ಜುಲೈ 30ಕ್ಕೆ ಬರ್ತಿದೆ ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್

By Suvarna NewsFirst Published Jul 28, 2021, 1:04 PM IST
Highlights

ದೇಶಿ ಕಂಪನಿ ಎನಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ಮತ್ತೊಂದು ಸ್ಮಾರ್ಟ್‌ಫೋನ್ ಮೂಲಕ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈಗಾಗಲೇ ಐಎನ್ ಸೀರೀಸ್‌ ಮೂಲಕ ನಾಲ್ಕಾರು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದ ಮೈಕ್ರೋಮ್ಯಾಕ್ಸ್, ಇದೀಗ ಹೊಸ ಸ್ಮಾರ್ಟ್‌ಫೋನ್ ಅನ್ನು ಜುಲೈ 30ರಂದು ಬಿಡುಗಡೆ ಮಾಡಲಿದೆ. ಈ ಫೋನ್ ಬಿಡುಗಡೆ ಸಂಬಂಧ ಟೀಸರ್ ವಿಡಿಯೋ ಕೂಡ ಲಾಂಚ್ ಮಾಡಲಾಗಿದೆ. 

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿದೇಶಿ ಬ್ರ್ಯಾಂಡುಗಳ ಕಾರುಬಾರವೇ ಹೆಚ್ಚು. ಸ್ಯಾಮ್ಸಂಗ್, ಶಿಯೋಮಿ, ಒಪ್ಪೋ, ವಿವೋ, ಒನ್‌ಪ್ಲಸ್ ಸೇರಿದಂತೆ ಬಹುತೇಕ ಕಂಪನಿಗಳು ವಿದೇಶದ್ದಾಗಿವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಚೀನಾ ಮೂಲದ ಕಂಪನಿಗಳೇ ಹೆಚ್ಚು ಅಧಿಪತ್ಯವನ್ನು ಸಾಧಿಸಿವೆ. ಇದರ ಮಧ್ಯೆಯೇ ದೇಶಿ ಕಂಪನಿ ಎನಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಲೇ ಇದೆ.

ನೋಕಿಯಾ 110 4ಜಿ ಫೀಚರ್ ಫೋನ್ ಲಾಂಚ್, ಮಾರಾಟ ಶುರು

ಇಂಡಿಯನ್  ಕಂಪನಿ ಎನಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಭರ್ಜಿಯಾಗಿ ಆರಂಭಿಸಿತ್ತು. ಮೈಕ್ರೋಮ್ಯಾಕ್ಸ್ ಐಎನ್ ನೋಟ್ 1, ಐಎನ್ 1ಬಿ ಮತ್ತು ಐಎನ್ 1 ಸ್ಮಾರ್ಟ್‌ಫೋನ್ ಸೀರೀಸ್ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿತ್ತು. ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ಇದೀಗ ಜುಲೈ 30ರಂದು ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಂದಾಗಿದೆ.

ಹೊಸ ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್ ಲಾಂಚ್ ಸಂಬಂಧ ಈಗಾಗಲೇ ಟೀಸರ್ ವಿಡಿಯೋ ಕೂಡ ಹೊರಬಿದ್ದಿದೆ. ಈ ಟೀಸರ್‌ನಲ್ಲಿ ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್‌ನ ವಿನ್ಯಾಸ ಮತ್ತು ಬಣ್ಣಗಳ ವೆರಿಯೆಂಟ್‌ಗಳ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ಅಂದರೆ, ಟೀಸರ್ ವಿಡಿಯೋದಲ್ಲಿ ತೋರಿಸಿರುವ ಹಾಗೆ, ಮೈಕ್ರೋಮ್ಯಾಕ್ಸ್ ಐಎನ್ 2ಬಿ ಮೂರು ಬಣ್ಣಗಳಲ್ಲಿ ಲಾಂಚ್ ಆಗಲಿದೆ. ಈ ಮೂರು ಬಣ್ಣಗಳು- ಕಪ್ಪು, ಹಸಿರು ಮತ್ತು ನೀಲಿ. 

ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ನೀವು ಆಯಾತಕಾರದ ಕ್ಯಾಮೆರಾ ಮಾಡ್ಯೂಲ್ ಇರುವುದನ್ನು ಗಮನಿಸಬಹುದು. ಈ ಮಾಡ್ಯೂಲ್‌ಲ್ಲಿ ಎರಡು ಕ್ಯಾಮೆರಾಗಳು ಹಾಗೂ ಎಲ್‌ಇಡಿ ಫ್ಲ್ಯಾಶ್ ಅಳವಡಿಸಲಾಗಿದೆ. ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು ಸ್ಪೀಕರ್ ಗ್ರಿಲ್‌ಗಳು ಫೋನ್‌ನ ಹಿಂಬದಿಯಲ್ಲಿ ಕಾಣಬಹುದಾಗಿದೆ. ಸ್ಮಾರ್ಟ್‌ಫೋನಿನ ಬಲಬದಿಯಲ್ಲಿ ವಾಲ್ಯೂಮ್ ಬಟನ್ ಮತ್ತು ಪವರ್ ಕೀ ಇರವುದನ್ನು ನೀವು ಟೀಸರ್‌ ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಂಪನಿಯು ವಿಡಿಯೋ ಟೀಸರ್ ಮಾತ್ರವಲ್ಲದೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದಕ್ಕಾಗಿ ಡೆಡಿಕೆಟೆಡ್‌ ಪುಟವೊಂದನ್ನು ಸೃಷ್ಟಿಸಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಬಗೆಗಿನ ಮಾಹಿತಿ ಹಾಗೂ ಅದು ಲಾಂಚ್ ಆಗುವ ದಿನಾಂಕ ಮತ್ತು ಸಮಯದ ಬಗ್ಗೆ ಮಾಹಿತಿ ನೀಡಲಾಗಿದೆ. 

