ಕಡಿಮೆ ಬೆಲೆ ಜೊತೆ ಬೆಂಕಿ ಫೀಚರ್ಸ್‌ನ OnePlus N6x ಬಿಡುಗಡೆ; ಆರಂಭದಲ್ಲಿಯೇ ಡಿಸ್ಕೌಂಟ್

Published : Jul 31, 2026, 04:11 PM IST
OnePlus N6x

ಸಾರಾಂಶ

ಒನ್‌ಪ್ಲಸ್‌ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ OnePlus N6x ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್ 7,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಮತ್ತು ಮೀಡಿಯಾಟೆಕ್ ಡೈಮೆನ್ಸಿಟಿ 6360 ಪ್ರೊಸೆಸರ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ, ಲಭ್ಯತೆ ಮತ್ತು ಆಫರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

OnePlus N6x Smartphone: ಒನ್‌ಪ್ಲಸ್‌ ನ ಹೊಸ ಸ್ಮಾರ್ಟ್‌ಫೋನ್ ಝಲಕ್ ಔಟ್ ಅಗಿದೆ. ಕಡಿಮೆ ದರದಲ್ಲಿ ಅತ್ಯಧಿಕ ಫೀಚರ್ಸ್ ಜೊತೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ. ಈ ಸ್ಮಾರ್ಟ್‌ಫೋನ್ 6.8-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಇದರಲ್ಲಿ ಐ ಪ್ರೊಟೆಕ್ಷನ್ ಮೋಡ್, ಡಾರ್ಕ್ ಮೋಡ್ ಮತ್ತು ಸ್ಕ್ರೀನ್ ಕಲರ್ ಟೆಂಪರೇಚರ್ ಅಡ್ಜಸ್ಟ್‌ಮೆಂಟ್‌ನಂತಹ ಫೀಚರ್‌ಗಳಿವೆ. ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಆಕ್ಟಾ-ಕೋರ್ ಪ್ರೊಸೆಸರ್ ಬಳಸಲಾಗಿದೆ.

ಸ್ಮಾರ್ಟ್‌ಫೋನ್ ಸ್ಟೋರೇಜ್: 4GB RAM ಜೊತೆಗೆ ಗರಿಷ್ಠ 128GB ಸ್ಟೋರೇಜ್ ಸಿಗುತ್ತದೆ. ಗೇಮಿಂಗ್ ಅಥವಾ ಹೆಚ್ಚು ಹೊತ್ತು ಬಳಸುವಾಗ ಫೋನ್ ಬಿಸಿಯಾಗುವುದನ್ನು ತಡೆಯಲು ಕಂಪನಿ ದೊಡ್ಡ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ನೀಡಿದೆ.

ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್

OnePlus N6x ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದರಲ್ಲಿ ಆಟೋ ಫೋಕಸ್ ಮತ್ತು 10x ಡಿಜಿಟಲ್ ಜೂಮ್‌ನಂತಹ ಫೀಚರ್‌ಗಳಿವೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಫೋನ್‌ನಲ್ಲಿ 1080p ರೆಸಲ್ಯೂಶನ್‌ನಲ್ಲಿ 30fps ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆ ಎಂದರೆ 7,000mAh ಸಾಮರ್ಥ್ಯದ Powerful ಬ್ಯಾಟರಿ. ಇದು 15W ಫಾಸ್ಟ್ ಚಾರ್ಜಿಂಗ್ ಜೊತೆಗೆ 5W ರಿವರ್ಸ್ ವೈರ್ಡ್ ಚಾರ್ಜಿಂಗ್ Support ಮಾಡುತ್ತದೆ. ಇದರರ್ಥ ಈ ಸ್ಮಾರ್ಟ್‌ಫೋನ್‌ನಿಂದ ಬೇರೆ ಸಾಧನಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ.

