Moto G52 ಭಾರತ ಬಿಡುಗಡೆ ದಿನಾಂಕ ಬಹಿರಂಗ: ನಿರೀಕ್ಷಿತ ಬೆಲೆ, ಫೀಚರ್‌ಗಳೇನು?

By Suvarna News  |  First Published Apr 20, 2022, 9:22 AM IST

ಮೊಟೊ ಜಿ52 ಪಂಚ್-ಹೋಲ್ ಡಿಸ್ಪ್ಲೇ, Qualcomm Snapdragon 680SoC ಜೊತೆಗೆ 4GB RAM ಒಳಗೊಂಡಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್  ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. 
 


Moto G52 Launch: ಮೊಟೊ ಜಿ52 ಅಂತಿಮವಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಲೆನೆವೋ ಮಾಲೀಕತ್ವದ ಕಂಪನಿಯು ಭಾರತದಲ್ಲಿ ಮುಂಬರುವ ಸ್ಮಾರ್ಟ್‌ಫೋನ್ ಏಪ್ರಿಲ್ 25 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. Moto G52 ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾದ Moto G51ನ ಉತ್ತರಾಧಿಕಾರಿಯಾಗಿದೆ. Moto G52 ಮಧ್ಯಮ ಶ್ರೇಣಿಯ ಖರೀದಿದಾರರನ್ನು ಗುರಿಯಾಗಿರಿಸಿಕೊಂಡಿದೆ. 

Moto G52 ಮಾತ್ರೆ-ಆಕಾರದ ( Pill-shape) ಕ್ಯಾಮೆರಾ ಮಾಡ್ಯೂಲನ್ನು ಹೊಂದಿದೆ ಆದರೆ ಅದರ ಹಿಂದಿನ ಮಾದರಿಗೆ ಹೋಲಿಸಿದರೆ ಸ್ಲಿಮ್ಮರ್ ಪ್ರೊಫೈಲನ್ನು ಹೊಂದಿದೆ. Moto G52 Qualcomm Snapdragon 680SoC ಪ್ರೊಸೆಸರ್ ಜೊತೆಗೆ 4GB RAM ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. 

Tap to resize

Latest Videos

undefined

ಇದನ್ನೂ ಓದಿ: ಕೇವಲ ಅರ್ಧ ಗಂಟೇಲಿ ಬ್ಯಾಟರಿ ಫುಲ್‌ ಚಾರ್ಜ್: ಭಾರತದಲ್ಲಿ Realme GT Neo 3 ಬಿಡುಗಡೆ ದಿನಾಂಕ ಫಿಕ್ಸ್‌

ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಡಿಸ್ಪ್ಲೇ 90hx ರಿಫ್ರೆಶ್ ದರವನ್ನು ಸಹ ಬೆಂಬಲಿಸುತ್ತದೆ. Moto G52 ನ ನಿರೀಕ್ಷಿತ ಬೆಲೆ ಮತ್ತು ವಿವರವಾದ ಫೀಚರ್ಸ್‌ ಡಿಟೇಲ್ಸ್‌ ಇಲ್ಲಿದೆ 

Moto G52 ಬೆಲೆ ಮತ್ತು ಲಭ್ಯತೆ: Moto G52 ಏಕೈಕ 4GB + 128GB ಸಂಗ್ರಹಣೆಯ ರೂಪಾಂತರಕ್ಕಾಗಿ EUR 249 (ಸುಮಾರು ರೂ. 20,600) ನಲ್ಲಿ ಲಭ್ಯವಿದೆ. ಚಾರ್ಕೋಲ್ ಗ್ರೇ ಮತ್ತು ಪ್ರೋಸಿಲಿನ್ ವೈಟ್ ಸೇರಿದಂತೆ ಎರಡು ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್ಫೋನ್ ನೀಡಲಾಗುತ್ತದೆ. ಇನ್ನು ಚಿಲ್ಲರೆ ಬಾಕ್ಸ್‌ನಲ್ಲಿ ರೂ. 19,999 ಬೆಲೆ ನೀಡಲಾಗಿದೆ ಎಂದು ಟಿಪ್‌ಸ್ಟರ್ಸ್ ಬಹಿರಂಗಪಡಿಸಿದ್ದಾರೆ, ಆದರೆ ಭಾರತದಲ್ಲಿ ಮಾರಾಟದ ಬೆಲೆ ಸುಮಾರು 17,999 ರೂ ಆಗಿರಬಹುದು ಎಂದು ವರದಿಗಳು ಸೂಚಿಸಿವೆ. 

Moto G52 ಫೀಚರ್ಸ್‌: Moto G52 90Hz ರಿಫ್ರೆಶ್ ದರ ಬೆಂಬಲದೊಂದಿಗೆ 6.6-ಇಂಚಿನ Full-HD+ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇಯು 402ppi ಪಿಕ್ಸೆಲ್ ಸಾಂದ್ರತೆ, 87.70 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 20:9 ಆಕಾರ ಅನುಪಾತವನ್ನು ಹೊಂದಿದೆ. Moto G52 ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 680 SoC ಜೊತೆಗೆ 4GB RAM ಮತ್ತು 128GB ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ.

ಇದನ್ನೂ ಓದಿ: ಏ. 27ಕ್ಕೆ iQoo Z6 Pro 5G ಭಾರತದಲ್ಲಿ ಬಿಡುಗಡೆ, ಏನೆಲ್ಲ ವಿಶೇಷತೆ? ಬೆಲೆ ಎಷ್ಟು?

Moto G52 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ, ಇದು f/1.8 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ, ಜೊತೆಗೆ  f/2.2 ಅಪರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಡೆಪ್ತ್ ಸೆನ್ಸಾರ್  ಮತ್ತು f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಒಳಗೊಂಡಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

Moto G52 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 30W ಟರ್ಬೋಪವರ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್ಫೋನ್ IP52 ರೇಟಿಂಗ್  ಹೊಂದಿದೆ ಮತ್ತು Dolby Atmos ಬೆಂಬಲದೊಂದಿಗೆ ಬರುತ್ತದೆ

click me!