10ರಲ್ಲಿ ನಾಲ್ವರು ಭಾರತೀಯರು ಚೀನಾ ಫೋನ್‌ಗೆ ಗುಡ್‌ಬೈ; ಸಮೀಕ್ಷೆ ಬಹಿರಂಗ!

Suvarna News   | Asianet News
Published : Jun 20, 2020, 05:18 PM ISTUpdated : Jun 20, 2020, 05:24 PM IST
10ರಲ್ಲಿ ನಾಲ್ವರು ಭಾರತೀಯರು ಚೀನಾ ಫೋನ್‌ಗೆ ಗುಡ್‌ಬೈ; ಸಮೀಕ್ಷೆ ಬಹಿರಂಗ!

ಸಾರಾಂಶ

ಲಡಾಖ್ ಗಡಿ ಭಾಗದಲ್ಲಿ ಚೀನಾ ಅಕ್ರಮಣ ಬಳಿಕ ಭಾರತದಲ್ಲಿ ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಅಭಿಯಾನ ನಡೆಯುತ್ತಿದೆ. ಇದರ ನಡುವೆ ಸಮೀಕ್ಷೆಯೊಂದು ಬಹಿರಂಗವಾಗಿದ್ದು ಭಾರತಕ್ಕೆ ಪೂರಕವಾಗಿದೆ. ಆದರೆ ಚೀನಾ ಕಂಪನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕುರಿತು ವರದಿ ಇಲ್ಲಿದೆ 

ನವದೆಹಲಿ(ಜೂ.20): ಲಡಾಖ್ ಪ್ರಾಂತ್ಯದಲ್ಲಿ ಚೀನಾ ಆಕ್ರಮಣ, ಭಾರತೀಯ ಯೋಧರು ಹುತಾತ್ಮ ಸೇರಿದಂತೆ ಗಡಿ ಬಿಕ್ಕಟ್ಟಿಗೆ ತಿರುಗೇಟು ನೀಡಲು ಭಾರತ ಸಜ್ಜಾಗಿ ನಿಂತಿದೆ. ಸೇನೆ ಗುಂಡಿನ ಮೂಲಕ ಉತ್ತರ ನೀಡಲು ತಯಾರಿ ನಡೆಸಿದ್ದರೆ, ನಾಗರೀಕರು ಚೀನಿ ವಸ್ತುಗಳನ್ನು ಬಹಿಷ್ಕರಿಸೋ ಮೂಲಕ ಚೀನಾಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಅಭಿಯಾನ, ಪ್ರತಿಭಟನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಬಿಡುಗಡೆಯಾದ ಸಮೀಕ್ಷೆ ವರದಿ ಭಾರತೀಯರಿಗೆ ಮತ್ತಷ್ಟು ಉತ್ತೇಜ ನೀಡಿದೆ.

‘ಬಾಯ್ಕಾಟ್‌’ ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!.

ಕನ್ಸೂಮರ್ ಲೆನ್ಸ್ ಸ್ಟಡಿ ಸಂಸ್ಥೆ ಭಾರತ, ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ ಹಾಗೂ ಅಮೆರಿಕ ದೇಶಗಳಲ್ಲಿ ಸಮೀಕ್ಷೆ ನಡೆಸಿದೆ. ಪ್ರಮುಖವಾಗಿ ಚೀನಾ ಸ್ಮಾರ್ಟ್ ಫೋನ್ ಕುರಿತು ಸಮೀಕ್ಷೆ ನಡೆಸಿದೆ. ಭಾರತದ ಸಮೀಕ್ಷೆಯಲ್ಲಿ ಅರ್ಧದಷ್ಟು ಜನ ಚೀನಾ ವಸ್ತುಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. 10ರಲ್ಲಿ ನಾಲ್ವರು ಭಾರತೀಯರು ಚೀನಾ ವಸ್ತುಗಳಿಗೆ ಗುಡ್ ಬೈ ಹೇಳಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ನೂತನ ಇ ಕಾರ್ಮಸ್ ಪಾಲಿಸಿ ಜಾರಿಗೆ ಸಿದ್ಧತೆ; ಚೀನಾ ಉತ್ಪನ್ನಗಳಿಗೆ ಮೂಗುದಾರ!

ಈ ಸಮೀಕ್ಷೆ ನಡೆಸಿರುವುದು ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿನ ಸಂಘರ್ಷಕ್ಕೂ ಮೊದಲು ನಡೆಸಲಾಗಿದೆ. ಅಂದರೆ ಚೀನಾದ ವುಹಾನ್‌ನಿಂದ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಚೀನಿ ವಸ್ತುಗಳ ವಿರುದ್ಧ ಅಸಮಧಾನ ವ್ಯಕ್ತವಾಗಿತ್ತು. ಈ ವೇಳೆ ಸಮೀಕ್ಷೆ ನಡೆಸಲಾಗಿತ್ತು. ಇದೀಗ ಲಡಾಖ್ ಸಂಘರ್ಷದ ಬಳಿಕ ಸಮೀಕ್ಷೆ ನಡೆಸಿದರೆ. 10 ರಲ್ಲಿ 9 ಭಾರತೀಯ ಚೀನಿ ವಸ್ತುಗಳನ್ನು ಬಹಿಷ್ಕರಿಸಲಿದ್ದಾನೆ ಅನ್ನೋ ಮಾತುಗಳು ಕೇಳಿ ಬಂದಿದೆ.

ಅಮೆರಿಕಾದಲ್ಲಿ ನಡೆಸಿದ ಸಮೀಕ್ಷೆಯಲ್ಲೂ ಚೀನಾ ವಸ್ತುಗಳಿಗೆ ಗುಡ್ ಬೈ ಹೇಳಲು ಜನ ನಿರ್ಧರಿಸಿದ್ದಾರೆ ಅನ್ನೋದು ಬಹಿರಂಗವಾಗಿದೆ. ಅಮೆರಿಕಾದ  ಐವರಲ್ಲಿ ಒಬ್ಬರು ಚೀನಾ ವಸ್ತುಗಳಿಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