Best Mobile Phones Under 15K: ಭಾರತದಲ್ಲಿ ರೂ 15,000ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಫೋನ್‌ಗಳು!

By Suvarna News  |  First Published Dec 1, 2021, 3:19 PM IST

15,000 ರೂ.ಗಳ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ಜನಪ್ರಿಯ ಆಯ್ಕೆಗಳಿವೆ. ಈ ಪಟ್ಟಿಗೆ ಈಗ 5G ಬೆಂಬಲವನ್ನು ನೀಡುವ ಕೆಲವು  ಮೊಬೈಲ್‌ ಫೋನ್‌ ಕೂಡ ಸೇರಿವೆ. ನೀವು ರೂ. 15,000 ಒಳಗಿನ ಅತ್ಯುತ್ತಮ ಮೊಬೈಲ್ ಫೋನ್‌ಗಾಗಿ ಹುಡುಕಾಟದಲ್ಲಿದ್ದರೆ, 15,000 ರು ಗಿಂತ ಕಡಿಮೆ ರೇಂಜ್‌ನಲ್ಲಿರುವ ಈ ಟಾಪ್ ಫೋನ್‌ಗಳ ಪಟ್ಟಿಯನ್ನು ನೋಡಲೇಬೇಕು


15,000 ರೂ.ಗಳ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ಜನಪ್ರಿಯ ಆಯ್ಕೆಗಳಿವೆ. ಈ ಪಟ್ಟಿಗೆ ಈಗ 5G ಬೆಂಬಲವನ್ನು ನೀಡುವ ಕೆಲವು  ಮೊಬೈಲ್‌ ಫೋನ್‌ ಕೂಡ ಸೇರಿವೆ. ನೀವು ರೂ. 15,000 ಒಳಗಿನ ಅತ್ಯುತ್ತಮ ಮೊಬೈಲ್ ಫೋನ್‌ಗಾಗಿ ಹುಡುಕಾಟದಲ್ಲಿದ್ದರೆ, 15,000 ರು ಗಿಂತ ಕಡಿಮೆ ರೇಂಜ್‌ನಲ್ಲಿರುವ ಈ ಟಾಪ್ ಫೋನ್‌ಗಳ ಪಟ್ಟಿಯನ್ನು ನೋಡಲೇಬೇಕು. ಈ ಫೋನ್‌ಗಳನ್ನು ನೀವು ಖರೀದಿಸಬಹುದು ಅಥವಾ ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಶಿಫಾರಸು ಮಾಡಬಹುದು. ಉತ್ತಮ ಕ್ಯಾಮೆರಾ ಮತ್ತು ಬ್ಯಾಟರಿ ಹಾಗೂ ಸಖತ್ ಗೇಮಿಂಗ್ ಎಕ್ಸಪಿರಿಯನ್ಸ್‌ ಅನುಭವವನ್ನು ನೀಡುವ ರೂ 15,000 ಕ್ಕಿಂತ ಕಡಿಮೆ ಬೆಲೆಯ ಮೊಬೈಲ್ ಫೋನ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

Poco M3 Pro, Moto G30 ಮತ್ತು ಇತರ ಕೆಲವು ಸ್ಮಾರ್ಟ್‌ಫೋನ್‌ಗಳು ಉತ್ತಮವಾಗಿದ್ದು, ಹಣಕ್ಕೆ ಯೋಗ್ಯವಾದ ಮೌಲ್ಯವನ್ನು ನೀಡುತ್ತವೆ. ಇದಲ್ಲದೆ, ಈ ಪಟ್ಟಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಫ್ರೆಶ್ ರೇಟ್ ಡಿಸ್‌ಪ್ಲೇಗಳು (Refresh Rate Display), ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ (High Resolution Camera), ವೇಗದ ಚಾರ್ಜಿಂಗ್ ಮತ್ತು (Fast Charging) ಕೆಲವು  ವಿಶೇಷ ವೈಶಿಷ್ಟ್ಯಗಳೊಂದಿಗೆ (Special Features) ಬರುತ್ತವೆ. ಈ ಹಿಂದೆ ಕೇವಲ ಉನ್ನತ-ಮಟ್ಟದ ಸಾಧನಗಳಿಗೆ ಸೀಮಿತವಾಗಿದ್ದ ಈ ಫೀಚರ್‌ಗಳು ಈಗ ಅಗ್ಗ ಬೆಲೆಯ ಮೊಬೈಲ್‌ನಲ್ಲೂ ಕಾಣಸಿಗುತ್ತಿವೆ. ಹಾಗಾದರೆ ಭಾರತದಲ್ಲಿ 15000 ರೂ. ಒಳಗಿನ ಟಾಪ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ!

