Infinix Note 11S: ಭಾರತದಲ್ಲಿ ಶೀಘ್ರ ಲಾಂಚ್

By Suvarna NewsFirst Published Nov 28, 2021, 2:52 PM IST
Highlights

ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್ ಮೆಚ್ಚುವವರಿಗೆ ಸಂತಸದ ಸುದ್ದಿ. ಶೀಘ್ರವೇ ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 11 ಎಸ್ (Infinix Note 11S) ಬಿಡುಗಡೆಯಾಗಲಿದೆ. ಈ ಫೋನ್ ಬಗ್ಗೆ ಇನ್ಫಿನಿಕ್ಸ್ ಇಂಡಿಯಾ ಸಿಇಒ ತಮ್ಮ ಟ್ವಿಟರ್ ಖಾತೆಯಲ್ಲಿ ಟೀಸರ್ ಇಮೇಜ್ ಷೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಕಂಪನಿಯ ಮೊದಲ 5ಜಿ ಫೋನ್ ಎನಿಸಿಕೊಳ್ಳಲಿರುವ ಇನ್ಫಿನಿಕ್ಸ್ ಝೀರೋ 5ಜಿ (Infinix Zero 5G) ಸ್ಮಾರ್ಟ್‌ಫೋನ್ ಬಿಡುಗಡೆಗೂ ಕಂಪನಿ ಮುಂದಾಗಿದೆ ಎನ್ನಲಾಗಿದೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಕಂಪನಿಯು ಅತ್ಯಾಧುನಿಕ ಫೀಚರ್‌ಗಳಿರುವ ಕಡಿಮೆ ದರಕ್ಕೆ ಸ್ಮಾರ್ಟ್‌ಫೋನುಗಳನ್ನು ಮಾರಾಟ ಮಾಡುವ ಮೂಲಕ ತನ್ನದೇ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ. ಇದೀಗ ಕಂಪನಿಯು ತನ್ನ ಮೊದಲ 5ಜಿ ಸ್ಮಾರ್ಟ್‌ಫೋನ್ ಇನ್ಫಿಫಿನಿಕ್ಸ್ ಝೀರೋ 5 ಜಿ (Infinix Zero 5G) ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಫೋನ್ ಜೊತೆಗೆ ಕಂಪನಿಯು ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 11 ಎಸ್ (Infinix Note 11 S) ಸ್ಮಾರ್ಟ್‌ಫೋನ್ ಕೂಡ ಲಾಂಚ್ ಮಾಡಲಿದೆ. ಮೂರು  ರ್ಯಾಮ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಕಂಪನಿಯ ಈ ಮೊದಲು ಥಾಯ್ಲೆಂಡ್‌ನಲ್ಲಿ ಲಾಂಚ್ ಫೋನ್ ಮಾಡಿತ್ತು. ಈಗ ಅದೇ ಫೋನ್ ಅನ್ನು ಕಂಪನಿಯು ಭಾರತೀಯ ಮಾರುಕಟ್ಟೆಗೆ ಇನ್ಫಿನಿಕ್ಸ್ ನೋಟ್ 11 ಎಸ್ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ. ಇದು  ಬಜೆಟ್ ಫೋನ್. ಮೀಡಿಯಾಟೆಕ್ ಟೆಕ್ ಹೆಲಿಯೋ ಜಿ96 (MediaTek Helio G96 SoC) ಪ್ರೊಸೆಸರ್ ಹೊಂದಿರುವ ಈ ಫೋನ್ ಲಾಂಚ್ ಬಗ್ಗೆ ಕಂಪನಿಯ ಸಿಇಒ ಟೀಸರ್ ಹಂಚಿಕೊಂಡಿದ್ದಾರೆ.

The world is a battlefield, it's time to & own the game!

