*ಐಫೋನ್ 12 ಪ್ರೋ ಮೇಲೆ ಭರ್ಜರಿ ಡಿಸ್ಕೌಂಟ್
*ಹಳೆ ಮೊಬೈಲ್ ವಿನಿಮಯಕ್ಕೆ ಮತ್ತೊಂದು ಆಫರ್
*ಅಮೆಜಾನ್ ನೀಡುತ್ತಿದೆ ಭಾರೀ ರಿಯಾಯಿತಿ
ನವದೆಹಲಿ(ಡಿ. 05): ಪ್ರತಿಷ್ಟಿತ ಮೊಬೈಲ್ ಬ್ರ್ಯಾಂಡ್ ಆ್ಯಪಲ್‌ನ (Apple) ಐ-ಫೋನ್ 12 ಸಿರೀಸ್ ಮೊಬೈಲ್ ಭರ್ಜರಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ನೀವು iPhone 12 Pro ಖರೀದಿಸಲು ಯೋಚಿಸುತ್ತಿದ್ದರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ಲ್ಲಿರುವ (Amazon) ಈ ಆಫರ್ ಮಿಸ್ ಮಾಡ್ಕೋಬೇಡಿ. iPhone 12 Pro ಮೊಬೈಲ್ ಮೇಲೆ 25,000 ರೂಪಾಯಿ ರಿಯಾಯಿತಿ ಅಮೆಜಾನ್ ನೀಡುತ್ತಿದೆ. iPhone 12 ಎಲ್ಲಾ ವೇರಿಯಂಟ್‌ಗಳಲ್ಲಿ (Variant) ಈ ರಿಯಾಯಿತಿ ಲಭ್ಯವಿದೆ. ಜತೆಗೆ ನಿಮ್ಮ ಹಳೆಯ ಐಪೋನ್ ವಿನಿಮಯ ಮಾಡಿಕೊಳ್ಳುವುದರ ಮೂಲಕ 15,000 ವರೆಗೆ ಹೆಚ್ಚಿನ ರಿಯಾಯಿತಿ ಕೂಡ ಸಿಗಲಿದೆ. ಇದರರ್ಥ ಬಳಕೆದಾರರು ತಮ್ಮ ಹಳೆಯ ಫೋನ್‌ಗಳನ್ನು ಎಕ್ಶೇಂಜ್ (Mobile Exchange) ಮಾಡುವ ಮೂಲಕ ಐಫೋನ್ 12 ಪ್ರೊ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಐಫೋನ್‌ನಲ್ಲಿ ಸ್ಯಾಟಲೈಟ್ ಕರೆ ಸೌಲಭ್ಯ: ನೆಟ್‌ವರ್ಕ್ ಬೇಕೆಂದಿಲ್ಲ!
undefined
1,19,000 ರೂ ಬೆಲೆಯ 128GBಯ iPhone 12 Pro ಅಮೆಜಾನ್‌ನಲ್ಲಿ 95,900 ರೂ.ಗೆ ಮಾರಾಟವಾಗುತ್ತಿದೆ. 256GBಯ iPhone 12 Pro 99,900 ರೂ ಮತ್ತು 512GBಯ iPhone 12 Pro 1,07,900 ರೂಗಳಲ್ಲಿ ಲಭ್ಯವಿದೆ. 25,000 ರಿಯಾಯಿತಿ ಜೊತೆಗೆ, ಖರೀದಿದಾರರು ತಮ್ಮ ಹಳೆಯ ಫೋನ್‌ಗಳಿಗೆ ವಿನಿಮಯವಾಗಿ 15,400 ರೂಗಳನ್ನು ಸಹ ಪಡೆಯಬಹುದು. ಐಫೋನ್ 12 ಪ್ರೊ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಮೊಬೈಲ್ ಗಳಲ್ಲಿ ಒಂದಾಗಿದೆ. iPhone 12 ಸರಣಿಯನ್ನು 2020 ರಲ್ಲಿ ಆ್ಯಪಲ್ ಬಿಡುಗಡೆ ಮಾಡಿತ್ತು. ಈ ಸರಣಿಯಲ್ಲಿ iPhone 12, iPhone 12 Pro ಮತ್ತು iPhone 12 Pro Max ಮಾರುಕಟ್ಟೆಯಲ್ಲಿ ಲಭ್ಯವಿದೆ.