ಎರಡು ಬಣ್ಣಗಳಲ್ಲಿ ಲಭ್ಯ

OnePlus N6x ಡ್ಯುಯಲ್ ಸಿಮ್ ಸಪೋರ್ಟ್‌ನೊಂದಿಗೆ ಬರುತ್ತದೆ. ಇದರಲ್ಲಿ Android 16 ಆಧಾರಿತ OxygenOS 16 ಅನ್ನು ಮೊದಲೇ ಇನ್‌ಸ್ಟಾಲ್ ಮಾಡಲಾಗಿದೆ. ಫೋನ್‌ಗೆ MIL-STD-810H ಡ್ಯೂರಬಿಲಿಟಿ ಸರ್ಟಿಫಿಕೇಶನ್ ಕೂಡ ಸಿಕ್ಕಿದೆ. ಅಂದರೆ, ದೈನಂದಿನ ಬಳಕೆಯಲ್ಲಿ ಹೆಚ್ಚು ಬಾಳಿಕೆ ಬರುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಫೋನ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 214 ಗ್ರಾಂ ತೂಕವಿರುವ ಈ ಫೋನ್, ದೈತ್ಯ ಬ್ಯಾಟರಿಯೊಂದಿಗೆ ಹೆಚ್ಚು ಹೊತ್ತು ಬಳಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ.

ಇದನ್ನೂ ಓದಿ: Digital India: ದೇಶದ ಮೊದಲ ಮೊಬೈಲ್​ಫೋನ್​ ಕರೆಗಿಂದು 31 ವರ್ಷ: ಅಂದು ಕಾಲ್​ ಮಾಡಿದ್ಯಾರು? ಫೋನ್​ ನಡೆದು ಬಂದ ಪಯಣ

ಬೆಲೆ ಎಷ್ಟು? ರಿಯಾಯ್ತಿ ಇದೆಯಾ?

OnePlus N6x ಎರಡು ವೇರಿಯೆಂಟ್‌ಗಳಲ್ಲಿ ಸಿಗಲಿದೆ. 4 GB RAM ಮತ್ತು 64 GB ಸ್ಟೋರೇಜ್ ಮಾದರಿಯ ಬೆಲೆ ₹18,999. ಹಾಗೆಯೇ, 4 GB RAM ಮತ್ತು 128 GB ಸ್ಟೋರೇಜ್ ಮಾದರಿಯ ಬೆಲೆ ₹20,999 ಆಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ₹1,500 ತ್ವರಿತ ರಿಯಾಯಿತಿ ಸಿಗುತ್ತದೆ. ಜೊತೆಗೆ 6 ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಸೌಲಭ್ಯವೂ ಇದೆ. ಈ ಫೋನ್ ಆಗಸ್ಟ್ 4 ರ ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಮತ್ತು ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

ಇದನ್ನೂ ಓದಿ: ಬೈಕ್ ಪ್ರಿಯರಿಗೆ ಹಬ್ಬದ ಬಂಪರ್ ಗಿಫ್ಟ್: 'ಅನ್‌ಟೇಮ್ಡ್ ಟ್ರಿನಿಟಿ' ಸರಣಿಯ 3 ಹೊಸ ಬೈಕ್ ಬಿಡುಗಡೆ ಮಾಡಿದ ಜಾವಾ ಯೆಜ್ಡಿ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಹೇ ಸಿರಿ... ಎಐ ಸೇವೆ ಬಳಸುತ್ತಿರುವ ಐಫೋನ್ ಬಳಕೆದಾರರಿಗೆ ಶಾಕ್ ಕೊಟ್ಟ ಆ್ಯಪಲ್ ಕಂಪನಿ
ಕೇಬಲ್, ಡಿಟಿಎಚ್‌ಗೆ ಗುಡ್‌ಬೈ!: ಕೇವಲ ₹200ಗೆ 20 OTT, ಅನ್‌ಲಿಮಿಟೆಡ್ 5G ತಂದ Vi