For all the gamers in the house, get ready because there's something special coming soon. pic.twitter.com/07oaQszaq7

— Anish Kapoor (@AnishKapoor16)

ಇನ್ಫಿನಿಕ್ಸ್ ಇಂಡಿಯಾ (Infinix India) ಸಿಇಒ ಅನೀಶ್ ಕಪೂರ್ (Anish Kapoor) ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಇನ್ಫಿನಿಕ್ಸ್ ನೋಟ್ 11 ಎಸ್ (Infinix 11 Note S) ಸ್ಮಾರ್ಟ್‌ಫೋನ್ ಇಮೇಜ್ ಟೀಸರ್ ಷೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಗೊತ್ತಾಗಿರುವ ಮಾಹಿತಿಯ ಪ್ರಕಾರ ಈ ಹೊಸ ಫೋನ್ ಗೇಮಿಂಗ್ ಫೋನ್ ಆಗಿರಬಹುದು ಎಂದು ಹೇಳಲಾಗುತ್ತದೆ. ಅವರು ಷೇರ್ ಮಾಡಿಕೊಂಡಿರುವ ಚಿತ್ರದಲ್ಲಿ ಸ್ಮಾರ್ಟ್‌ಫೋನ್ ರಿಟೇಲ್ ಬಾಕ್ಸ್ ತೋರಿಸಲಾಗಿದೆ ಮತ್ತು ಟ್ವೀಟ್‌ನಲ್ಲಿ For all the gamers in the house, get ready because there's something special coming soon ಎಂದು  ಬರೆದುಕೊಳ್ಳಲಾಗಿದೆ. ಆ ಮೂಲಕ ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್ ಗೇಮಿಂಗ್ ಹೆಚ್ಚು ನೆರವು ನೀಡಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Best Laptops for Students: 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

ಇನ್ಫಿನಿಕ್ಸ್ ನೋಟ್ 11 ಎಸ್ ಸ್ಮಾರ್ಟ್‌ಫೋನ್ 6.95 ಇಂಚ್ ಫುಲ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಪರೇಟಿಂಗ್ ಸಾಫ್ಟ್‌ವೇರ್ ಆಧಾರಿತವಾಗಿದೆ. ಈ ಫೋನಿನಲ್ಲಿ ನೀವು ಮೀಡಿಯಾಟೆಕ್ ಹೆಲಿಯೋ ಜಿ96 (MediaTek Helio G96 SoC) ಪ್ರೊಸೆಸರ್‌ ಕಾಣಬಹುದು. ಇದಕ್ಕೆ 8 ಜಿಬಿ ರ್ಯಾಮ್ ಸಂಯೋಜಿಸಲಾಗಿದೆ ಮತ್ತು ಕಂಪನಿಯ 128 ಜಿಬಿ ಸ್ಟೋರೇಜ್ ಒದಗಿಸಿದೆ. ಒಂದು ವೇಳೆ ಬಳಕೆದಾರರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ಟೋರೇಜ್ ಅಗತ್ಯವಾದರೆ, ಕಂಪನಿಯು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಒದಗಿಸಿದ್ದು, ಮೆಮೊರಿಯ ಸಾಮರ್ಥ್ಯವನ್ನು 2 ಟಿಬಿಯವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ. 

ಭಾರತದಲ್ಲಿ ಬಿಡುಗಡೆಯಾಗಲಿರುವ ಇನ್ಫಿನಿಕ್ಸ್ ನೋಟ್ 11 ಎಸ್ (Infinix Note 11S) ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ನೀವು ಮೂರು ಕ್ಯಾಮೆರಾಗಳ ಸೆಟ್‌ಅಪ್ ನೋಡಬಹುದು. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಮತ್ತು ಉಳಿದ ಎರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ ಫೋನ್ ಮುಂಬದಿಯಲ್ಲಿ 16 ಎಂಪಿ ಕ್ಯಾಮೆರಾ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ ಇನ್ನೂ ದಿನಾಂಕ ಗೊತ್ತಾಗಿಲ್ಲ.

Mobile Launch: ಮುಂದಿನ ತಿಂಗಳು ಭಾರತದಲ್ಲಿ OnePlus RT ಬಿಡುಗಡೆ ಸಾಧ್ಯತೆ

click me!