
ನವದೆಹಲಿ (ಜು.31) ಭಾರತದಲ್ಲಿ ಐಫೋನ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಪ್ರತಿಷ್ಠೆ ಮಾತ್ರವಲ್ಲ, ಹಲವು ಕಾರಣಗಳಿಂದ ಐಫೋನ್ ಭಾರತೀಯರ ನೆಚ್ಚಿನ ಫೋನ್ ಆಗಿ ಮಾರ್ಪಟ್ಟಿದೆ. ಐಫೋನ್ ಬಳಸುವ ಬಹುತೇಕರು ಹೇ ಸಿರಿ ಎಂದು ಕಮಾಂಡ್ ನೀಡುವುದು ಸಾಮಾನ್ಯ. ಎಐ ಸೇವೆ ಮೂಲಕ ಹಲವು ಬಾರಿ ತಮ್ಮ ಕೆಲಸಗಳನ್ನು ಮಾಡುತ್ತಾರೆ. ಹೇ ಸಿರಿ..ಎಂದು ಕಮಾಂಡ್ ನೀಡಿ ಎಐ ಮೂಲಕ ಸೇವೆಯನ್ನು ಸುಲಭವಾಗಿ ಹಾಗೂ ಮೊಬೈಲ್ ಮುಟ್ಟದೇ ಪಡೆಯಬಹುದು. ಆದರೆ ಹೇ ಸಿರಿ ಸೇವೆ ಬಳಸುವ ಐಫೋನ್ ಬಳಕೆದಾರರಿಗೆ ಆ್ಯಪಲ್ ಕಂಪನಿ ಶಾಕ್ ನೀಡಿದೆ. ಹೇ ಸಿರಿ ಬಳಸುವ ಐಫೋನ್ ಬಳಕೆದಾರರಿಗೆ ಶುಲ್ಕ ವಿಧಿಸಲು ಆ್ಯಪಲ್ ಮುಂದಾಗಿದೆ.
ಆ್ಯಪಲ್ ಈಗಾಗಲೇ ಈ ಕುರಿತು ಮಹತ್ವದ ಸುಳಿವು ನೀಡಿದೆ. ಹೇ ಸಿರಿ ಎಂದು ಎಐ ಟೆಕ್ ಬಳಸುವ ಐಫೋನ್ ಬಳಕೆದಾರರು ಇನ್ನು ಮುಂದೆ ಪಾವತಿ ಮಾಡಬೇಕು. ಆರಂಭಿಕ ಹಂತದಲ್ಲಿ ಅತೀ ಹೆಚ್ಚು ಹೇ ಸಿರಿ ಎಐ ಸೇವೆ ಬಳಕೆ ಮಾಡುವ ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತದೆ. ಹೇ ಸಿರಿಯನ್ನು ಐಕ್ಲೌಡ್ + (iCloud+) ಸಬ್‌ಸ್ಕ್ರಿಪ್ಶನ್ ಅಡಿಯಲ್ಲಿ ತರಲು ಆ್ಯಪಲ್ ಮುಂದಾಗಿದೆ. ಈ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್ ತ್ರೈಮಾಸಿಕ ವರದಿಯಲ್ಲಿ ಸೂಚಿಸಿದ್ದಾರೆ.
