
ನವದೆಹಲಿ(ಜೂ.19): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಚೀನಾ ವಿರುದ್ಧ ಹಲವು ದೇಶಗಳು ಅಸಮಧಾನ ವ್ಯಕ್ತಪಡಿಸಿದೆ. ಇನ್ನು ಚೀನಾ ಜೊತೆಗಿನ ವ್ಯವಾಹಾರಕ್ಕೆ ಬ್ರೇಕ್ ಹಾಕುತ್ತಿದೆ. ಇತ್ತ ಭಾರತ ಕೂಡ ಚೀನಿ ವಸ್ತುಗಳ ಬಳಕೆ ಮಾಡದಂತೆ ಅಭಿಯಾನ ಆರಂಭಿಸಿತ್ತು. ಲಡಾಖ್ ಗಡಿಯಲ್ಲಿ ಭಾರತೀಯ ಯೋಧರ ಮೇಲಿನ ದಾಳಿ ಬಳಿಕ ಇದೀಗ ಚೀನಾ ಹಾಗೂ ಉತ್ಪನ್ನಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಭಾರತದ ಮೈಕ್ರೋಮ್ಯಾಕ್ಸ್ ಕಂಪನಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.
ಗಲ್ವಾನ್ ನದಿ ತಿರುಗಿಸಲು ಚೀನಾ ಯತ್ನ: ಗ್ರಾಫ್ ಮೂಲಕ ತಿಳಿಸುವ ಪ್ರಯತ್ನವಿದು..!..
ಪ್ರಿಮಿಯಂ ಫೀಚರ್ಸ್, ಮಾಡರ್ನ್ ಲುಕ್ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಇದಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ. ಒಟ್ಟು 3 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಭಾರತದಲ್ಲಿ ಚೀನಾ ಸ್ಮಾರ್ಟ್ ಫೋನ್‌ಗಳ ಅಬ್ಬರ ಹೆಚ್ಚಾದಾಗ ಮೈಕ್ರೋಮ್ಯಾಕ್ಸ್ ಭಾರತದಲ್ಲೇ ಹಿನ್ನಡೆ ಅನುಭವಿಸಿತು. ಹೀಗಾಗಿ 2019 ಅಕ್ಟೋಬರ್ ಬಳಿಕ ಭಾರತದಲ್ಲಿ ಯಾವುದೇ ಫೋನ್ ಬಿಡುಗಡೆ ಮಾಡಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಐಒನ್ ಫೋನ್ ಬಿಡುಗಡೆ ಮಾಡಿತ್ತು. ಇದರ ಬೆಲೆ 8,199 ರೂಪಾಯಿ.
ಗಲ್ವಾನ್ ಆಯ್ತು, ಈಗ ಗೊಗ್ರಾ ಪೋಸ್ಟ್‌ನಲ್ಲಿಯೂ ಚೀನಾ ಅತಿಕ್ರಮಣ
ಮೈಕ್ರೋಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ. ಇದರ ಬೆಲೆ 10,000 ರೂಪಾಯಿ ಒಳಗಿರಲಿದೆ. ಪ್ರಧಾನಿ ನರೇಂದ್ರ ಮೋದಿಯ ವೋಕಲ್ ಫಾರ್ ಲೋಕಲ್ ಅನ್ನೋ ಘೋಷಣೆಯಿಂದ ಇದು ಸಾಧ್ಯವಾಗುತ್ತಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಮೈಕ್ರೋಮ್ಯಾಕ್ಸ್ ಫೋನ್ ಬಿಡುಗಡೆ ಕುರಿತು ಹೇಳಿದೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.