ಶೀಘ್ರವೇ ಭಾರತದಲ್ಲಿ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ?

By Suvarna News  |  First Published May 26, 2021, 3:45 PM IST

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಪೋಕೋ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ  ಸಾಧ್ಯತೆ ಇದೆ. ಜಾಗತಿಕವಾಗಿ ಬಿಡುಗಡೆ ಕಂಡಿರುವ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್, ಇಂಡಿಯನ್ ಐಎಂಇಐ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ.  ಹಾಗಾಗಿ ಶೀಘ್ರವೇ ಈ ಫೋನ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.


ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತದಲ್ಲಿ ಬಳಕೆದಾರರ ವಲಯವನ್ನು ವಿಸ್ತರಿಸಿಕೊಂಡಿರುವ ಪೋಕೋ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಶಿಯೋಮಿಯ ಸಬ್ ಬ್ರ್ಯಾಂಡ್ ಆಗಿದ್ದ ಚೀನಾ ಮೂಲದ ಪೋಕೋ ಇದೀಗ ಸ್ವತಂತ್ರ ಕಂಪನಿಯಾಗಿದ್ದು, ಹಲವು ವಿಶಿಷ್ಟ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಮುನ್ನುಗ್ಗುತ್ತಿದೆ.

ಕಂಪನಿಯ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಇಂಡಿಯನ್ ಐಎಂಇಐ ಡೇಟಾ ಬೇಸ್‌ನಲ್ಲಿ ಕಾಣಿಸಿಕೊಂಡಿದ್ದು, ಎಂ2103ಕೆ19ಪಿಐ ಮಾಡೆಲ್ ನಂಬರ್‌ ಆಗಿದೆ. ಆದರೆ, ಭಾರತೀಯ ಮಾರುಕಟ್ಟೆಗೆ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ  ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Tap to resize

Latest Videos

undefined

AI ಆಧಾರಿತ ಫೀಚರ್‌ ಇರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ಲಾಂಚ್

ಕಂಪನಿ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲವಾದರೂ ಕೆಲವು ಮೂಲಗಳನ್ನು ಆಧರಿಸಿ ಟ್ವಿಟರ್‌ನಲ್ಲಿ ಟಿಪ್ಸಟರ್‌ಗಳು ಪೋಕೋ ಎಂ3 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಪೋಕೋ ಎಂ3 5ಜಿ ಸ್ಮಾರ್ಟ್‌ಫೋನ್ 6.5 ಇಂಚ್ ‌ಡಿಸ್‌ಪ್ಲೇ  ಮತ್ತು ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು. ಇದು 90Hz ರಿಫ್ರೆಶ್ ರೇಟ್‌ಗೆ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡಿಮೆನ್ಸಿಟಿ 700 ಎಸ್ಒಸಿ ಆಧರಿತವಾಗಿದ್ದು, ಅದು 6 ಜಿಬಿ ರ್ಯಾಮ್ ಒಳಗೊಂಡಿದೆ. ಪೋಕೋ ಕಂಪನಿಯ ಈ ಎಂ3 5ಜಿ ಸ್ಮಾರ್ಟ್‌ಫೋನ್‌ನಲ್ಲಿ 5000 ಎಂಎಂ ಬ್ಯಾಟರಿಯನ್ನು ಕಂಪನಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಟಿಪ್ಸಟರ್ ಮುಕುಲ್ ಶರ್ಮಾ ಅವರು ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಇಂಡಿಯನ್ ಐಎಂಇಐ ಡೇಡಾಬೇಸ್‌ನಲ್ಲಿ ಲಿಸ್ಟಿಂಗ್ ಆಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸ್ಮಾರ್ಟ್‌ಫೋನ್ ಪೋಕೋ ಜಾಗತಿಕ ಮಾರುಕಟ್ಟೆಗೆ ಮೇ 20ರಂದೇ ಲಾಂಚ್ ಮಾಡಿತ್ತು. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ಈ ಫೋನ್ ಬೆಲೆ 149 ಯುರೋ ಆಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು ಅಂದಾಜು 14,200 ರೂಪಾಯಿ ಆಗಬಹುದು.

ಟ್ವಿಟರ್‌ನಲ್ಲಿ ನಿಮ್ಮ ಖಾತೆ ದೃಢೀಕರಣವಾಗಬೇಕಾ? ಹೀಗೆ ಮಾಡಿ

ಇದೇ ವೇಳೆ, ಪೋಕೋ ಎಂ3 5ಜಿ  6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 179 ಯುರೋ. ಅಂದರೆ ಭಾರತದ ರೂಪಾಯಿಯಲ್ಲಿ ಅದು ಸುಮಾರು 16 ಸಾವಿರ ರೂಪಾಯಿನಷ್ಟಾಗುತ್ತದೆ ಎಂದು ಹೇಳಬಹುದು. ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮೂರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಕೂಲ್ ಬ್ಲೂ, ಪವರ್ ಬ್ಲ್ಯಾಕ್ ಮತ್ತು ಪೋಕೋ ಎಲ್ಲೋ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ.

ಈ ಪೋಕೋ ಎಂ3 5ಜಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧರಿತ ಎಂಐಯುಐ 12 ಆಪರೇಟಿಂಗ್‌ ಸಾಫ್ಟ್‌ವೇರ್ ಒಳಗೊಂಡಿದೆ. ಮೊಬೈಲ್ ಸ್ಕ್ರೀನ್ ಹಲವು ರಿಫ್ರೇಶ್ ರೇಟ್‌ಗಳ ನಡುವೆ ಸ್ವಯಂ ಆಗಿ ಬದಲಾಗುವ ಡೈನಾಮಿಕ್ಸ್‌ಸ್ವಿಚ್ ಎಂಬ ಹೊಸ ಫೀಚರ್ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಮೀಡಿಯಾ ಟೆಕ್ ಡಿಮೆನ್ಸಿಟಿ 700 ಎಸ್ಒಸಿ ಆಧರಿತವಾಗಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 6 ಜಿಬಿ ರ್ಯಾಮ್‌ ಇರಲಿದ್ದು, 128 ಜಿಬಿವರೆಗೂ ಸ್ಟೋರೇಜ್ ಸಿಗಲಿದೆ.

ಪೋಕೋ ಎಂ3 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಸೈಡ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಕೊಡಲಾಗಿದೆ. ಹಾಗೆಯೇ ಈ ಫೋನ್‌ 500 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಹಿಂಬದಿಯಲ್ಲಿ ಕ್ಯಾಮೆರಾ ಸೆಟ್‌ಅಪ್ ಇದ್ದು, ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನು ಸೆಲ್ಫಿಗಾಗಿ ಕಂಪನಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಬಹುಶಃ ಈ ಫೋನ್ ಕೈಗೆಟಕುವ ದರದಲ್ಲಿ ಸಿಗಬಹುದು.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

click me!