ಐಫೋನ್ ಬಳಕೆದಾರರು ಹೇ ಸಿರಿ ಹಾಗೂ ಆ್ಯಪಲ್ ಇಂಟಲಿಜೆನ್ಸ್‌ನ್ನು ಅತೀ ಹೆಚ್ಚು ಬಳಕೆ ಮಾಡುತ್ತಾರೆ ಅನ್ನೋ ಭರವಸೆ ಇದೆ. ಈ ಸೇವೆಗಳನ್ನು ಅತಿಯಾಗಿ ಬಳಸುವ ಬಳಕೆದಾರರಿಗೆ ಆ್ಯಪಲ್ ಐಕ್ಲೌಡ್ ಪ್ಲಸ್ ಮೂಲಕ ಸಬ್‌ಸ್ಕ್ರಿಪ್ಶನ್ ನೀಡಲು ಯೋಜನೆ ರೂಪಿಸಿದ್ದೇವೆ. ವಿವಿಧ ಹಂತಗಳಲ್ಲಿ ಸಬ್‌ಸ್ಕ್ರಿಪ್ಶನ್ ನೀಡಲಾಗುತ್ತದೆ ಎಂದು ಟಿಮ್ ಕುಕ್ ಸೂಚಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಹೇ ಸಿರಿ ಸೇವೆ ಬಳಕೆ ದಿನಕ್ಕೆ, ತಿಂಗಳಿಗೆ ಇಂತಿಷ್ಟೇ ಎಂದು ಮಿತಿ ಹೇರಲಾಗುತ್ತದೆ. ಸದ್ಯ ಮಿತಿ ಎಷ್ಟು ಅನ್ನೋದು ಆ್ಯಪಲ್ ಬಹಿರಂಗಪಡಿಸಿಲ್ಲ. ಉದಾಹರಣೆಗೆ ಒಂದು ದಿನ 10 ಬಾರಿ ಹೇ ಸಿರಿ ಸೇವೆ ಉಚಿತವಾಗಿದ್ದರೆ, 10ಕ್ಕಿಂತ ಹೆಚ್ಚಿನ ಸೇವೆ ಬಳಸಿದರೆ ಶುಲ್ಕ ವಿಧಿಸುವ ಯೋಜನೆಯನ್ನು ರೂಪಿಸಿದ್ದಾರೆ.
ಎಐ ಸೇವೆ, ಡೇಟಾ, ಕಮಾಂಡ್ ಪ್ರೊಸೆಸರ್, ಕ್ಲೌಡ್ ಸರ್ವರ್‌ಗಳಿಂದ ಆ್ಯಪಲ್ ಕಂಪನಿ ವೆಚ್ಚ ಹೆಚ್ಚಾಗುತ್ತಿದೆ. ಇಮೇಜ್ ಜನರೇಶನ್, ಎಐ ಟಾಸ್ಕ್ ನೀಡುವ ಬಳಕೆದಾರಿಗೆ ಡೈಲಿ ಲಿಮಿಟ್ ನೀಡಲಾಗುತ್ತದೆ. ಇತರ ಬಳಕೆಗೆ ಎಐ ಸಿರಿ ಉಚಿತವಾಗಿರಲಿದೆ. ಸಿರಿ ಪ್ಲಸ್‌ನ್ನು ನೇರವಾಗಿ ಆ್ಯಪಲ್ ಐಕ್ಲೌಡ್ ಪ್ಲಸ್ ಜೊತೆ ವಿಲೀನ ಮಾಡಲಾಗುತ್ತದೆ. ಇದರಿಂದ ಐಕ್ಲೌಡ್ ಪ್ಲಸ್ ಸ್ಟೋರೇಜ್ ಪ್ಲಾನ್ ಜೊತೆಗೆ ಹೇ ಸಿರಿ ಸೇವೆಯೂ ಲಭ್ಯವಾಗಲಿದೆ. ಹೆಚ್ಚುವರಿ ಕ್ಲೌಡ್ ಸ್ಟೋರೇಜ್ ಪಡೆಯುವ ಗ್ರಾಹಕರು ಹೆಚ್ಚಿನ ಆ್ಯಪಲ್ ಇಂಟಲಿಜೆನ್ಸ್ ಹಾಗೂ ಎಐ ಸೇವೆ ಪಡೆಯಲಿದ್ದಾರೆ.
ಆ್ಯಪಲ್ ಹೊಸ ಚಂದಾದಾರಿಕೆ ಪ್ಲಾನ್ ಕುರಿತು ಸುಳಿವನ್ನು ಟಿಮ್ ಕುಕ್ ನೀಡಿದ್ದಾರೆ. ಆದರೆ ಪ್ಲಾನ್, ಬೆಲೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಶೀಘ್ರದಲ್ಲೇ ಈ ಕುರಿತು ಅಧಿೃಕೃತ ಘೋಷಣೆ ಹೊರಬೀಳಲಿದೆ. ಐಫೋನ್ 18 ಬಿಡುಗಡೆ ಬೆನ್ನಲ್ಲೇ ಹೊಸ ಸಬ್‌ಸ್ಕ್ರಿಪ್ಶನ್ ಪ್ಲಾನ್ ಬಹಿರಂಗವಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.