್‌ಫೋನ್ ಅನ್ನು ಕಂಪನಿ ಈಗಾಗಲೇ ಫೆಬ್ರವರಿ ತಿಂಗಳಲ್ಲೇ ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆದರೆ, ಮೋಟೋ ಜಿ10 ಸ್ಮಾರ್ಟ್‌ಫೋನ್ ಮಾತ್ರವೇ ಈಗ ಬಿಡುಗಡೆಯಾಗುತ್ತಿರುವಂತಿದೆ. ಹಾಗಾಗಿ ಇದು ಹೊಸ ಬ್ರಾಂಡ್ ಎಂದು ಭಾವಿಸಲಾಗಿದೆ. ಮೋಟೋ ಜಿ10 ಪವರ್ ಹಾಗೂ ಮೋಟೋ ಜಿ 20 ಸ್ಮಾರ್ಟ್‌ಫೋನ್‌ಗಳೆರಡೂ ವಾಟರ್‌ಡ್ರಾಪ್ ಸ್ಟೈಲ್ ಡಿಸ್‌ಪ್ಲೇಯನ್ನು ಹೊಂದಿರಲಿವೆ.
ಮೋಟೋರೊಲಾ ಇಂಡಿಯಾ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಟೀಸರ್ ಇಮೇಜ್‌ನಲ್ಲಿನ ಮಾಹಿತಿಯನ್ನು ಗಮನಿಸುವುದಾದರೆ, ಮೋಟೋ ಜಿ10 ಮತ್ತು ಮೋಟೋ ಜಿ30 ಸ್ಮಾರ್ಟ್‌ಫೋನ್‌ಗಳು ವಾಟರ್ ಡ್ರಾಪ್ ಸ್ಟೈಲ್ ಡಿಸ್‌ಪ್ಲೇ ನಾಚ್ ಹೊಂದಿದೆ. ಜೊತೆಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ. ಮೋಟೋ ಜಿ 10 ಪವರ್ ಸ್ಮಾರ್ಟ್‌ಫೋನ್‌ನಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದಿರುವ ಹಾಗಿದೆ. ಹಾಗೆಯೇ ಮೋಟೋ ಜಿ 30 ಸ್ಮಾರ್ಟ್‌ಫೋನ್‌ನಲ್ಲಿ 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಹಾಗೆಯೇ ಮೋಟಿ ಜಿ 10 ಪವರ್ ಸ್ಮಾರ್ಟ್‌ಫೋನ್ ಮೋಟೋ ಜಿ 10 ರೀತಿಯಲ್ಲೇ ಕಾಣುತ್ತದೆ.
ಮೋಟೋರೊಲಾ ಇಂಡಿಯಾ ತನ್ನ ಟೀಸರ್ ಬಿಡುಗಡೆ ಮಾಡಿರುವ ಜೊತೆಗೆ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಡ್ ಇದಕ್ಕಾಗಿ ಮೈಕ್ರೋ ತಾಣವನ್ನು ಸೃಷ್ಟಿಸಿದೆ. ಇದರಲ್ಲಿ ಮೋಟೋರೊಲಾ ಮೋಟೋ ಜಿ 10 ಪವರ್ ಮತ್ತು ಮೋಟೋ ಜಿ 30 ಸ್ಮಾರ್ಟ್‌ಫೋನ್ ಬಿಡುಗಡೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಆದರೆ, ಈ ಫೋನ್‌ಗಳ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಫ್ಲಿಪ್‌ಕಾರ್ಟ್ ಈ ಮೈಕ್ರೋತಾಣದಲ್ಲಿ ಹಂಚಿಕೊಂಡಿಲ್ಲ.
ಪವರ್‌ಫುಲ್ ಬ್ಯಾಟರಿಯ ಜಿಯೋನಿ ಮ್ಯಾಕ್ಸ್ ಪ್ರೋ ಫೋನ್ ಬಿಡುಗಡೆ
ಕೆಲವು ಮಾಹಿತಿಗಳ ಪ್ರಕಾರ, ಮೋಟೋರೊಲಾ ಕಂಪನಿಯ ಮೋಟಿ ಜಿ 10 ಪವರ್ ಹಾಗೂ ಮೋಟೋ ಜಿ 30 ಸ್ಮಾರ್ಟ್‌ಫೋನ್‌ಗಳ ಕೆಲವು ವಿಶೇಷತೆಗಳು ಬಹಿರಂಗವಾಗಿವೆ. ಮೋಟೋ ಜಿ30 ಸ್ಮಾರ್ಟ್‌ಫೋನ್ ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹಾಗಾಗಿ, ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರು ಮೋಟೋ ಜಿ 30 ಸ್ಮಾರ್ಟ್‌ಪೋನ್ 6.5 ಇಂಚ್ ಎಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಒಳಗೊಂಡಿದೆ. ಜೊತೆಗೆ, ಈ ಫೋನ್ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್‌ನೊಂದಿಗೆ ಬರುತ್ತದೆ. 5000 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದ್ದು 10 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.
ಭಾರತದಲ್ಲೇ ಬಿಡುಗಡೆ ಕಾಣುತ್ತಿರುವ ಮೋಟೋ ಜಿ 10 ಪವರ್ ಸ್ಮಾರ್ಟ್‌ಫೋನ್ ವಿಶೇಷತೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲ. ಆದರೆ, ಈ ಫೋನ್‌ನಲ್ಲಿ 6000 ಎಂಎಎಚ್ ಬ್ಯಾಟರಿ ಇದೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟಿದೆ ಎಂಬ ಮಾಹಿತಿಯೂ ಇಲ್ಲ. ಮಾರ್ಚ್ 9ರಂದು ಬಿಡುಗಡೆಯಾಗಲಿರುವುದರಿಂದ ಅದೇ ಈ ಎರಡೂ ಫೋನ್‌ಗಳ ಸಂಪೂರ್ಣ ಮಾಹಿತಿ ಬಳಕೆದಾರರಿಗೆ ಸಿಗಬಹುದು.