BSNL 4ಜಿಗೆ ಚೀನಾ ಉಪಕರಣ ಬಳಕೆ ನಿಷೇಧ!

By Kannadaprabha NewsFirst Published Jun 18, 2020, 8:03 AM IST
Highlights

ಭಾರತದ ಯೋಧರನ್ನು ಚೀನಾ ಹತ್ಯೆ| BSNL 4ಜಿಗೆ ಚೀನಾ ಉಪಕರಣ ಬಳಕೆ ನಿಷೇಧ!| ಟೆಂಡರ್‌ ಪ್ರಕ್ರಿಯೆಯಲ್ಲಿ ಬದಲಾವಣೆ

ನವದೆಹಲಿ(ಜೂ.18):: ಭಾರತದ ಯೋಧರನ್ನು ಚೀನಾ ಹತ್ಯೆಗೈದ ಬೆನ್ನಲ್ಲೇ, ಬಿಎಸ್‌ಎನ್‌ಎಲ್‌ ಜಾಲವನ್ನು 4ಜಿಗೆ ಉನ್ನತೀಕರಿಸುವ ಪ್ರಕ್ರಿಯೆಯಲ್ಲಿ ಚೀನಾ ಸಲಕರಣೆಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಕರೆಯಲಾಗಿರುವ ಟೆಂಡರ್‌ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಬಿಎಸ್‌ಎನ್‌ಎಲ್‌ಗೆ ಟೆಲಿಕಾಂ ಸಚಿವಾಲಯ ನಿರ್ದೇಶಿಸಲು ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

5 ದಶಕ ತೆಪ್ಪಗಿದ್ದ ಚೀನಾ ಈಗ ಹಿಂಸೆ ನಡೆಸಿದ್ದೇಕೆ?: ಅಕ್ಸಾಯ್‌ಚಿನ್ ರಹಸ್ಯ!

ಇದೇ ವೇಳೆ, ಚೀನಾ ಕಂಪನಿಗಳ ಮೇಲೆ ಅವಲಂಬನೆ ಕಡಿಮೆ ಮಾಡುವಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೂ ಸರ್ಕಾರ ಕೋರುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳಾದ ಭಾರ್ತಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾಗಳು ನೆಟ್‌ವರ್ಕ್ನಲ್ಲಿ ಚೀನಾದ ಹುವೈ ಕಂಪನಿ ಜತೆ ಕೈಜೋಡಿಸಿವೆ. ಬಿಎಸ್‌ಎನ್‌ಎಲ್‌ ಕಂಪನಿಯು ಝಡ್‌ಟಿಇ ಜತೆ ಕೆಲಸ ಮಾಡುತ್ತಿದೆ

click me!