ಪವರ್‌ಫುಲ್ ಬ್ಯಾಟರಿಯ ಜಿಯೋನಿ ಮ್ಯಾಕ್ಸ್ ಪ್ರೋ ಫೋನ್ ಬಿಡುಗಡೆ

By Suvarna News  |  First Published Mar 2, 2021, 10:15 AM IST

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಜಿಯೋನಿ ಕಂಪನಿ ತನ್ನ ನೂತನ ಜಿಯೋನಿ ಮ್ಯಾಕ್ಸ್‌ ಪ್ರೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ ಬ್ಯಾಟರಿ ಹಾಗೂ ಡಿಸ್‌ಪ್ಲೇ ಮೂಲಕ ಗಮನ ಸೆಳೆಯುತ್ತಿದೆ. 6,999 ರೂ. ಬೆಲೆ ಇರುವ ಫೋನ್ ಹಲವು ವಿಶಿಷ್ಟ ಫೀಚರ್‌ಗಳನ್ನೂ ಒಳಗೊಂಡಿದೆ.


ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಜಿಯೋನಿ ಭಾರತದಲ್ಲಿ ತನ್ನದೇ ಮಾರುಕಟ್ಟೆಯ ಪಾಲನ್ನು ಹೊಂದಿದ್ದು, ಬಳಕೆದಾರರಿಗೆ ಪ್ರೀಮಿಯಂ ಮತ್ತು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತದೆ. ಭಾರತದಲ್ಲಿ ಮಿಂಚುತ್ತಿರುವ ಚೀನಾ ಮೂಲದ ಕೆಲವು ಕಂಪನಿಗಳ ಪೈಕಿ ಜಿಯೋನಿ ಕೂಡ ಒಂದಾಗಿದೆ. ಈ ಕಂಪನಿಯು ಇದೀಗ ಅತ್ಯಂತ ಪವರ್‌ಫುಲ್ ಬ್ಯಾಟರಿಯೊಂದಿಗೆ ತೀರಾ ಅಗ್ಗದ ದರಕ್ಕೆ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಜಿಯೋನಿ ಮ್ಯಾಕ್ಸ್ ಪ್ರೋ ಎಂಬ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 6,999 ರೂಪಾಯಿ. ಇದು 6000 ಎಂಎಎಚ್ ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದ್ದು 60 ಗಂಟೆಗಳ ಕಾಲ ಟಾಕ್ ಟೈಮ್‌ವಿದೆ. ಹಾಗಾಗಿ, ಇಷ್ಟು ಕಡಿಮೆ ರೇಟ್‌ಗೆ ಈ ಸೆಗ್ಮೆಂಟ್‌ನಲ್ಲಿ ಇಷ್ಟೊಂದು ಪವರ್‌ಫುಲ್ ಬ್ಯಾಟರಿಯನ್ನು ಬೇರೆ ಯಾವ ಕಂಪನಿಯೂ ನೀಡಿದ ಉದಾಹರಣೆ ಇರಲಿಕ್ಕಿಲ್ಲ! ಹಾಗಾಗಿ, ಗ್ರಾಹಕರಿಗೆ 6,999 ರೂಪಾಯಿಯಲ್ಲಿ 6000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇರುವ ಪವರ್‌ಫುಲ್ ಹಾಗೂ ಅತ್ಯಾಧುನಿಕ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್ ಸಿಗುತ್ತಿದೆ.

Tap to resize

Latest Videos

undefined

ಶೀಘ್ರ ಸ್ಯಾಮ್ಸಂಗ್ ಗ್ಯಾಲಕ್ಸಿ A32 ಫೋನ್ ಬಿಡುಗಡೆ: ಕ್ಯಾಮೆರಾ, ಬ್ಯಾಟರಿ ಸೂಪರ್!

ಚೀನಾ ಮೂಲದ ಕಂಪನಿಗಳಿಂದಲೇ ತೀವ್ರ ಪೈಪೋಟಿ ಎದುರಿಸುತ್ತಿರುವ ಜಿಯೋನಿ  ಭಾರತದಲ್ಲಿ ತನ್ನ ಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಹಲವು ಕಂಪನಿಗಳು ತೀರಾ ಕಡಿಮೆ ದರಕ್ಕೆ ಉತ್ಕೃಷ್ಟವಾದ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಇದೇ ನೀತಿಯನ್ನು ಜಿಯೋನಿ ಕೂಡ ಅನುಸರಿಸುತ್ತಿದೆ.

ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಜಿಯೋನಿ ಮ್ಯಾಕ್ಸ್ ಪ್ರೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದ್ದು, ಮಾರ್ಚ್‌ 8ರಿಂದ ಅದು ಮಾರಾಟಕ್ಕೆ ಲಭ್ಯವಾಗಲಿದೆ. ಅಂದರೆ, ಗ್ರಾಹಕರು 8ನೇ ದಿನಾಂಕದಿಂದ ಖರೀದಿಸಬಹುದಾಗಿದೆ. ಈ ಜಿಯೋನಿ ಮ್ಯಾಕ್ಸ್ ಪ್ರೋ ಸ್ಮಾರ್ಟ್‌ಫೋನ್‌ಗೆ 6,999 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. 3 ಜಿಬಿ ರ್ಯಾಮ್ ಮತ್ತು 32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಆಪ್ಷನ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ನೀಲಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಜಿಯೋನಿ ಮ್ಯಾಕ್ಸ್ ಪ್ರೋ ಅನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ಜಿಯೋನಿ ಮ್ಯಾಕ್ಸ್ ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಅಕ್ಟಾ ಕೋರ್ ಯುನಿಸೋಕ್ 9863 ಪ್ರೊಸೆಸರ್ ಇದ್ದು, 3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಇದೆ. ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳ ಸೆಟ್‌ಅಪ್ ಇದೆ. ಈ ಪೈಕಿ ಮೊದಲನೆಯ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ಕ್ಯಾಮೆರಾವಾಗಿದೆ. ಇನ್ನು ಎರಡನೆಯದ್ದು ಬೋಕೆ ಲೆನ್ಸ್‌ನೊಂದಿಗೆ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ.  ಫೋನ್‌ನ ಫ್ರಂಟ್‌ನಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅನ್ನು ಸೆಲ್ಫಿಗಾಗಿ ನೀಡಲಾಗಿದೆ. ಕ್ಯಾಮೆರಾ ದೃಷ್ಟಿಯಿಂದ ಜಿಯೋನಿ ಮ್ಯಾಕ್ಸ್ ಪ್ರೋ ತೀರಾ ಅಂಥ ಗಮನ ಸೆಳೆಯುವುದಿಲ್ಲ ಎಂದು ಹೇಳಬಹುದು.

ವಾಟ್ಸಾಪ್‌ಗೆ 12 ಹರೆಯ, ನಿತ್ಯ ನೂರು ಕೋಟಿ ಕರೆಗಳ ನಿರ್ವಹಣೆ!

ಜಿಯೋನಿ ಮ್ಯಾಕ್ಸ್ ಪ್ರೋ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬಳಕೆದಾರರಿಗೆ ಅತ್ಯಾಧುನಿಕ ಅನುಭವವನ್ನು ನೀಡುತ್ತದೆ. ಈ ಮ್ಯಾಕ್ಸ್ ಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಆಧರಿತವಾಗಿದೆ. 2.5ಡಿ ತಿರುಚಿದ ಗ್ಲಾಸ್‌ ಸ್ಕ್ರೀನ್‌ನೊಂದಿಗೆ ಪೂರ್ಣ ಪ್ರಮಾಣದ ವ್ಯೂ ಡಿಡ್ರಾಪ್‌ 6.52 ಇಂಚ್ ಎಚ್‌ಡಿ ಪ್ಲಸ್‌ ಡಿಸ್‌ಪ್ಲೆಯನ್ನು ಒಳಗೊಂಡಿದೆ.

ಜಿಯೋನಿ ಮ್ಯಾಕ್ಸ್ ಪ್ರೋ ಸ್ಮಾರ್ಟ್‌ಫೋನ್‌ನ ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ 4ಜಿ ಎಲ್ಇಟಿ, ವೈ ಫೈ, ಬ್ಲೂಟೂಥ್, ಜಿಪಿಎಸ್ ಎ-ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜಾಕ್, ಚಾರ್ಜಿಂಗ್‌ಗಾಗಿ ಮೈಕ್ರೋ ಯುಎಸ್‌ಬಿ ಪೋರ್ಟ್ ಸೇರಿದಂತೆ ಆಪ್ಷನ್‌ಗಳಿವೆ. ಗೂಗಲ್ ಅಸಿಸ್ಟೆಂಟ್‌ಗಾಗಿ ಒಂದು ಬಟನ್ ಮತ್ತು ಫೇಸ್‌ಅನ್ಲಾಕ್ ಸೌಲಭ್ಯವನ್ನು ಹೊಂದಿದೆ.

ಈ ಮೊದಲೇ ಹೇಳಿದಂತೆ ಇನ್‌ಬಿಲ್ಟ್ ಆಗಿ ನಿಮಗೆ 32 ಜಿಬಿ ಸ್ಟೋರೇಜ್ ಸಿಗುತ್ತದೆ. ಆದರೆ, ಬಳಕೆದಾರರು ಮೈಕ್ರೋ ಎಸ್ಟ್‌ಡಿ ಕಾರ್ಡ್ ಮೂಲಕ 256 ಜಿಬಿವರೆಗೂ ಜಿಯೋನಿ ಮ್ಯಾಕ್ಸ್ ಪ್ರೋ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಮುಖ್ಯವಾದ ಸಂಗತಿ ಎಂದರೆ, ಕಂಪನಿ ಈ ಫೋನ್‌ನಲ್ಲಿ 6000 ಎಂಎಎಚ್ ಸಾಮರ್ಥ್ಯ ಬ್ಯಾಟರಿಯನ್ನು ಒದಗಿಸಿದೆ ಮತ್ತು ರಿವರ್ಸ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.

ತಮಿಳುನಾಡು, ಕೇರಳದಲ್ಲಿ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ BSNL!

click me!