2024ಕ್ಕೆ ಆ್ಯಪಲ್‌ನ ‘ಕ್ರಾಂತಿಕಾರಿ ಎಲೆಕ್ಟ್ರಿಕ್ ಕಾರ್’!
iPhone 12 Pro ಜೊತೆಗೆ AirPods Pro ಅನ್ನು ಸಹ ಖರೀದಿಸಿದರೆ ಅಮೆಜಾನ್ ನಲ್ಲಿ . ಮೂಲತಃ 1,44,800 ರೂ.ಗಳಿದ್ದ ವೆಚ್ಚವು ಕೇವಲ 1,15,395 ರೂಗಳ ರಿಯಾಯಿತಿ ದರದಲ್ಲಿ ಸಿಗಲಿದೆ. ಹಾಗಾಗಿ ಈ ಯೋಜನೆಯ ಅನ್ವಯ ಐ ಫೋನ್ ಖರೀದಿಸಿದರೆ ನೀವು 28,910 ರೂ.ಗಳ ಉಳಿತಾಯ ಮಾಡಬಹುದು. ಐಫೋನ್ 12 ಪ್ರೋ ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು ಪ್ರತಿ ಬಣ್ಣದ ವೇರಿಯಂಟ್‌ನ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಾಣಬಹುದು. ಈ ಐಫೋನ್ 12 ಪ್ರೊ ಗೋಲ್ಡ್ (Gold), ಗ್ರಾಫೈಟ್ (Graphite), ಪೆಸಿಫಿಕ್ ಬ್ಲ್ಯೂ (Pacific Blue) ಹಾಗೂ ಸಿಲ್ವರ್ (Silver) ಬಣ್ಣಗಳಲ್ಲಿ ಲಭ್ಯವಿದೆ.
ಭಾರತದಲ್ಲಿ ದುಪ್ಪಟ್ಟುಗೊಂಡ ಆಪಲ್ ಬಿಸಿನೆಸ್
ತನ್ನ ಅತ್ಯಾಧುನಿಕ ಐಫೋನ್ (iPhone) ಸ್ಮಾರ್ಟ್‌ಫೋನ್‌ಗಳ ಮೂಲಕವೇ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಆಪಲ್ (Apple)ಗೆ ಭಾರತದಲ್ಲೂ ಒಳ್ಳೆಯ ಹೆಸರಿದೆ. ಪ್ರೀಮಿಯಂ ಫೋನುಗಳ ಮೂಲಕ ಆಪಲ್‌ನ ಭಾರತೀಯ ಮಾರುಕಟ್ಟೆ ವಿಸ್ತಾರಗೊಂಡಿದೆ. ಈ ಹಿನ್ನಲೆಯಲ್ಲೇ ಆಪಲ್ ಬಿಸಿನೆಸ್ ಭಾರತದಲ್ಲೂ ಹೆಚ್ಚಾಗುತ್ತಿದೆ. ಸೆಪ್ಟೆಂಬರ್‌ಗೆ ಮುಕ್ತಾಯವಾದ ತ್ರೈಮಾಸಿಕ ಲೆಕ್ಕಾಚಾರ ಪ್ರಕಾರ, ಆಪಲ್ 83.4 ಬಿಲಿಯನ್ ಡಾಲರ್ ಆದಾಯವನ್ನು ದಾಖಲಿಸಿದೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಆಪಲ್ ಆದಾಯದಲ್ಲಿ ಶೇ.29ರಷ್ಟು ಹೆಚ್ಚು ಆದಂತಾಗಿದೆ. ಅದೇ ರೀತಿ, ಭಾರತೀಯ ಮಾರುಕಟ್ಟೆಗೆ ಸಂಬಂಧಿಸದಂತೆ ಹೇಳುವುದಾದರೆ ಆಪಲ್ (Apple) ತನ್ನ ಆದಾಯವನ್ನು ದುಪ್ಪಟ್ಟುಗೊಳಿಸಿದೆ ಎಂದು ಆಪಲ್ ಸಿಇಒ (CEO) ಟಿಮ್ ಕುಕ್ (Tim Cook) ಖಚಿತಪಡಿಸಿದ್ದಾರೆ.
ತಪ್ಪಾಗಿರುವುದು ನಿಜ: ನೌಕರರ ಕ್ಷಮೆ ಯಾಚಿಸಿದ ಆ್ಯಪಲ್ ಐಫೋನ್ ಘಟಕ
ಭಾರತದಲ್ಲಿ ಈಗ ಹಬ್ಬದ ಸೀಸನ್ ನಡೆಯುತ್ತಿದೆ. ಆನ್‌ಲೈನ್ ಮಾರಾಟ ಭರ್ಜರಿಯಾಗುತ್ತಿದೆ. ಜೊತಗೆ, ಫೋನುಗಳ ಮಾರಾಟಕ್ಕೆ ನೀಡಲಾಗುತ್ತಿರುವ ವಿಶೇಷ ರಿಯಾಯ್ತಿಗಳಿಂದಾಗಿ ಸಹಜವಾಗಿಯೇ ಆಪಲ್‌ನ ಒಟ್ಟು ಆದಾಯದಲ್ಲಿ ದುಪ್ಪಟ್ಟ ಆಗಲು ಕಾರಣ ಎಂದು ಹೇಳಲಾಗುತ್ತಿದೆ.