ಈ ಪುಟದಲ್ಲಿ ತೋರಿಸಲಾಗಿರುವ ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್‌ನಲ್ಲಿ ಟಿಯರ್ ಡ್ರಾಪ್ ನಾಚ್ ಡಿಸ್ಪ್ಲೇ ಇರುವುದನ್ನು ಕಾಣಬಹುದು. ಗೇಮಿಂಗ್ ಫೋಕಸ್ಡ್ ಚಿಪ್‌ಸೆಟ್ ಅನ್ನು ಈ ಹೊಸ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಅಂದರೆ, ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್‍ನಲ್ಲಿ ನೀವು ಜಿ52 ಜಿಪಿಯು ಅನ್ನು ಕಾಣಬಹುದು. ಜೊತೆಗೆ 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದ್ದು, 16 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್,  50 ಗಂಟೆ ಟಾಕ್ ಟೈಮ್ ಮತ್ತು 20 ಗಂಟೆ ವೆಬ್‌ಬ್ರೌಸಿಂಗ್, 15 ಗಂಟೆ ವಿಡಿಯೋ ಸ್ಟ್ರೀಮಿಂಗ್  ಅನ್ನು ನೀವು ಸಿಂಗಲ್ ಚಾರ್ಜ್‌ನಲ್ಲಿ ಮಾಡಬಹುದಾಗಿದೆ. 

ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್    

ಯೂನಿಸೋಕ್ ಟಿ6 10 ಚಿಪ್ ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಅದು 1.8 ಗಿಗಾಹರ್ಡ್ಸ್ ಅಕ್ಟಾ-ಕೋರ್ ಪ್ರೊಸೆಸರ್ ಮತ್ತು ಎಆರ್‌ಎಂ ಮಾಲಿ ಜಿ52 ಗ್ರಾಫಿಕ್ಸ್ ಒಳಗೊಂಡಿದೆ. ಇತ್ತೀಚೆಗೆ ಸೋರಿಕೆಯಾದ ಮಾಹಿತಿ ಪ್ರಕಾರ, ಈ ಹೊಸ ಸ್ಮಾರ್ಟ್‍ಫೋನ್, 6.5 ಇಂಚ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಮಾರ್ಟ್‌ಪೋನ್ ಮುಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. 

ಅದೇ ರೀತಿ, ಹಿಂಬದಿಯಲ್ಲಿ ಮೊದಲನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗುತ್ತಿದೆ. ಜೊತೆಗೆ, 64ಜಿಬಿ ಸ್ಟೋರೇಜ್ ಇದ್ದು, ಈ ಸಾಮರ್ಥ್ಯವನ್ನು ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. ಈ ಫೋನ್, 10 ವಾಟ್ ಚಾರ್ಚಿಂಗ್‌ಗೆ ಸಪೋರ್ಟ್ ಮಾಡುತ್ತದೆ.

ಈಗ ಹೊರಬಿದ್ದಿರುವ ಮಾಹಿತಿ ಎಲ್ಲವೂ ಸೋರಿಕೆಯಾಗಿದ್ದು ಇಲ್ಲವೇ ಟೀಸರ್‌ನಲ್ಲಿ ಕಂಡ ಬಂದ ಅಂಶಗಳೇ ಆಗಿವೆ. ಆದರೆ, ಈ ಫೋನ್‌ ಖಚಿತವಾಗಿ ಯಾವೆಲ್ಲ ಫೀಚರ್‌ಗಳನ್ನು ಒಳಗೊಂಡಿವೆ, ಏನೆಲ್ಲ ಸೌಲಭ್ಯಗಳಿವೆ, ಈ ಫೋನ್ ಬೆಲೆ ಎಷ್ಟು  ಎಂಬುದು ಫೋನ್ ಲಾಂಚ್ ಆದ ಬಳಿಕವೇ ಗೊತ್ತಾಗಲಿದೆ ಎಂದು ಹೇಳಬಹುದು.

ಜೆಡ್‌ಟಿಇ ಬ್ಲೇಡ್ ವಿ30, ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್ ಬಿಡುಗಡೆ    

click me!