ಭಾರತದಲ್ಲಿ ಆರಂಭವಾಗುತ್ತಿದೆ ವ್ಯಾಟ್ಸ್ಆ್ಯಪ್ ಪೇಮೆಂಟ್ ಸೇವೆ!

Suvarna News   | Asianet News
Published : Jun 19, 2020, 09:47 PM ISTUpdated : Jun 19, 2020, 09:49 PM IST
ಭಾರತದಲ್ಲಿ ಆರಂಭವಾಗುತ್ತಿದೆ ವ್ಯಾಟ್ಸ್ಆ್ಯಪ್ ಪೇಮೆಂಟ್ ಸೇವೆ!

ಸಾರಾಂಶ

ಬ್ರೆಜಿಲ್ ದೇಶದಲ್ಲಿ ವ್ಯಾಟ್ಸ್ಆ್ಯಪ್  ಪೇಮೇಂಟ್ ಸೇವೆ ಆರಂಭಿಸಿದ ವ್ಯಾಟ್ಸಾಪ್ ಇದೀಗ ಭಾರತದಲ್ಲಿ ಸೇವೆ ಆರಂಭಿಸಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.

ನವದೆಹಲಿ(ಜೂ.19):  ಹಣ ಕಳುಹಿಸಲು, ಸ್ವೀಕರಿಸಲು ಹಲವು ಆ್ಯಪ್‌ಗಳು ಲಭ್ಯವಿದೆ. ಗೂಗಲ್ ಆ್ಯಪ್, ಪೇಟಿಎಂ ಸೇರಿದಂತೆ ಕೆಲ ಸೇವೆಗಳು ಪ್ರಸಿದ್ಧಿಯಾಗಿದೆ. ಇದೀಗ ಈ ಆ್ಯಪ್‌ಗಳಿಗೆ ಪ್ರತಿಸ್ಪರ್ಧಿಯಾಗಿ ವ್ಯಾಟ್ಸ್ಆ್ಯಪ್  ಪೇಮೆಂಟ್ ಆರಂಭಗೊಂಡಿದೆ. ಬ್ರೆಜಿಲ್ ದೇಶದಲ್ಲಿ ಆರಂಭಿಸಿರುವ ಈ ಸೇವೆ ಇದೀಗ ಭಾರತದಲ್ಲಿ ಆರಂಭವಾಗುತ್ತಿದೆ. 2018ರಲ್ಲಿ ಈ ಸೇವೆ ಭಾರತದಲ್ಲಿ ಆರಂಭಿಸಲು ವ್ಯಾಟ್ಸಾಪ್ ನಿರ್ಧರಿಸಿತ್ತು. ಇದೀಗ ವ್ಯಾಟ್ಸಾಪ್ ಎಲ್ಲಾ ತಯಾರಿಗಳೊಂದಿಗೆ ಸಜ್ಜಾಗಿದೆ.

ವಾಟ್ಸ್ಆ್ಯಪ್‌ನಲ್ಲಿ ಹಣ ವರ್ಗಾವಣೆ ಸೇವೆ ಆರಂಭ; ಫೋಟೋ ಕಳುಹಿಸಿದಷ್ಟು ಸುಲಭ!..

ವ್ಯಾಟ್ಸ್ಆ್ಯಪ್  ಪೇಮೆಂಟ್ ಆರಂಭಿಸಲು ಆರ್‌ಬಿಐ  ಕೆಲ ಷರತ್ತು ವಿಧಿಸುತ್ತು. ಗ್ರಾಹಕರ ಮಾಹಿತಿ, ಡಾಟಾ ಸೇರಿದಂತೆ ಎಲ್ಲಾ ಮಾಹಿತಿಗಳು ಇಲ್ಲೇ ಶೇಖರಣೆಯಾಗಬೇಕು. ಇಲ್ಲಿನ ಮಾಹಿತಿ ಇತರ ದೇಶದಲ್ಲಿ ಸ್ಟೋರ್ ಆಗುವಂತ ವಿಧಾನ ಇರಬಾರದು ಎಂದಿತ್ತು. ಇದೀಗ ಈ ಕುರಿತು ವ್ಯಾಟ್ಸ್ಆ್ಯಪ್  ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಕಳೆದ 7 ತಿಂಗಳಿನಿಂದ ಇದಕ್ಕಾಗಿ ಕೆಲಸ ಮಾಡಲಾಗಿದೆ ಎಂದಿದೆ.

ಒಂದೇ ವಾಟ್ಸ್‌ಆ್ಯಪ್‌ ಅಕೌಂಟ್‌ ಏಕಕಾಲಕ್ಕೆ 4 ಡಿವೈಸ್‌ನಲ್ಲಿ ಬಳಸಿ!

ಆರ್‌ಬಿಐ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಲಾಗಿದೆ. ಕೇಂದ್ರ ಸರ್ಕಾರದ ಸೈಬರ್ ಸೆಕ್ಯೂರಿಟಿ ವ್ಯಾಟ್ಸ್ಆ್ಯಪ್  ಪೇಮೆಂಟ್ ಕುರಿತು ಪರಿಶೀಲನೆ ನಡೆಸಿದೆ. ಇಷ್ಟೇ ಅಲ್ಲ  ವ್ಯಾಟ್ಸ್ಆ್ಯಪ್  ಕೈಗೊಂಡಿರುವ ಕ್ರಮಗಳ ಕುರಿತು ಸೈಬರ್ ಸೆಕ್ಯೂರಿಟಿ ಗ್ರೀನ್ ಸಿಗ್ನಲ್ ನೀಡಿದೆ. 

2018ರಲ್ಲಿ ವ್ಯಾಟ್ಸ್ಆ್ಯಪ್ ಪೇಮೆಂಟ್ ಭಾರತದಲ್ಲಿ ಆರಂಭಿಸಲು ತಯಾರಿ ನಡೆಸಿತ್ತು. ಆದರೆ ಡಾಡಾ ಲೋಕಲೈಸೇಶನ್‌ಗೆ ಬರೋಬ್ಬರಿ 2 ವರ್ಷಗಳು ಬೇಕಾಗಿದೆ. ವ್ಯಾಟ್ಸ್ಆ್ಯಪ್  ಭಾರತದಲ್ಲಿ ಟಾಟಾ ಲೋಕಲೈಸೇಶನ್ ಮಾಡಲು ಸುದೀರ್ಘ ಅವದಿ ತೆಗೆದುಕೊಳ್ಳಲು ಕಾರಣವಿದೆ. ಭಾರತದಲ್ಲಿ 400 ಮಲಿಯನ್ ವ್ಯಾಟ್ಸ್ಆ್ಯಪ್ ಬಳಕೆದಾರರನ್ನು ಹೊಂದಿದೆ. ಹೀಗಾಗಿ ವ್ಯಾಟ್ಸ್ಆ್ಯಪ್‌ಗೆ ಭಾರತ ಅತೀ ದೊಡ್ಡ ವ್ಯವಹಾರ ಕೇಂದ್ರವಾಗಿ ಮಾರ್ಪಡಲಿದೆ.

2020ರ ಫೆಬ್ರವರಿಯಲ್ಲಿ ನ್ಯಾಷಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ವ್ಯಾಟ್ಸಾಪ್ ಪೇಮೆಂಟ್ ಆರಂಭಿಸಲು ಅನುಮತಿ ನೀಡಿತ್ತು. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