Latest Videos

undefined

Poco M3 Pro 5G

Poco M3 Pro 5G 6.55-ಇಂಚಿನ FHD+ ಡಿಸ್ಪ್ಲೇ ಜೊತೆಗೆ 90Hz ಹೆಚ್ಚಿನ ರಿಫ್ರೆಶ್ ದರವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್‌ನ ಡೈಮೆಸಿಟಿ 700 SoC ( octa-core Mediatek's) ಪ್ರೋಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, Poco M3 Pro 5G 48-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ (Tripple Rear Camera setup) ಮತ್ತು ಸೆಲ್ಫಿಗಳಿಗಾಗಿ 8-ಮೆಗಾಪಿಕ್ಸೆಲ್ ಸೆನ್ಸ್‌ರ್ ಹೊಂದಿದೆ. Poco M3 Pro 5G 18W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಪ್ರಸ್ತುತ, Poco M3 Pro 5G ಅನ್ನು ರೂ 14,499 ಗೆ ಖರೀದಿಸಬಹುದು.

Infinix Note 11S: ಭಾರತದಲ್ಲಿ ಶೀಘ್ರ ಲಾಂಚ್

Moto G30

Motorola G30, ಮೋಟೋ ಬ್ರಾಂಡ್‌ನಿಂದ 10,999 ರೂಗಳಲ್ಲಿ ಬಜೆಟ್ ಮೊಬೈಲ್‌ ಫೋನ್‌ ಆಗಿದೆ. ಸ್ಮಾರ್ಟ್ಫೋನ್ 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. ಇದು 2GHz ನಲ್ಲಿ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್‌ನಿಂದ (Snapdragon 662 chipset) ಚಾಲಿತವಾಗಿದೆ. ಮೋಬೈಲ್ 4GB RAM ಮತ್ತು 64GB ಆಂತರಿಕ ಸ್ಟೋರೆಜ್‌ (Internal Storage) ಹೊಂದಿದ್ದು, ಇದನ್ನು ಮೈಕ್ರೋ-SD ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. Moto G30 64-ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ (Quad Rear Camera) ಸಿಸ್ಟಮ್ ಮತ್ತು ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 13-ಮೆಗಾಪಿಕ್ಸೆಲ್ ಶೂಟರ್ ಅನ್ನು ಹೊಂದಿದೆ. ಸ್ಮಾರ್ಟ್‌ ಫೋನ್ 20W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನ ಇದೆ.

Screen Glass Protector:ಇನ್ನು ಫೋನ್ ಸ್ಕ್ರೀನ್ ಒಡೆಯಲ್ಲ ಬಿಡಿ, ಬರ್ತಿದೆ ಅಲ್ಟ್ರಾಹಾರ್ಡ್ ಗ್ಲಾಸ್!

Realme Narzo 30 5G

Realme Narzo 5G ಈ ಪಟ್ಟಿಯಲ್ಲಿ ಮತ್ತೊಂದು 5G ಸ್ಮಾರ್ಟ್‌ಫೋನ್.  4GB RAM ಮತ್ತು 64GB ಸ್ಟೋರೇಜ್ ವೆರಿಯಂಟ್ ರೂ 14,999 ನಲ್ಲಿ ಲಭ್ಯವಿದೆ. Realme Narzo 30 5G 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ FHD+ IPS LCD ಪ್ಯಾನೆಲ್ ಅನ್ನು ಹೊಂದಿದೆ. ಇದು Poco M3 Pro ನಂತೆಯೇ ಡೈಮೆನ್ಸಿಟಿ 700 SoC (Dimensity 700 SoC) ನಿಂದ ಚಾಲಿತವಾಗಿದೆ. ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

Redmi Note 10S

ಈ ಪಟ್ಟಿಯಲ್ಲಿರುವ ಅಂತಿಮ ಸಾಧನವು Redmi Note 10 ಲೈನ್‌ಅಪ್‌ನಿಂದ ಕೂಡಿದೆ. ಸ್ಮಾರ್ಟ್‌ಫೋನ್ 6.43-ಇಂಚಿನ AMOLED ಪ್ಯಾನೆಲ್‌ ಹೊಂದಿದ್ದು  60Hz ಸ್ಟಾಂಡರ್ಡ್ ರಿಫ್ರೆಶ್ ದರ ಹೊಂದಿದೆ. ಇದು 2.05 GHz MediaTek Helio G95 SoC ನೊಂದಿಗೆ ಚಾಲಿತವಾಗಿದೆ. ಮೊಬೈಲ್‌ ಫೋನ್ 6GB RAM ಮತ್ತು 128GB ವರೆಗೆ  ಆಂತರಿಕ ಸ್ಟೋರೆಜ್ ಹೊಂದಿದೆ. ಇದು 64-ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು ಸೆಲ್ಫಿಗಳಿಗಾಗಿ 13ಮೆಗಾಪಿಕ್ಸೆಲ್ ಶೂಟರ್ ಅನ್ನು ಹೊಂದಿದೆ. Redmi Note 10S 33W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

click me!